ಕುಮಟಾ ಹೆದ್ದಾರಿಯಲ್ಲಿ ಪಲ್ಟಿಯಾದ ಮೀನಿನ ವಾಹನದಲ್ಲಿ ಸಿಕ್ತು ಎಂಟು ಕ್ವಿಂಟಲ್ ಗೋಮಾಂಸ!

TextMaster 04 06 01.56.22 TextMaster 04 06 01.56.22

ಕಾರವಾರ :-ಮೀನುಗಳನ್ನು ತುಂಬಿಕೊಂಡು ಹೋಗುವ ವಾಹನದಲ್ಲಿ ಅಕ್ರಮ ಗೋ ಮಾಂಸ ತುಂಬಿಕೊಂಡು ಹೋಗುತಿದ್ದ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿ ಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಗರದ ರಾಷ್ಟ್ರೀಯ ಹೆದ್ದಾರಿ 66 ರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಅಪಘಾತ ಪಡಿಸಿ ವಾಹನ ಚಾಲಕ ಪರಾರಿಯಾಗಿದ್ದು ಮೀನಿನ ವಾಹನದಲ್ಲಿ
ಎಂಟು ಕ್ವಿಂಟಲ್ ಧನದ ಮಾಂಸ ಪತ್ತೆಯಾಗಿದೆ.

ಶಿರಸಿ ಯಿಂದ ಕುಮಟಾ ಮಾರ್ಗವಾಗಿ ಮಂಗಳೂರು ಕಡೆ ತೆರಳುತಿದ್ದ ದನದ ಮಾಂಸ ತುಂಬಿದ್ದ ವಾಹನ ಇದಾಗಿದ್ದು ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡಲಾಗುತಿತ್ತು.

Advertisement

ಸ್ಥಳಕ್ಕೆ ಕುಮಟಾ ಪಿ.ಎಸ್.ಐ ಸಂಪತ್ತ ಕುಮಾರ್ ಬೇಟಿನೀಡಿ ಪರಿಶೀಲನೆ ನಡೆಸಿದ್ದು
ಪರಾರಿಯಾದ ಚಾಲಕ ಜಾವೇದ್ ಎಂದು ಪ್ರಥಮ ಮಾಹಿತಿ ದೊರೆದಿದ್ದು ವಾಹನದ ಮಾಲೀಕ ಗಣೇಶ್ ಹರಿಕಾಂತ್ರ ಎಂದು ತಿಳಿದು ಬಂದಿದ್ದು ಇಬ್ಬರ ಮೇಲೆ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement