ಮಾಧ್ಯಮಗಳನ್ನ ಬೇವರ್ಸಿ ,ನಾಯಿ ಎಂದ ಅನಂತಕುಮಾರ್ ಹೆಗಡೆ!

Former MP Ananth Kumar Hegde Former MP Ananth Kumar Hegde
ಅನಂತಕುಮಾರ್ ಹೆಗಡೆ

ಕಾರವಾರ:- ಸಂವಿಧಾನ (Constitution) ತಿದ್ದುಪಡಿಯ ವಿಚಾರ ಮಾಧ್ಯಮಗಳಲ್ಲಿ (Media) ಚರ್ಚೆ ಆಗುತ್ತಿದ್ದಂತೆ
ಬಿಜೆಪಿಗೆ ಭಾರಿ ಮುಜುಗರದ ಬೆನ್ನಲ್ಲೆ ಸಂಸದ ಅನಂತಕುಮಾರ್ ಹೆಗಡೆ ಮಾಧ್ಯಮಗಳ ಮೇಲೆ ಹರಿಹಾಯ್ದಿದ್ದಾರೆ.

ಇಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಹಿಲ್ಲೂರಿನಲ್ಲಿ ನಡೆದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಹೆಗಡೆ ,ಆನೆ ಹೊಗಿದ್ದೆ ದಾರಿ ಎಂಬಂತೆ ನಾವು ಇರಬೇಕು,ಮಾಧ್ಯಮಗಳು ಏನೂ ಬೆಕಾದ್ರೂ ಬರೆದುಕೊಳ್ಳಲಿ ,ಬೇಕಾದ್ರೆ ಬೇವರ್ಸಿಗಳು ಏನೂ ಬೇಕಾದ್ರೂ ವದರಾಡಲಿ, ಸಾಮಾಜಿಕ ಜಾಲತಾಣದಲ್ಲಿ (Social media )ಬೇಕಾದ್ದ ಚರ್ಚೆ ಆಗಲಿ.

ಇದನ್ನೂ ಓದಿ:-ಸಂಸದ ಅನಂತಕುಮಾರ್ ಹೆಗಡೆ ದೂರವಿಟ್ಟು ರಾಜ್ಯ ಬಿಜೆಪಿ ಟ್ವೀಟ್ ! ಕಾರಣ ಏನು?

Advertisement

ಆದ್ರೆ ನೀವೆಲ್ಲ ಇದಕ್ಕೆ ವಿಚಲಿತರಾಗಬಾರದೆಂದ ಕಾರ್ಯಕರ್ತರಿಗೆ ಅನಂತ ಕುಮಾರ ಹೆಗಡೆ ಕಿವಿಮಾತು ಹೇಳಿದರು.

ಕಾರ್ಯಕರ್ತರಾದ ನೀವು ಯಾವದೋ ಸಾಮಾನ್ಯ ಪಕ್ಷದ ಕಾಯರ್ತರಲ್ಲ ,ದೇಶ ಆಡಳಿತ ಮಾಡುತ್ತಿರುವ ಪಕ್ಷದ ಕಾರ್ಯಕರ್ತರು, ಬೇರೆ ಯಾರೋ ಪತ್ರಿಕೆಯಲ್ಲಿ,( Paper )ವಾಟ್ಸಪ್ ನಲ್ಲಿ ಎನೆನೋ ಹೇಳಿದ್ರು ಅಂತಾ ವಿಚಲಿತರಾಗಬಾರದು,ಆನೆ ನಡೆದಿದ್ದೆ ದಾರಿ ಎಂಬಂತೆ ನಾವು ನಡಿಯಬೇಕು ಕಣ್ರಿ.

ಆನೆ ನಡಿತಾ ಇದ್ರೆ ನಾಯಿಗಳು ಬೋಗಳತಾ ಇರ್ತವೆ,ಆನೆ ನಡಿತಾ ಇದ್ರೆ ಯಾವಗಲಾದರೂ ನಾಯಿ ಕಡೆ ಗಮನ ಕೊಡುತ್ತಾ.? ನಾಯಿಗಳಿಗೂ ಗೊತ್ತು ನಾವು ಎಷ್ಟೆ ಬೊಗಳಿದ್ರು ಆನೆಗೆ ಏನು ಮಾಡೊಕೆ ಆಗಲ್ಲ ಅಂತಾ. ನಾಯಿಗಳು ಬೋಗಳದೆ ಇದ್ರೆ ಆನೆ ಗಾಂಭೀರ್ಯ ಕ್ಕೆ ಬೆಲೆ ಇರಲ್ಲ ಎಂದು ಮಾಧ್ಯಮಗಳ ವಿರುದ್ಧ ಹರಿಹಾಯ್ದರು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement