ಪ್ರಯಾಣಿಕರಿಗೆ ಚುನಾವಣಾ ಚಕ್ ಪೋಸ್ಟ್ ಕಾಟ ಪರಿಹಾರ ಹೇಳಿದ್ರು ಜಿಲ್ಲಾಧಿಕಾರಿ|video ನೋಡಿ

TextMaster 04 05 07.21.11 TextMaster 04 05 07.21.11

ಕಾರವಾರ :- ಚುನಾವಣಾ ಆಕ್ರಮ ತಡೆಯಲು ಜಿಲ್ಲೆಯಾಧ್ಯಾಂತ ಚಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ.ಆದ್ರೆ ಈ ಚಕ್ ಪೋಸ್ಟ್ ಗಳಲ್ಲಿ ದಿನನಿತ್ಯ ವ್ಯವಹಾರಕ್ಕೆ ತೆರಳುವ,ವೈದ್ಯಕೀಯ ಚಿಕಿತ್ಸೆ,ಉದ್ಯಮ ನಡೆಸುವವರಿಗೆ ಹಣ ಕೊಂಡೊಯ್ಯುವಾಗ ಮಾಹಿತಿ ಕೊರತೆಯಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ.

ಕೆಲವೊಮ್ಮೆ ದಾಖಲೆಗಳು ಇದ್ದರೂ ಅದನ್ನು ರುಜುವಾತು ಪಡಿಸಲು ಎಡವುದರಿಂದಾಗಿ ಅವರದ್ದೇ ಹಣವಾಗಿದ್ದರೂ ಸರ್ಕಾರದ ಖಜಾನೆ ಸೇರುವಂತಾಗುತಿದ್ದು , ಕೋರ್ಟ ಕಚೇರಿ ತಿರುಗುವ ಸ್ಥಿತಿ ಉದ್ಬವವಾಗುತ್ತಿದೆ. ಹೀಗಾಗಿ ಜನರ ಗೊಂದಲ ನಿವಾರಣೆಗಾಗಿ Uttrakannada ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿಯವರು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ .

Advertisement

ಜಿಲ್ಲಾಧಿಕಾರಿ ಹೇಳಿದ್ದೇನು? ವಿಡಿಯೋ ಕೆಳಗೆ ನೀಡಲಾಗಿದೆ ಸಂಪೂರ್ಣ ನೋಡಿ ಮಾಹಿತಿ ಪಡೆದುಕೊಳ್ಳಿ.

ಒಂದು ಕೋಟಿಗೂ ಹೆಚ್ಚು ವಶ!

ಚುನಾವಣೆಯಲ್ಲಿ ಅಕ್ರಮ ತಡೆಯಲು ಚಕ್ ಪೋಸ್ಟ್ ಗಳನ್ನು ನಿರ್ಮಿಸಿದ್ದು ಈ ವರೆಗೆ 1ಕೋಟಿ 26 ಲಕ್ಷ ಹಣ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ರವರು ತಿಳಿಸಿದ್ದಾರೆ. ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು 26 ಚಕ್ ಪೋಸ್ಟ್ ಗಳನ್ನು ಮಾಡಲಾಗಿದೆ. ಅಗತ್ಯ ಬಿದ್ದರೇ ಇನ್ನೂ ಹೆಚ್ಚಿನ ಚಕ್ ಪೋಸ್ಟ್ ಮಾಡಲಾಗುತ್ತದೆ. ಜನರಲ್ಲಿ ತಪಾಸಣೆ ವೇಳೆ ಗೊಂದಲಗಳಿದ್ದು ಪ್ರಯಾಣಿಸುವ ವೇಳೆ 50 ಸಾವಿರಕ್ಕಿಂತ ಹೆಚ್ಚು ಹಣ ತೆಗೆದುಕೊಂಡು ಹೋಗುವಂತಿಲ್ಲ,10 ಲಕ್ಷಕ್ಕಿಂತ ಹೆಚ್ಚಾದರೇ IT ಶಲ್ ಗೆ ಮಾಹಿತಿ ನೀಡಿ ಹಣ ವಶಕ್ಕೆ ಪಡೆಯಲಾಗುತ್ತದೆ.ಸೂಕ್ತ ದಾಖಲೆ ನೀಡಿದರೇ ಮಾತ್ರ ಇವುಗಳನ್ನು ಬಿಡಲಾಗುತ್ತದೆ.
ಹೆಚ್ಚು ಹಣ ತೆಗೆದುಕೊಂಡು ಹೋದವರ ಹಿಂದಿನ ಟ್ರಾಂಜಕ್ಷನ್ ನೋಡಲಾಗುತ್ತದೆ.2 ಲೀಟರ್ ನಿಗದಿ ಮದ್ಯಕ್ಕಿಂತ ಹೆಚ್ಚು ತೆಗೆದುಕೊಂಡು ಹೋದಲ್ಲಿ ವಶಕ್ಕೆ ಪಡೆಯಲಾಗುತ್ತದೆ ಎಂದ ಅವರು ಜನರು ಹಣವನ್ನು ಡಿಜಿಟಲ್ ಟ್ರಾಂಜಾಕ್ಷನ್ ಮಾಡಲು ಸಲಹೆ ನೀಡಿದರು.

#karnataka #Dcuttrakannada # election awareness #check post problem

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement