BREAKING NEWS
Search

ಶನಿವಾರ ಕರಾವಳಿಯಲ್ಲಿ ಸಂಚರಿಸಲಿದೆ ವಂದೇ ಭಾರತ ರೈಲು| ಸಮಯ ಹೇಗೆ ? ವಿವರ ನೋಡಿ.

233

ಕಾರವಾರ:- ಮಂಗಳೂರು ನಿಂದ ಮಡಗಾಂವ್ ಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಶನಿವಾರ ಲೋಕಾರ್ಪಣೆಗೊಳ್ಳಲಿದೆ.

ಕರಾವಳಿಯಯ ಕೆನರಾ ವಿಭಾಗದ ಕಾರವಾರ ರೈಲ್ವೆ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.

ಶನಿವಾರ ಬೆಳಗ್ಗೆ 11 ಗಂಟೆಗೆ ಮಂಗಳೂರಿನಿಂದ ಹೊರಡುವ ಈ ರೈಲು ಮಧ್ಯಾಹ್ನ 2.52 ಕ್ಕೆ ಕಾರವಾರ ರೈಲ್ವೆ ನಿಲ್ದಾಣ ತಲುಪಲಿದೆ. ಇಲ್ಲಿ ರೈಲನ್ನು ಪುಷ್ಪಾರ್ಚನೆ ಮಾಡುವ ಮೂಲಕ ಮತ್ತು ವಿವಿಧ ಸಾಂಸ್ಕೃತಿಕ ಕಲಾ ವೈಭವಗಳ ಮೂಲಕ ಸ್ವಾಗತಿಸಲಿದ್ದಾರೆ.

ಇದನ್ನೂ ಓದಿ:- ಸಚಿವ ಮಧು ಬಂಗಾರಪ್ಪ ಕಾರು ಅಪಘಾತ-ಪ್ರಾಣಾಪಾಯದಿಂದ ಪಾರಾದ ಸಚಿವ

ನಂತರ ಶಾಸಕ ಸತೀಶ್ ಸೈಲ್ ರೈಲಿಗೆ ಹಸಿರು ನಿಶಾನೆ ತೋರುವ ಮೂಲಕ ರೈಲು ಮಡಗಾಂವ್ ಗೆ ತೆರಳಿಲಿದೆ. ಪ್ರಾರಂಭದ ದಿನದಂದು ಈ ರೈಲಿನಲ್ಲಿ ಕಾರವಾರದಿಂದ ಮಡಂಗಾವ್ ಗೆ ತೆರಳಲು ಮತ್ತು ವಾಪಸ್ ಕಾರವಾರಕ್ಕೆ ಆಗಮಿಸಲು 300 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ವಿತರಿಸಲಾಗಿದೆ.

ವಂದೆ ಭಾರತ ರೈಲಿನ ಹೈಲೆಟ್ಸ್ ಹೀಗಿದೆ:-

ಈ ರೈಲು ಗಂಟೆಗೆ 120 ಕಿಮೀ ಗೂ ಅಧಿಕ ವೇಗದಲ್ಲಿ ಚಲಿಸಲಿದ್ದು, 8 ಕೋಚ್ ಗಳನ್ನು ಹೊಂದಿದೆ. ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಏರ್ ಲೈನ್ ಮಾದರಿಯ ಸೀಟುಗಳ ಜೊತೆಗೆ ಎಕ್ಸಿಕ್ಯೂಟಿವ್ ಚೇರ್ ಗಳು ಮತ್ತು ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟದ ವ್ಯವಸ್ಥೆ ಕೂಡಾ ಇದೆ. ಆನ್ಬೋರ್ಡ್ ವೈಫೈ, ರೀಡಿಂಗ್ ಲೈಟ್ ವ್ಯವಸ್ಥೆ,ಸ್ವಯಂ ಚಾಲಿತ ಬಾಗಿಲುಗಳು, ಸ್ಮೋಕ್ ಅಲರ್ಟ್ , ಸಿಸಿಟಿವಿಗಳು ಮತ್ತಿತರ ಆಧುನಿಕ ಸೌಲಭ್ಯಗಳು ಇವೆ.

ರೈಲು ಸಂಚಾರ ಸಮಯ:-

ಗುರುವಾರ ಹೊರತುಪಡಿಸಿ ವಾರದ 6 ದಿನ ಈ ರೈಲು ಸಂಚರಿಸಲಿದ್ದು, ಬೆಳಗ್ಗೆ 11 ಕ್ಕೆ ಮಂಗಳೂರುನಿ0ದ ಹೊರಟು 12.25 ಕ್ಕೆ ಉಡುಪಿ,2.52 ಕ್ಕೆ ಕಾರವಾರ 4.40 ಕ್ಕೆ ಮಡಂಗಾವ್ ತಲುಪಲಿದೆ. ಮಡಗಾಂವ್ ನಿಂದ ಸಂಜೆ 5.10 ಕ್ಕೆ ಹೊರಟು, 5.50 ಕ್ಕೆ ಕಾರವಾರ, 8.10 ಕ್ಕೆ ಉಡುಪಿ,10.15 ಕ್ಕೆ ಮಂಗಳೂರು ತಲುಪಲಿದೆ. ಮಾರ್ಗಮಧ್ಯೆ ಕಾರವಾರ ಮತ್ತು ಉಡುಪಿ ಹೊರತುಪಡಿಸಿ ಬೇರೆಲ್ಲೂ ನಿಲುಗಡೆ ಇರುವುದಿಲ್ಲ .

ಇದನ್ನೂ ಓದಿ:- ಅರಬ್ಬಿ ಸಮುದ್ರದಲ್ಲಿ ಸಿಕ್ತು ಬರೋಬ್ಬರಿ 400 ಕೆಜಿ ತೂಕದ ಮೀನು
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!