ಈದೇಶದ ಕಾನೂನೇ ಸರಿ ಇಲ್ಲ- ಸಚಿವ ಮಂಕಾಳು ವೈದ್ಯ

kannadavani kannadavani

ಕಾರವಾರ :- ಈ ದೇಶದ‌ ಕಾನೂನೇ ಸರಿಯಿಲ್ಲ ಎಂದು
ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ. ಇಂದು ಕಾರವಾರ ನಗರದದ ಕ್ರಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಯುವ ಉತ್ಸವವನ್ನು ಉದ್ಘಾಟಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಲು ಆಗದೇ ಇರುಲು ಕೇಂದ್ರ ಸರ್ಕಾರ ಮಾಡಿದ ಕಾನೂನೇ ಕಾರಣ ಎಂದು ಆರೋಪಿಸಿದ ಅವರು ಬಿಜೆಪಿಗರಿಗೆ ಕೆಲಸ ಇಲ್ಲ, ಸಾಮಾಜಿಕ ಜಾಲಾತಾಣದಲ್ಲಿ ಕೆಟ್ಟದಾಗಿ ಟೀಕೆ ಮಾಡುತ್ತಾರೆ,ಅವರ ಮನಸ್ಥಿತಿಯೇ ಸರಿಯಿಲ್ಲ,ನಾನೇ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲು ಐದು ಪ್ರಕರಣ ದಾಖಲಿಸಿದ್ದೇನೆ.ದೇಶ ಕಾನೂನು ತಂದಿದೆ. ಆದರೆ ಕೋರ್ಟ್ ಅದನ್ನ ತಡೆ ಹಿಡಿದಿದೆ,ಪೊಲೀಸ್ ಇಲಾಖೆ‌ ಸಹ ಅಸಾಹಯಕರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡುವವರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗುತ್ತಿದೆ.ಬಿಜೆಪಿ ಸುಳ್ಳು ಹೇಳೇ ರಾಜಕಾರಣ ಮಾಡುತ್ತಾರೆ. ಐದು ವರ್ಷ ರಾಜ್ಯದಲ್ಲಿ ಅಧಿಕಾದ ಕೊಟ್ರು, ಹತ್ತು ವರ್ಷ ಕೇಂದ್ರದಲ್ಲಿ ಅಧಿಕಾರ ಕೊಟ್ರು,ಆದರೇ ಏನೂ ಅಭಿವೃದ್ಧಿಯನ್ನ ಬಿಜೆಪಿ ಮಾಡಲಿಲ್ಲ,ಆಗಬಾರದನ್ನ ಪೂರಾ ಬಿಜೆಪಿ ಮಾಡಿದೆ.

ಮಂಕಾಳು ವೈದ್ಯ ಮಾಧ್ಯಮದ ಮುಂದೆ ಹೇಳಿಕೆ ನೀಡಿದ ವಿಡಿಯೋ ನೋಡಿ.

Advertisement

ಬಿಜೆಪಿಗರಿಗೆ ರಾಜಕಾರಣ ಮಾಡಲು ಬರುವುದಿಲ್ಲ
ವಿರೋಧ ಪಕ್ಷದ ನಾಯಕರನ್ನೂ ಸಹ ಆಯ್ಕೆ ಮಾಡಲು ಆಗುವುದಿಲ್ಲ,ರಾಜ್ಯ ಕಳೆದುಕೊಂಡ ಮೇಲೆ ಇನ್ನೂ ಬಿಜೆಪಿಗರು ಒಂದಾಗಿಲ್ಲ.

ಬಿಜೆಪಿ ಪಕ್ಷದವರು ಹದಿನಾಲ್ಕು ಜನ ಕಾಂಗ್ರೆಸ್ ನಿಂದ ತೆಗೆದುಕೊಂಡರು ಅಲ್ಲಿ ಶಿಸ್ತು ಇದ್ದರೇ ಆ ಶಿಸ್ತು ಬಿಟ್ಟು ಕಾಂಗ್ರೆಸ್ ಶಾಸಕರನ್ನ ಏಕೆ ತೆಗದುಕೊಂಡರು ಎಂದು ಪ್ರಶ್ನೆ ಮಾಡಿದ ಅವರು ಕಾಂಗ್ರೆಸ್ ನಿಂದ ಹೋದವರು ಶಿಸ್ತು ತರಲು ಪ್ರಯತ್ನ ಮಾಡಿದರು,ಆದರೆ ಇದು ಆಗಲಿಲ್ಲ. ಅದಕ್ಕೆ ವಾಪಾಸ್ ಕಾಂಗ್ರೆಸ್ ನತ್ತ ಬರುತ್ತಾರೆ.

ಕಾಂಗ್ರೆಸ್ ನಿಂದ ಬಂದವರಿಂದ ಶಿಸ್ತು ಹಾಳಾಗುತ್ತದೆ ಎಂದು ಈಗ ಬಿಜೆಪಿಗರು ಹೇಳುತ್ತಾರೆ ಆದರೆ ‌ಕಾಂಗ್ರೆಸ್ಸಿನ ಹದಿನಾಲ್ಕು ಶಾಸಕರನ್ನ ಬಿಜೆಪಿ ತೆಗೆದುಕೊಂಡಿದ್ದು ಶಿಸ್ತೇ ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ:-ಕಾರವಾರದಲ್ಲಿ ಬದುಕಿದ್ದ ವಿಲಕ್ಷಣ ವ್ಯಕ್ತಿಯ ಜೀವನ ‘ಟೋಬಿ’ ಚಲನಚಿತ್ರ! ಏನಂದ್ರು ಕಥೆ ಬರದ ದಯಾನಂದ್ ? ವಿವರ ನೋಡಿ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement