BREAKING NEWS
Search

Uttrakannada -ಖಾತೆ ತೆರದ ಮಂಗನಕಾಯಿಲೆ-ಮಲೆನಾಡಿಗರೇ ಎಚ್ಚರ!

53

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಮಂಗನಕಾಯಿಲೆ ಕಾಣಿಸಿಕೊಂಡಿದ್ದು ಜಿಲ್ಲೆಯ ಸಿದ್ದಾಪುರದಲ್ಲಿ ಇಬ್ಬರಿಗೆ ಕಾಣಿಸಿಕೊಂಡಿದೆ.

ಸಿದ್ದಾಪುರದ ನಿಪ್ಲಿಯ 40 ವರ್ಷದ ವ್ಯಕ್ತಿಯೋರ್ವರಲ್ಲಿ ಹಾಗೂ ಕೊರ್ಲಕೈ ಗ್ರಾಮದ 10 ವರ್ಷದ ಬಾಲಕನಲ್ಲಿ ಕೆ.ಎಫ್.ಡಿ(KFD) ( kasnur forest disease) ಪತ್ತೆಯಾಗಿದೆ.

ಇದನ್ನೂ ಓದಿ:-ಮಂಗಳೂರು-ಮಡಗಾವ್ ನಡುವಿನ ವಿಶೇಷ ರೈಲು ವೇಳಾಪಟ್ಟಿ ಬದಲಾವಣೆ, ಸಮಯಗಳ ವಿವರ ತಿಳಿಯಿರಿ

ತೀವ್ರ ಅನಾರೋಗ್ಯಕ್ಕೊಳಗಾದ 40 ವರ್ಷದ ವ್ಯಕ್ತಿಯನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆ ಹಾಗೂ ಬಾಲಕನನ್ನು ಶಿರಸಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಪಡೆಯುತಿದ್ದಾರೆ. ಈ ಹಿಂದೆ ಸಿದ್ದಾಪುರ ಭಾಗದಲ್ಲಿ ಮಂಗನಕಾಯಿಲೆ ಉಲ್ಭಣಗೊಂಡು ಸಾವು ಸಹ ಸಂಭವಿಸಿತ್ತು.
ಇದೀಗ ಸಿದ್ದಾಪುರದಲ್ಲಿ ಮಂಗನ ಕಾಯಿಲೆ ಮತ್ತೆ ಕಾಣಿಸಿಕೊಂಡಿದ್ದು ಇದೀಗ ಹೊನ್ನಾವರ ಗಟ್ಟ ಭಾಗಕ್ಕೂ ಆತಂಕ ಪಡುವಂತಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!