ಶಿರಸಿಯಲ್ಲಿ ತಂತಿ ಉರುಲಿಗೆ ಸಿಲುಕಿ ಚಿರತೆ ಸಾವು.-ಕಾಡು ಪ್ರಾಣಿ ಭೇಟೆಗೆ ಇಟ್ಟ ಉರುಳಿಗೆ ಬಲಿಯಾದ ಅಪರೂಪದ ಕಪ್ಪು ಚಿರತೆ.

1914

ಕಾರವಾರ:-ಕಾಡು ಪ್ರಾಣಿಗಳನ್ನು ಹಿಡಿಯಲು ಹಾಕಿದ್ದ ತಂತಿಯ ಉರುಳಿಗೆ ಅಪರೂಪದ ನಾಲ್ಕು ವರ್ಷದ ಕಪ್ಪು ಚಿರತೆ ಸಿಲುಕಿ ಮೃತಪಟ್ಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಗ್ರಾಮದ ಮಂಟಕಾಲ ರಸ್ತೆ ಯಲ್ಲಿ ಇಂದು ನಡೆದಿದೆ.

ಇಂದು ಬೆಳಗ್ಗೆ ಉರುಲಿಗೆ ಸಿಲುಕಿದ್ದ ಚಿರತೆ ಒದ್ದಾಡುವುದನ್ನು ನೋಡಿದ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ತಿಳಸಿದ್ದಾರೆ.

ತಕ್ಷಣದಲ್ಲಿ ಬನವಾಸಿ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಲು ಸ್ಥಳಕ್ಕೆ ಆಗಮಿಸಿದ್ದರು. ಆದರೇ ರಕ್ಷಣೆ ಮಾಡುವುದರೊಳಗೆ ಚಿರತೆ ಸಾವನ್ನಪ್ಪಿದೆ. ಮಲೆನಾಡು ಭಾಗದಲ್ಲಿ ಇದೇ ಮೊದಲಬಾರಿ ಕಪ್ಪು ಚಿರತೆ ಇರುವುದು ಪತ್ತೆಯಾಗಿದೆ. ಚಿರತೆ ಕಳೆಬರಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಚಿರತೆ ವಿಡಿಯೊ ನೋಡಿ.

ಇನ್ನು ಕಾಡು ಪ್ರಾಣಿ ಭೇಟೆಗೆ ಯಾರು ಉರಲು ಹಾಕಿದ್ದಾರೆ ಎಂಬ ತನಿಖೆಯನ್ನು ಅರಣ್ಯಾಧಿಕಾರಿಗಳು ಕೈಗೊಂಡಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!