ಪೊಲೀಸರ ಎದುರೇ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸಂಸದ ಅನಂತಕುಮಾರ್ ಹೆಗಡೆ!

AddText 03 11 05.07.23 AddText 03 11 05.07.23

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ ಸಂಸದ ಅನಂತಕುಮಾರ್ ಹೆಗಡೆ (mp ananthkumar hegde)ಹಾಗೂ ಬೆಂಬಲಿಗರು ಪೊಲೀಸರ ಎದುರೇ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದು ಇದೀಗ ಸಾರ್ವಜನಿಕರು ಪ್ರಶ್ನೆ ಮಾಡುವಂತೆ ಮಾಡಿದೆ.

ಹೌದು ಅಂಕೋಲದಲ್ಲಿ (ankola) ಬೂತ್ ಮಟ್ಟದ ಕಾರ್ಯಕರ್ತರ ಸಭೆಗೆ ಆಗಮಿಸಿದ್ದ ಹೆಗಡೆ ಅಂಕೋಲ ನಗರದಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನ ಬಾಳೆಗುಳಿ ಕ್ರಾಸ್ ಸಮೀಪದ ವರೆಗೆ ಹೆಲ್ಮೆಟ್ ಧರಿಸದೇ ಬುಲೇಟ್ ಬೈಕ್ ಚಾಲನೆ ಮಾಡಿದರು.

IMG 20240311 171012
Advertisement

ಈ ವೇಳೆ ಸಂಸದರ ಬೆಂಬಲಿಗರು ಸಹ ಅವರನ್ನು ಹಿಂಬಾಲಿಸಿದ್ದು ಅವರೊಂದಿಗೆ ಬಂದ ಯಾವೊಬ್ಬ ಸವಾರನೂ ಕೂಡ ಹೆಲ್ಮೆಟ್ (helmet wearing) ಧರಿಸದೇ ಅವರನ್ನು ಹಿಂಬಾಲಿಸಿದರು. ಹೆಗಡೆ ಜೊತೆ ಅಂಕೋಲ ಪೊಲೀಸರು ,ಬೆಂಗಾವಲು ವಾಹನ ಸಹ ಇದ್ದರೂ ಯಾರು ಸಹ ಪ್ರಶ್ನೆ ಮಾಡದಿರುವುದು ಸ್ಥಳೀಯ ಜನರನ್ನು ಕೆರಳಿಸಿದ್ದು ರಾಜಕಾರಣಿಗಳಿಗೊಂದು ಕಾನೂನು ,ಜನಸಾಮಾನ್ಯರಿಗೊಂದು ಕಾನೂನು ಇದೆಯೇ ಎಂದು ಪ್ರಶ್ನೆ ಮಾಡಿದ್ದಾರೆ‌.

ಪೊಲೀಸರು ಕ್ರಮ ಕೈಗೊಳ್ಳುತ್ತಾರಾ?

ಸಂಸದರು ಬೆಂಬಲಿಗರೊಂದಿಗೆ ಬೈಕ್ ಏರಿ ಬರುತಿದ್ದಂತೆ ಅವರನ್ನು ಬೆಂಬಲಿಗರು ಸಹ ಹಿಂಬಾಲಿಸಿದ್ದಾರೆ. ಈ ವೇಳೆ ದಾರಿ ಮಧ್ಯೆ ಅಡ್ಡ ಬಾರದಂತೆ ವಾಹನಗಳನ್ನು ಪೊಲೀಸರು ತಡೆದಿದ್ದಾರೆ. ಇನ್ನು ಹೀಗೆ ಏಕಾ ಏಕಿ ಕಾನೂನು ಉಲ್ಲಂಘನೆ ಮಾಡಿದ್ದನ್ನು ಸ್ಥಳೀಯರು ಪ್ರಶ್ನೆ ಮಾಡಿದ್ದು ಪೊಲೀಸರು ಹೆಲ್ಮೆಟ್ ಧರಿಸದೇ ಬಂದವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂಬ ಒತ್ತಾಯ ಮಾಡಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement