ಕಾರವಾರ-ವಿದ್ಯುತ್ ತಂತಿ ಸ್ಪರ್ಶ ರೈತರ ಭತ್ತದ ಹುಲ್ಲಿನಿ ಬಣವೆ ಗೆ ಬೆಂಕಿ: ಲಕ್ಷಾಂತರ ರೂಪಾಯಿ ಹಾನಿ

513

ಕಾರವಾರ :-ವಿದ್ಯುತ್ ತಂತಿ ಸ್ಪರ್ಶಿಸಿ ರೈತರ ಭತ್ತದ ಹುಲ್ಲಿನಿ ಬಣವೆಗೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಹಾನಿಯಾದ ಘಟನೆ ಕಾರವಾರತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರ್ಗಲ್ ಗ್ರಾಮದ ಕವಲಮಕ್ಕಿಯಲ್ಲಿ ನಡೆದಿದೆ.

ವಿಪರೀತ ಗಾಳಿಯಿಂದ ವಿದ್ಯುತ್ ತಂತಿ ಭಾಗಿ ಒಂದೇ ಕಡೆ ಸ್ಪರ್ಶಿಸುವುದರ ಮೂಲಕ ಘಟನೆ ನಡೆದಿದ್ದು, ಬರ್ಗಲ್ ಗ್ರಾಮದ ನಾಲ್ವರ ರೈತರ ಒಳಪಡುವ ಒಂದೇ ಗದ್ದೆಯಲ್ಲಿ 9000 ಭತ್ತದ ಹುಲ್ಲು ಬೊನೆಯು ಸಂಪೂರ್ಣ ಬೆಂಕಿ ಬಿದ್ದರಿಂದ ಅಂದಾಜು ಮೌಲ್ಯ 2 ಲಕ್ಷ ನಷ್ಟವಾಗಿದೆ ಅಂದಾಜಿಸಲಾಗಿದೆ.

ಹೆಸ್ಕಾಂ ಇಲಾಖೆ ನಿರ್ಲಕ್ಷ :ರೈತರ ಹಿಡಿ ಶಾಪ-

ಈ ರೀತಿಯಾಗಿ ಪದೇ ಪದೇ ಘಟನೆ ನಡೆಯುತ್ತಿದೆ, ಕೆಲವು ವರ್ಷಗಳ ಹಿಂದೆಯೂ ಭಾರಿ ಗಾಳಿಯಿಂದ ತಂತಿ ಭಾಗಿ ಇದೇ ರೀತಿಯ ಘಟನೆ ಸಂಭವಿಸಿತ್ತು. ಆದರೆ ಸಂಬಂಧ ಪಟ್ಟ ಅಧಿಕಾರಿಗಳು ಜಾಗ ಪರಿಶೀಲನೆ ಮಾಡುವುದನ್ನು ಬಿಟ್ಟರೆ ಅವರಿಗೆ ಯಾವುದೇ ಒಂದು ನಯಾ ಪೈಸೆ ಪರಿಹಾರ ನೀಡಲಿಲ್ಲ ಎಂದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬರ್ಗಲ್ ಗ್ರಾಮದ ರೈತರು ಮೊದಲಿಂದಲೂ ಕೃಷಿಗೆ ತೊಡಗಿಕೊಂಡಿದವರು ಆ ವರ್ಷ ಸುರಿದ ಭಾರಿ ಮಳೆ ಪ್ರವಾಹದಿಂದ ಭತ್ತದ ಬೆಳೆಯು ಹಾನಿಯಾಗಿ ಆರ್ಥಿಕ ಸಂಕಷ್ಟಗೆ ಸಿಲುಕಿದ್ದರು.

ಪರಿಹಾರ ಸಿಗದಿದ್ದರೂ ಸಾಲ ಸೋಲ ಮಾಡಿ ಭತ್ತದ ಬೆಳೆಯನ್ನು ಬೆಳೆಸಿದ್ದು ಈಗ ಈ ರೀತಿ ಘಟನೆ ನಡೆದಿದ್ದು ಜಾನುವಾರಿಗೆ ಸಹ ಮೇವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಸೂಕ್ತ ಪರಿಹಾರ ಸಹ ಅಧಿಕಾರಿಗಳು ನೀಡುವುದಿಲ್ಲ,ಪದೇ ಪದೇ ಈ ರೀತಿಯ ಘಟನೆ ನಡೆಯುತ್ತಿರುವುದರಿಂದಾಗಿ ರೈತ ಆತ್ಮಹತ್ಯೆ ಮಾಡಿಕೊಳ್ಳವ ಸ್ಥಿತಿಗೆ ಬಂದಿದ್ದಾನೆ. ಈ ಕುರಿತು ತಕ್ಷಣ ಪರಿಹಾರ ನೀಡಿ ನೊಂದವರಿಗೆ ಸಹಾಯ ಮಾಡಬೇಕು ಎಂದು ಬೆಂಕಿಯಿಂದ ನಷ್ಟ ಅನುಭವಿಸಿದ ದತ್ತ ಗುನಗಿ ಆಗ್ರಹಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!