ಕನ್ನಡವಾಣಿ ನ್ಯೂಸ್ ಡೆಸ್ಕ: ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಮನೆಯ ಯಜಮಾನಿ ಮಹಿಳೆಗೆ ರೂ.2000 ಪ್ರತಿ ತಿಂಗಳು ನೀಡುವಂತ ಗೃಹ ಲಕ್ಷ್ಮೀ ಯೋಜನೆ ( Gruha Lakshmi Scheme ) ಘೋಷಿಸಿದ್ದು ಈ ಯೋಜನೆಗೆ ಆನ್ ಲೈನ್ ಹಾಗೂ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ನಾಳೆಯಿಂದ ಆರಂಭಗೊಳ್ಳಲಿದೆ.
ಗೃಹ ಲಕ್ಷ್ಮೀ ಯೋಜನೆಗೆ
ವಿವಿಧ ಕಾರಣಗಳಿಂಗ ಜೂನ್.15ರಿಂದ ಆರಂಭಗೊಳ್ಳಬೇಕಿದ್ದಂತ ಗೃಹ ಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಕೆ ವಿಳಂಬವಾಗಿತ್ತು. ಗೃಹ ಲಕ್ಷ್ಮೀ ಯೋಜನೆಗೆ ಮನೆಯ ಕುಟುಂಬದ ಯಜಮಾನಿ ಮಹಿಳೆಯ ಪ್ರತಿ ತಿಂಗಳು ₹2000 ಪಡೆಯುವುದಕ್ಕಾಗಿ ಜೂನ್.27ರ ನಾಳೆಯಿಂದ ಅರ್ಜಿ ಸಲ್ಲಿಕೆ ಆರಂಭಿಸಲಾಗುತ್ತಿದೆ. ಆಗಸ್ಟ್ 17 ಅಥವಾ 18ರಂದು ಯಜಮಾನಿ ಮಹಿಳೆಯ ಖಾತೆಗೆ ಹಣ ಜಮಾ ಆಗಲಿದೆ.
ರಾಜ್ಯದಲ್ಲಿನ ಪ್ರತಿ ಕುಟುಂಬದ ಯಜಮಾನಿ ಮಹಿಳೆಯರು ಗೃಹ ಲಕ್ಷ್ಮೀ ಯೋಜನೆಗಾಗಿ ಸೇವಾ ಸಿಂಧುವಿನ ವೆಬ್ ಸೈಟ್ ನಿಂದ ಅರ್ಜಿ ಸಲ್ಲಿಸಬೇಕು.
ಕಳಗೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ ಅರ್ಜಿಯನ್ನು ಸ್ವತಹಾ ನೀವೇ ಸಲ್ಲಿಸಿ.
https://sevasindhugs.karnataka.gov.in/about_kannada.html
ಸರ್ವರ್ ಹಾಗೂ ನೆಟ್ವರ್ಕ ಸಮಸ್ಯೆ ಇದ್ದಲ್ಲಿ ಆಫ್ ಲೈನ್ ಮೂಲಕ ಸಂಬಂದಪಟ್ಟ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಲ್ಲದೇ ಗ್ರಾಮ ಒನ್, ಕರ್ನಾಟಕ ಓನ್ ಹಾಗೂ ಬೆಂಗಳೂರು ಒನ್ ಸೆಂಟರ್ ಗಳಲ್ಲಿಯೂ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆಗೆ ಯಾವೆಲ್ಲಾ ದಾಖಲೆ ಬೇಕು.?
ಗೃಹ ಲಕ್ಷ್ಮೀ ಯೋಜನೆಗೆ ಕುಟುಂಬದ ಯಜಮಾನಿ ಮಹಿಳೆಯು ಅರ್ಜಿ ಸಲ್ಲಿಸಲು ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಹಾಗೂ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ನೀಡ ಬೇಕು ಅಥವಾ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಬೇಕು. ಇದನ್ನೂ ಓದಿ:- ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಕಾರಿನಲ್ಲಿ ಸತೀಶ್ ಸೈಲ್.ಅಪ್ಪಿ ಕುಷಲೋಪರಿ ವಿಚಾರಿಸಿದ್ದು ಏಕೆ ಗೊತ್ತಾ?






