Gruha Lakshmi Scheme: ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಬಂದಿಲ್ವಾ.? ಹಾಗಿದ್ರೆ ಈ ಕೆಲಸ ಮಾಡಿ

TextMaster 09 26 09.02.00 TextMaster 09 26 09.02.00

ಬೆಂಗಳೂರು:- ರಾಜ್ಯ ಕಾಂಗ್ರೆಸ್ ಸರ್ಕಾರದ ನಾಲ್ಕನೇ ಗ್ಯಾರಂಟಿ ಯೋಜನೆಯಾಗಿ ಜಾರಿಗೆ ತಂದ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದು.

ಇದನ್ನೂ ಓದಿ:- ಗೃಹಲಕ್ಷ್ಮಿ ಯೋಜನೆ ಲಾಭ ಪಡೆಯಲು ಯಾವೆಲ್ಲಾ ದಾಖಲೆ ಬೇಕು ವಿವರ ನೋಡಲು ಕ್ಲಿಕ್ ಮಾಡಿ.

Advertisement

ಈ ಯೋಜನೆಯಡಿ ( project) ಮೊದಲ ಹಾಗೂ ಎರಡನೇ ತಿಂಗಳ 2000 ರೂ ಹಣವನ್ನು ಸರ್ಕಾರ ದಿಂದ ಜಮಾ ಮಾಡಲಾಗಿದೆ. ಆದ್ರೇ ಕೆಲವು ಯಜಮಾನಿ ಮಹಿಳೆಯರ ಖಾತೆಗೆ ಈ ಹಣ ಜಮಾ ಆಗದೇ ಗೊಂದಲಗಳು ಏರ್ಪಟ್ಟಿದ್ದು ತಮ್ಮ ಖಾತೆಗೆ ಯಾಕೆ ಹಣ ವರ್ಗಾವಣೆ ಆಗಿಲ್ಲ ಎಂಬ ಗೊಂದಲದಲ್ಲಿ ಮಹಿಳೆಯರಿದ್ದಾರೆ.

ಹಾಕಿದ್ರೆ ಕುಟುಂಬದ ಯಜಮಾನಿ ಮಹಿಳೆಯ ಖಾತೆಗೆ ಯಾಕೆ ಜಮ ಆಗಿಲ್ಲ, ಆ ಪಟ್ಟಿಯಲ್ಲಿ ನೀವೂ ಇದ್ದರೇ ಈ ಸುದ್ದಿಯನ್ನು ಓದಿ.

ಈಗಾಗಲೇ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ಹಣವನ್ನು ಯಜಮಾನಿ ಮಹಿಳೆಯರ ಖಾತೆಗೆ bank account debit ) ವರ್ಗಾವಣೆ ಮಾಡಲಾಗಿದೆ. ಇನ್ನೂ ಕೆಲವು ಯಜಮಾನಿಯರ ಅಕೌಂಟ್ ಗೆ ತಾಂತ್ರಿಕ ಸಮಸ್ಯೆಯಿಂದ ಜಮಾ ಮಾಡಲು ಸಾಧ್ಯವಾಗಿಲ್ಲ.

ಇದಕ್ಕೆ ಕಾರಣ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ( Aadhar link) ಲಿಂಕ್ ಆಗದೇ ಇರುವುದು. ಹೀಗಾಗಿ ನೀವು ತಪ್ಪದೇ ಬ್ಯಾಂಕ್ ಗೆ ತೆರಳಿ, ನಿಮ್ಮ ಆಧಾರ್ ಸಂಖ್ಯೆಯನ್ನು ನೀಡಿ, ನಿಮ್ಮ ಖಾತೆಗೆ ಲಿಂಕ್ ಮಾಡಿಸಿ. ನಂತರ ಗೃಹಲಕ್ಷ್ಮಿ ಯೋಜನೆಯ( gruha Lakshmi scheme) 2000 ರೂ ಹಣ ನಿಮ್ಮ ಖಾತೆಗೆ ಡಿಬಿಟಿ (DPT )ಮೂಲಕ ವರ್ಗಾವಣೆಯಾಗಲಿದೆ.

ಕೆಲವರು ಕೆಲ ದಿನಗಳ ಹಿಂದೆ ರಾಜ್ಯ ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿ, ಹೆಸರು ಸೇರ್ಪಡೆಗೆ ಅವಕಾಶ ನೀಡಿದ್ರೂ, ಪಡಿತರ ಚೀಟಿಯಲ್ಲಿ ಯಜಮಾನಿ ಯಾರು ಅಂತ ಬದಲಾವಣೆ ಮಾಡಿಲ್ಲ. ಹೀಗಾಗಿಯೂ ಕೆಲವು ಯಜಮಾನಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಿಂದ ವಂಚಿತರಾಗಿದ್ದಾರೆ. ಹೀಗಾಗಿ ಆಹಾರ ಇಲಾಖೆಯಿಂದ ಮತ್ತೆ ತಿದ್ದುಪಡಿ, ಹೆಸರು ಬದಲಾವಣೆಗೆ ಕೆಲವೇ ದಿನಗಳಲ್ಲಿ ಅವಕಾಶ ನೀಡಲಿದೆ ಅಂತ ಹೇಳಲಾಗುತ್ತಿದೆ. ಆಗ ರೇಷನ್ ಕಾರ್ಡ್ ನಲ್ಲಿ ಮಹಿಳೆ ಯಜಮಾನಿ ಅಂತ ಬದಲಾವಣೆ ಮಾಡೋದನ್ನ ಮರೆಯಬೇಡಿ. ಆಗ ನಿಮ್ಮ ಖಾತೆಗೂ ಗೃಹಲಕ್ಷ್ಮಿ ಯೋಜನೆ ಹಣ ಬರಲಿದೆ.

ಇನ್ನು ಹಲವರು ಇ-ಕೆವೈಸಿ ಕೂಡ ಅಪ್ ಡೇಟ್ (EKYC up to date )ಮಾಡಿಲ್ಲ. ಹೀಗಾಗಿ ನಿಮ್ಮ ರೇಷನ್ ಕಾರ್ಡ್ ಗಳಿಗೆ ಇ-ಕೆವೈಸಿ ಅಪ್ ಡೇಟ್ ಮಾಡಲೇ ಬೇಕು.
ತಕ್ಷಣ ಆಹಾರ ಇಲಾಖೆ ಕಚೇರಿಗೆ ತೆರಳಿ, ಅಪ್ ಡೇಟ್ ಮಾಡಿಸಿ. ಆ ಬಳಿಕ ನಿಮ್ಮ ಖಾತೆಗೆ ಸೆಪ್ಟೆಂಬರ್ ತಿಂಗಳ ಹಣ ಜಮಾ ಆಗಲಿದ್ದು ನೀವು ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ಸಿಗೋ ಜೊತೆ ನಿಮ್ಮ ಬ್ಯಾಂಕ್ ಖಾತೆಗೂ( bank account) ಹಣ ಜನ ಆಗಲಿದೆ( account debit)

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement