Uttara Kannada district rain damage may 16

Uttra Kannada| ಜಿಲ್ಲೆಯಲ್ಲಿ ಭಾರಿ ಮಳೆ ಎಲ್ಲೆಲ್ಲಿ ಅನಾಹುತ ವಿವರ ನೋಡಿ.

165
GILANI super market karwar KSRTC bus stand near Karwar

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಭಾರಿ ಮಳೆ ಹಲವು ಪ್ರದೇಶದಲ್ಲಿ ಅನಾಹುತ ಸೃಷ್ಟಿ ಮಾಡಿದೆ.

ಜಿಲ್ಲೆಯ ಕಾರವಾರ ,ಅಂಕೋಲ, ಯಲ್ಲಾಪುರ , ಸಿದ್ದಾಪುರ ಭಾಗದಲ್ಲಿ ಹೆಚ್ಚು ಮಳೆಯಾಗಿದೆ‌ . ಇನ್ನು ಕುಮಟಾ ದಲ್ಲಿ ಅಲ್ಪ ಮಳೆಯಾದರೇ ,ಜೋಯಿಡಾ,ಹಳಿಯಾಳ,ದಾಂಡೇಲಿ ಭಾಗದಲ್ಲಿ ಮೋಡಕವಿದ ವಾತಾವರಣ ಮುಂದುವರೆದಿದೆ. ಉಳಿದ ಭಾಗದಲ್ಲಿ ತುಂತುರು ಮಳೆಯಾಗಿದ್ದು ಭಟ್ಕಳ ಭಾಗದಲ್ಲಿ ಸಂಜೆಯವರೆಗೂ ಬಿಸಿಲ ಹೊಡೆತ ಜೋರಾಗಿತ್ತು.

ಎಲ್ಲೆಲ್ಲಿ ಅನಾಹುತ?

ಸಿದ್ದಾಪುರ ತಾಲೂಕಿನಲ್ಲಿ ಗುರುವಾರ ಮಧ್ಯಾಹ್ನ ಸುರಿದ ಭಾರಿ ಗಾಳಿ ಮಳೆ ಯಿಂದಾಗಿ ಸಿದ್ದಾಪುರ ಕುಮಟಾ ಮುಖ್ಯ ರಸ್ತೆಯ ಡೊಂಬೆ ಕೈ ಕ್ರಾಪ್ ಸಮೀಪ ವಿರುವ ಕಡಲೆ ಆಂಜನೇಯ ದೇವಾಲಯದ ಎದುರಿನ ಅರಳಿ ಮರ ರಸ್ತೆಗೆ ಉರುಳಿ ಬಿದ್ದ ಪರಿಣಾಮ ಕೆಲ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ನಂತರ
ಹೆಸ್ಕಾಂ ಇಲಾಖೆ ಸಿಬ್ಬಂದಿಗಳು ಸ್ಥಳೀಯ ಸಾರ್ವಜನಿಕರ ಸಹಕಾರದೊಂದಿಗೆ ರಸ್ತೆಗೆ ಬಿದ್ದ ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

ಯಲ್ಲಾಪುರ ಪಟ್ಟಣದಲ್ಲಿ ಸುರಿದ ಭಾರೀ ಮಳೆಗೆ ಮುಂಡಗೋಡ ರಸ್ತೆಯಲ್ಲಿರುವ ವೈ.ಟಿ.ಎಸ್.ಎಸ್. ಪ್ರೌಢಶಾಲೆಯ ಕಟ್ಟಡದ ಮೇಲೆ ಭಾರೀ ಗಾತ್ರದ ಮರ ಬಿದ್ದು ಅಪಾರ ಹಾನಿ ಉಂಟಾಗಿದೆ. ಮರ ಬಿದ್ದ ಪರಿಣಾಮ ತರಗತಿಯ ಕೊಠಡಿಯ ಮೇಲ್ಛಾವಣಿಗೆ ಸಂಪೂರ್ಣ ಹಾನಿಯಾಗಿದ್ದು, ಹಂಚುಗಳು ಪುಡಿಪುಡಿಯಾಗಿವೆ. ಇನ್ನೊಂದು ಕೊಠಡಿಗೆ ಅಲ್ಪ ಪ್ರಮಾಣದ ಹಾನಿಯಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!