BREAKING NEWS
Search

Dandeli ಪೇಪರ್ ಮಿಲ್ ನಲ್ಲಿ ಕಳ್ಳತನ:15 ಆರೋಪಿಗಳ ಬಂಧನ- 3,58,000 ರೂಗಳ ಸ್ವತ್ತುಗಳು ವಶಕ್ಕೆ

87

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕೆರವಾಡದಲ್ಲಿ ಇರುವ ಶ್ರೇಯಸ್ ಪೇಪರ್ ಮಿಲ್ ನಲ್ಲಿ ನವಂಬರ್ 19 ರಂದು ಹಲವು ವಸ್ತುಗಳ ಕಳ್ಳತನ ಮಾಡಿದ ಪ್ರಕರಣವನ್ನು ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:-uttrakannada:ಚಾಲಾಕಿ ಮದ್ಯಸಾಗಾಟದಾರರ ಹೆಡೆಮುರಿ ಕಟ್ಟಿದ ಅಬಕಾರಿ ಅಧಿಕಾರಿಗಳು

ಭಾನುವಾರ 15 ಆರೋಪಿಗಳನ್ನು ಬಂಧಿಸಲಾಗಿದ್ದು ಬಂಧಿತರಿಂದ ಎಮ್.ಎಸ್. ಸ್ಟೀಲ್ ಬಾಯ್ಲರ್ ಟ್ಯೂಬ್ ಪೈಪ್‍ಗಳ , 951 ಬೇರಿಂಗ್‍ಗಳು (Bering),ಸಣ್ಣ ಪುಟ್ಟ ಇಲೆಕ್ಟ್ರಿಕ್ ಮಟೇರಿಯಲ್ಸ್‍ಗಳು (electric materials),ಅರ್ಧ ಟನ್ ಕ್ಯಾಪೆಸಿಟಿಯ ಏರ್ ಕಂಡಿಷನರ್ -1, ಕಂಟ್ರೋಲ್ ಪ್ಯಾನಲ್ ಬೋರ್ಡ್ ಸ್ಟೇರ್ , ವ್ಯಾಕ್ಯೂಮ್ ಪಂಪ್ ಪ್ಯಾನಲ್ ಬೋರ್ಡ್ ಸ್ಟೇರ್ ಗಳು ಒಟ್ಟು ಮೌಲ್ಯ 3,58,000ರೂಗಳ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಜೊತೆ ಕೃತ್ಯಕ್ಕೆ ಬಳಿಸಿದ ವಾಹನಗಳಾದ ಅಶೋಕ ಲೇಲ್ಯಾಂಡ,ಟಾಟಾ ಏಸ್ ವಾಹನ ಹಾಗೂ 12,100 ರೂಗಳಷ್ಟು ನಗದನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ:-ಕರ್ನಾಟಕದಲ್ಲಿ ಸಿಗುವ ಹಾಲಿನ ಬ್ರಾಂಡ್ ನಲ್ಲಿ ವಿಷ! ವಿವರ ನೋಡಲು ಕ್ಲಿಕ್ ಮಾಡಿ.

ಬಂಧಿತರು ದಾಂಡೇಲಿ ನಗರದ (Dandeli city )ಗಾಂಧಿ ನಗರ ನಿವಾಸಿಗಳಾದ , ಜುಗ್ನು (54), ಮಂಜುನಾಥ( 29),
ರೋಹನ ( 21), ಮಹಮ್ಮದ ತೌಪೀಕ( 42),ಜೀತೇಂದ್ರ(28) ಶಿವಾಜಿ( 35), (25),
ಸುನೀಲ (34), ಸೋನು @ ಕಿರಣ ,ಪಟೇಲ( 32), ದೀಪಕ (32) ರಾಮ ( 34),ಅಜಯ ( 30), ಸುನೀಲ (33),ಕಿಶನ್ (32) ಎಂದು ಗುರುತಿಸಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!