BREAKING NEWS
Search

ಮಂಗಳೂರು-ಮಡಗಾವ್ ನಡುವಿನ ವಿಶೇಷ ರೈಲು ವೇಳಾಪಟ್ಟಿ ಬದಲಾವಣೆ, ಸಮಯಗಳ ವಿವರ ತಿಳಿಯಿರಿ

91

ಉಡುಪಿ, ಜನವರಿ,15: ಕೊಂಕಣ ರೈಲ್ವೆ ಮಾರ್ಗದಲ್ಲಿ ಕೆಲವು ಸಮಸ್ಯೆಗಳಿಂದ ಹಾಗೂ ಪ್ರಯಾಣಿಕರ ಅನುಕೂಲತೆಗೆ ತಕ್ಕಂತೆ ರೈಲು ಸಂಚಾರದ ಸಮಯದಲ್ಲಿ ಬದಲಾವಣೆ ಮಾಡಲಾಗುತ್ತದೆ.

ಮಂಗಳೂರು-ಮಡಗಾಂವ್‌ ನಡುವೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರ ಹಿನ್ನೆಲೆಯಲ್ಲಿ ಮಂಗಳೂರು ಸೆಂಟ್ರಲ್‌-ಮಡಗಾವ್‌ ಜಂಕ್ಷನ್‌ ಡೈಲಿ ವಿಶೇಷ ರೈಲು ಸಂಚಾರ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ.

ಬದಲಾದ ಸಮಯ ಹೀಗಿದೆ.

ಹೊಸ ವೇಳಾಪಟ್ಟಿಯಂತೆ ಮಡಗಾಂವ್‌ ಜಂಕ್ಷನ್‌-ಮಂಗಳೂರು ಸೆಂಟ್ರಲ್‌ (06601) ರೈಲು ಮಡಗಾಂವ್‌ ಜಂಕ್ಷನ್‌ನಿಂದ ಮಧ್ಯಾಹ್ನ 1:50ರ ಬದಲಾಗಿ 2.10ಕ್ಕೆ ಹೊರಡಲಿದೆ. ಇದೇ ರೈಲು ರಾತ್ರಿ 9:05ಕ್ಕೆ ಮಂಗಳೂರು ಸೆಂಟ್ರಲ್‌ ತಲುಪಲಿದೆ.

ಮಂಗಳೂರು ಸೆಂಟ್ರಲ್‌ ಮಡಗಾಂವ್‌ ಜಂಕ್ಷನ್‌ ನಿತ್ಯ ಸಂಚರಿಸುವ ವಿಶೇಷ ರೈಲು (06602) ಬೆಳಗ್ಗೆ 5:30ಕ್ಕೆ ಮಂಗಳೂರು ನಿಲ್ದಾಣದಿಂದ ಹೊರಟು, ಮಧ್ಯಾಹ್ನ 1:35ಕ್ಕೆ ಮಡಗಾಂವ್‌ ತಲುಪಲಿದೆ.

ಇದನ್ನೂ ಓದಿ:-ರಾಮ ಮಂದಿರವನ್ನು ರಾಜಕೀಯ ವಿಚಾರದ ರೂಪದಲ್ಲಿ ನಾನು ಸ್ವೀಕಾರ ಮಾಡುವುದಿಲ್ಲ- ರಾಘವೇಶ್ವರ ಶ್ರೀ
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!