Goa liquor:ಒಂದೇ ತಿಂಗಳಲ್ಲಿ ಕಾರವಾರದ ಚಕ್ ಪೋಸ್ಟ್ ನಲ್ಲಿ ಒಂದು ಕೋಟಿ ಮೌಲ್ಯದ ಗೋವಾ ಮದ್ಯ ವಶ

TextMaster 09 28 08.00.22 TextMaster 09 28 08.00.22

ಕಾರವಾರ :- ಗೋವಾದಿಂದ ಮಂಗಳೂರಿಗೆ ಸಾಗಿಸುತಿದ್ದ 5 ಲಕ್ಷ ಮೌಲ್ಯದ ಅಕ್ರಮ ಗೋವಾ ಮದ್ಯವನ್ನು (goa liquor )ವಶ ಪಡಿಸಿಕೊಂಡು ಇಬ್ಬರ ಆರೋಪಿಗಳನ್ನು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿ ಚಕ್ ಪೋಸ್ಟ್ ನಲ್ಲಿ ಇಂದು ನಡೆದಿದೆ.

ಮಂಗಳೂರು ಮೂಲದ ವಾಹನ ಚಾಲಕ ಮಹ್ಮದ್ ಸಲೀಮ್ ಸದಾಶಿವಗಡದ ತೇಜಸ್ ಶೇಟ್ ಬಂಧಿತ ಆರೋಪಿಗಳಾಗಿದ್ದು ಗೋವಾ ದಿಂದ ಕಂಟೈನರ್ ನಲ್ಲಿ ಮಂಗಳೂರಿಗೆ ಅಕ್ರಮ ಗೋವಾ ಮದ್ಯ ಸಾಗಾಟ ಮಾಡುತಿದ್ದರು.

Advertisement

ಕಚಿತ ಮಾಹಿತಿ ಪಡೆದ ಅಬಕಾರಿ ಅಧಿಕಾರಿಗಳು ಅಂದಾಜು ಐದುಲಕ್ಷ್ಮ ಮೌಲ್ಯದ 58 ಬಾಕ್ಸ್ ಗೋವಾ ಮದ್ಯ ವಾಹನ ಸೇರಿ 25 ಲಕ್ಷದ ಸ್ವತ್ತು ವಶಕ್ಕೆ ಪಡೆದಿದ್ದಾರೆ.

ಅಬಕಾರಿ ಉಪ ಆಯುಕ್ತರಾದ ಕೆ. ವಿನೋದ್ ಕುಮಾರ್ ನೇತ್ರತ್ವದಲ್ಲಿ ಉಪ ಅಧೀಕ್ಷಕರಾದ ಬಸವರಾಜ್ ಕರವಿನ ಕೊಪ್ಪ,ಅಬಕಾರಿ ನಿರೀಕ್ಷಕರಾದ ಸದಾಶಿವ ಕೊರತಿ,ಅಬಕಾರಿ ಉಪ ನಿರೀಕ್ಷರಾದ ಪಿ.ಕೆ ಹಳದನಕರ್ ,ಎಮ್ .ಎಮ್ . ನಾಯ್ಕ್ .ಸಿಬ್ಬಂದಿಗಳಾದ ಸುರೇಶ್ ಹಾರುಗೊಪ್ಪ, ಆನಂದ್ ಪೋಂಡೆಂಜರ್ ,ರಂಜನಾ ನಾಯ್ಕ ಕಾರ್ಯಾಚರಣೆ ಯಲ್ಲಿ ಭಾಗಿಯಾಗಿದ್ದು ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅಬಕಾರಿ ಉಪ ಆಯುಕ್ತರಾದ ಕೆ. ವಿನೋದ್ ಕುಮಾರ್ ರವರು ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಗಡಿಯಲ್ಲಿ ತೀವ್ರ ತಪಾಸಣೆ ಮಾಡಲಾಗುತ್ತಿದೆ ಕಳೆದ ಒಂದು ತಿಂಗಳಲ್ಲಿ ಅಕ್ರಮ ಗೋವಾ ಮದ್ಯ ವನ್ನು ಸಾಗಾಟ ಮಾಡುತಿದ್ದ ,
4 ವಾಹನ ಜಪ್ತು ಮಾಡಿ 5 ಜನರನ್ನು ಬಂಧನ ಮಾಡಲಾಗಿದ್ದು ಒಂದು ಕೋಟಿ ರುಪಾಯಿ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement