Uttrakannada Rain| ಜಿಲ್ಲೆಯ ಹಲವು ಭಾಗದಲ್ಲಿ ಮಳೆ ಅಬ್ಬರ| ಎಲ್ಲಿ ಏನಾಯ್ತು ವಿವರ ನೋಡಿ.

Karnataka Rain report Karnataka Rain report
GILANI super market karwar KSRTC bus stand near Karwar
Gilani super market karwar
1000594993

Weather report:-ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಧಾರಾವಾಡ, ಹಾವೇರಿ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಮಂಡ್ಯ, ರಾಮನಗರ, ಶಿವಮೊಗ್ಗ ಜಿಲ್ಲೆಯಲ್ಲಿ 6 ರಿಂದ 11 ಸೆಂ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿತ್ತು.

ಅದರಂತೆ ಶಿವಮೊಗ್ಗ, ಸಾಗರ ಸೇರಿದಂತೆ ಹಲವು ಭಾಗದಲ್ಲಿ ಮಳೆ ಸುರಿದರೇ ಉತ್ತರ ಕನ್ನಡ ಜಿಲ್ಲೆಯ ಶಿರಸಿ ,ಸಿದ್ದಾಪುರ ಭಾಗದಲ್ಲಿ ಮಂಗಳವಾರ ಗುಡುಗು,ಗಾಳಿ ಸಹಿತ ಅಬ್ಬರದ ಮಳೆ ಸುರಿದಿದೆ.
ಇನ್ನು ಕುಮಟಾ, ಹೊನ್ನಾವರ ಭಾಗದಲ್ಲಿ ಅಲ್ಪ ಮಳೆಯಾಗಿದ್ದು ಯಲ್ಲಾಪುರ, ಮುಂಡಗೋಡು ,ಭಟ್ಕಳ ಸೇರಿದ ಹಲವು ಭಾಗದಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿದೆ.

ಇನ್ನು ಶಿರಸಿಯ ಸಹ್ಯಾದ್ರಿ ಕಲೋನಿ ಸೇರಿದಂತೆ ಕೆಲವು ಭಾಗಗಳಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. ಈ ಕಾರಣದಿಂದ ಶಿರಸಿ ನಗರದಾದ್ಯಂತ ರಾತ್ರಿ 10 ಘಂಟೆ ವರೆಗೆ ವಿದ್ಯುತ್ ವ್ಯತ್ಯಯವಾಗಿದೆ.

Advertisement

ಇದನ್ನೂ ಓದಿ:-ಮುಂಡಗೋಡಿನಲ್ಲಿ ಸಿಗುವ ಜಂಗಲ್ ಜಿಲೇಬಿ ಹುಳಸೆ ಬಗ್ಗೆ ಗೊತ್ತಾ! ನೀವು ಒಮ್ಮೆ ಟ್ರಯ್ ಮಾಡಿ

ಇನ್ನು ಬುಧವಾರ ಹಾಗೂ ಗುರುವಾರ ಸಹ ಮಳೆಯಾಗುವ ಸಾಧ್ಯತೆಗಳಿದ್ದು 6 ರಿಂದ 10 ಮಿಲೀ ಮೀಟರ್ ವರೆಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

1000594994
Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement