Guarantee Scheme Effect : ತೆರಿಗೆ ಕಟ್ಟುವಂತೆ ತಮಟೆ ಹಿಡಿದು ಬೀದಿಗಿಳಿದ ಅಧಿಕಾರಿಗಳು

100

ಕಾರವಾರ:-ರಾಜ್ಯ ಸರ್ಕಾರ (state government) ಗ್ಯಾರಂಟಿ ಯೋಜನೆ ಜಾರಿ ಮಾಡಿದ ನಂತರ ಇವುಗಳಿಗೆ ಹಣ ಕ್ರೂಢಿಕರಣವೇ ದೊಡ್ಡ ಸಮಸ್ಯೆಯಾಗಿದ್ದು ಹಲವು ಮೂಲಗಳಿಂದ ಗ್ಯಾರಂಟಿ ಯೋಜನೆ ಹಾಗೂ ಅಭಿವೃದ್ಧಿಗಾಗಿ (development )ಹಣ ಸಂಗ್ರಹಣೆಗೆ ಸರ್ಕಾರ ಇಳಿದಿದೆ. ಇದರ ಬೆನ್ನಲ್ಲೇ ಇತ್ತೀಚೆಗೆ ರಾಜ್ಯ ಕಂದಾಯ ಇಲಾಖೆ ಸ್ಥಳೀಯ ಸಂಸ್ಥೆಗಳಿಗೆ ಬಾಕಿ ಇರುವ ತೆರಿಗೆ ಸಂಗ್ರಹಕ್ಕೆ ಗುರಿ ನಿಗದಿಮಾಡಿದ್ದು ಇದೀಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳು(officer) ತೆರಿಗೆ (tax) ಸಂಗ್ರಹಕ್ಕೆ ಬೀದಿಗಿಳಿದಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ(sirsi) ನಗರಸಭೆಯ ತೆರಗೆ ಕಟ್ಟದೇ ಸತಾಯಿಸುತಿದ್ದ ಜನರಿಗೆ ನಗರಸಭೆ ಅಧಿಕಾರಿಗಳು ಬೀದಿಗಿಳಿದು ಅವರಿರುವಲ್ಲಿಗೆ ತೆರಳಿ ತಮಟೆ ಬಾರಿಸಿ ತೆರಿಗೆ ವಸೂಲಿಗೆ ಇಳಿದಿದ್ದಾರೆ.

ವರ್ಷಗಳಿಂದ ಶಿರಸಿ ನಗರಸಭೆಗೆ ಕೋಟ್ಯಂತರ ರೂಪಾಯಿ ತೆರಿಗೆ ಹಣ (Tax mony) ಜನರಿಂದ ಬರಬೇಕಿದೆ.

ನಗರಸಭೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಹಣ ಅವಶ್ಯಕತೆ ಇರುವುದರಿಂದ ನಗರಸಭೆಯಲ್ಲಿ ತೆರಿಗೆ ವಸೂಲಿ ಆಂದೋಲನ ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಅಂಗಡಿ-ಮನೆಗಳಿಗೆ ತೆರಳಿ ತಮಟೆ ಬಾರಿಸುವ ಮೂಲಕ ಎಚ್ಚರಿಕೆ ನೀಡಿ, ವಸೂಲಿಗೆ ಕ್ರಮ ವಹಿಸಲಾಗುತ್ತಿದೆ.

ಕುಡಿಯುವ ನೀರಿನ ಕರ ₹3 ಕೋಟಿ, ಅಂಗಡಿ ಮಳಿಗೆ ಕರ ₹70 ಲಕ್ಷ, ಮನೆ ಕರ ₹80 ಲಕ್ಷ, ಅಂಗನವಾಡಿ ಪರವಾನಗಿ ಕರ ₹14ಲಕ್ಷ ಕಳೆದ 2 ವರ್ಷದಿಂದ ಬಾಕಿ ಉಳಿದಿದೆ. ಇದನ್ನು ವಸೂಲಿ ಮಾಡುವಂತೆ ಜಿಲ್ಲಾಧಿಕಾರಿ ಕಚೇರಿ ಮತ್ತು ಸರ್ಕಾರದಿಂದ ಕಟ್ಟುನಿಟ್ಟಿನ ಆದೇಶ ಬಂದಿದ್ದರಿಂದ ವಸೂಲಿಗೆ 3 ತಂಡಗಳನ್ನಾಗಿ ಮಾಡಿಕೊಂಡು ಅಭಿಯಾನ ನಡೆಸಲಾಗುತ್ತಿದೆ ಎಂದು ಶಿರಸಿ ನಗರಸಭೆಯ ಪೌರಾಯುಕ್ತ ಕಾಂತರಾಜ್ ಮಾಹಿತಿ ನೀಡಿದ್ದಾರೆ‌ .

ಶಿರಸಿ ನಗರಸಭೆಯಲ್ಲಿ ಈಗಾಗಲೇ ಸುಮಾರು 4 ಲಕ್ಷ ತೆರಿಗೆ ಹಣ ಸಂಗ್ರಹ ಮಾಡಲಾಗಿದ್ದು ಸಂಪೂರ್ಣ ತೆರಿಗೆ ವಸೂಲಿಯಾಗುವವರೆಗೆ ತಮಟೆ ಅಭಿಯಾನ ನಡೆಯಲಿದ್ದು ಈ ಮೂಲಕ ಸರ್ಕಾರಕ್ಕೆ ಬರಬೇಕಾದ ತೆರಿಗೆ ವಸೂಲಿ ಮಾಡಲಾಗುತ್ತಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!