BREAKING NEWS
Search

ಕಾರವಾರ ದಲ್ಲಿ ರೋಡ್ ಶೋ ಮಾಡಿದ ಅಂಜಲಿ ಆ ನಿಯಮ ಪಾಲಿಸುವುದನ್ನು ಮಾತ್ರ ಮರೆಯಲಿಲ್ಲ ! ಏನದು.?

46

ELECTION News:- ರಾಜಕಾರಣಿಗಳು ಚುನಾವಣೆ ಬಂದಾಗ ರೋಡ್ ಶೋ ಗಳನ್ನ ಮಾಡೋದು ಸಾಮಾನ್ಯ . ಆದ್ರೆ ಇಂದು ಕಾರವಾರದಲ್ಲಿ ಮತಯಾಚನೆಗಾಗಿ ರೋಡ್ ಶೋ ಮಾಡಿದ ಕಾಂಗ್ರೆಸ್ (congress ) ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಸಂಚಾರಿ ನಿಯಮ( traffic rules) ಪಾಲಿಸುವ ಮೂಲಕ ಮಾದರಿಯಾದರು.

ಹೌದು ಇಂದು ಹಮ್ಮಿಕೊಂಡಿದ್ದ ರೋಡ್ ಶೋ ನಲ್ಲಿ ಕಡ್ಡಾಯವಾಗಿ ತಲೆಗೆ ಹೆಲ್ಮೆಟ್ ಧರಿಸಿಯೇ ಸ್ಕೂಟಿ ಚಲಾಯಿಸಿದರು. ಈ ಮಾತನ್ನು ಏಕೆ ಹೇಳಬೇಕಾಯ್ತ ಎಂದರೇ ಬಹುತೇಕ ರಾಜಕಾರಣಿಗಳು ರೋಡ್ ಶೋ ಎಂದಾಗ ತಮ್ಮ ಮುಖ ಚನ್ನಾಗಿ ಕಾಣಲಿ ಎಂದು ನ್ಯಾಯಾಲಯದ ಆದೇಶವಿದ್ದರೂ ಹೆಲ್ಮೆಟ್ ( helmet) ಧರಿಸದೇ ಸಂಚಾರ ನಿಯಮವನ್ನು ಗಾಳಿಗೆ ತೂರುತ್ತಾರೆ.

ಸಂಚಾರಿ ನಿಯಮ ಪಾಲಿಸದ ಅನಂತಕುಮಾರ್ ಹೆಗಡೆ

ಕಾರವಾರ ನಗರದ ಮಿತ್ರ ಸಮಾಜ ಮೈದಾನದಿಂದ ಆರಂಭವಾದ ಬೈಕ್ ರ್ಯಾಲಿಯಲ್ಲಿ ಸಾವಿರಾರು ಯುವಕರು ಪಾಲ್ಗೊಂಡರು. ಯುವಕರೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಹಾಗೂ ಶಾಸಕ ಸತೀಶ್ ಸೈಲ್ ಕೂಡ ಬೈಕ್‌ನಲ್ಲಿ ಸಾಗಿ ಗಮನ ಸೆಳೆದರು.

ಮಿತ್ರ ಸಮಾಜ- ಕಾಜುಬಾಗ- ಕೋಡಿಬಾಗ ರಸ್ತೆ ಮೂಲಕ ಟೋಲ್‌ನಾಕಾ, ಸುಂಕೇರಿ ರಸ್ತೆ ಮೂಲಕ ಪುನಃ ಮಿತ್ರ ಸಮಾಜದಲ್ಲಿ ರ್ಯಾಲಿ ಸಮಾಪ್ತಿಗೊಂಡಿತು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!