ಶಿರಸಿ ಶೈಕ್ಷಣಿಕ ಜಿಲ್ಲೆಯನ್ನು ಹಿಂದಿಕ್ಕಿದ ಕಾರವಾರ ಶೈಕ್ಷಣಿಕ ಜಿಲ್ಲೆ-ಕರಾವಳಿಯಲ್ಲಿ ಮಕ್ಕಳ ಹಾಜುರಾತಿಯಲ್ಲಿ ಫುಲ್ ರೆಸ್ಫಾನ್ಸ್

715

ಕಾರವಾರ :- ಒಂದರಿಂದ ಐದನೇ ತರಗತಿಯು ಇಂದು ಪ್ರಾರಂಭವಾಗುತಿದ್ದಂತೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹಾಗೂ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಉತ್ತಮ ರೆಸ್ಫಾನ್ಸ್ ಸಿಕ್ಕಿದೆ.ಅದ್ರಲ್ಲೂ ಕರಾವಳಿ ಭಾಗದಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ಆಗಮಿಸುವ ಮೂಲಕ ಶಿರಸಿ ಜಿಲ್ಲೆಯನ್ನು ಹಿಂದಿಕ್ಕಿದ್ದಾರೆ. ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಹಳಿಯಾಳದಲ್ಲಿ ಅತ್ಯಲ್ಪ ಮಕ್ಕಳು ಶಾಲೆಗೆ ಇಂದು ಹಾಜುರಾಗಿದ್ದಾರೆ.

ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ತಾಲೂಕುವಾರು ಮಕ್ಕಳ ಹಾಜುರಾತಿ ಈ ಕೆಳಗಿನಂತಿದೆ.

ಕಾರವಾರ – 93.33%
ಅಂಕೋಲ- 82.74%
ಭಟ್ಕಳ- 94.59%
ಹೊನ್ನಾವರ- 83.40%
ಕುಮಟಾ- 89.94%
ಖಾಸಗಿ ಶಾಲೆಗಳ ಹಾಜುರಾತಿ (ಕಾರವಾರ ಜಿಲ್ಲಾವಾರು)- 89.51%
ಅನುದಾನಿತ ಶಾಲೆಗಳ ಒಟ್ಟು ಹಾಜುರಾತಿ- 86.81%
ಸರ್ಕಾರಿ ಶಾಲೆಗಳು ಒಟ್ಟು ಹಾಜುರಾತಿ- 89.29%

ಶಿರಸಿ ಶೈಕ್ಷಣಿಕ ಜಿಲ್ಲೆ ತಾಲೂಕುವಾರು ಹಾಜುರಾತಿ:-

ಶಿರಸಿ- 91.4%
ಸಿದ್ದಾಪುರ- 71.34%
ಯಲ್ಲಾಪುರ- 80.99%
ಮುಂಡಗೋಡು- 60.37%
ಹಳಿಯಾಳ- 44.02%
ಜೋಯಿಡಾ- 85.79 %

ಶಿರಸಿ ಜಿಲ್ಲಾವಾರು ಒಟ್ಟು ಶೇಕಡವಾರು ಹಾಜುರಾದ ಮಕ್ಕಳ ಸಂಖ್ಯೆ – 66.37% ಆಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!