

ಕಾರವಾರ:- ಬೆಂಗಳೂರು(bangaluru) ಮೂಲದ ಯುವತಿಯನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಬೇಲಿಕೇರಿಯಲ್ಲಿ (Belikeri)ತಮ್ಮ ಮನೆಗೆ ಕರೆತಂದು ಆಕೆಯನ್ನು ಹೆಚ್ಚಿನ ಹಣ ನೀಡುವುದಾಗಿ ನಂಬಿಸಿ ಬಲವಂತವಾಗಿ ವೇಷ್ಯಾವಾಟಿಕೆ ದಂಧೆಗೆ ನೂಕಿದ್ದವರನ್ನು ಅಂಕೋಲ ಠಾಣೆ ಸಿಪಿಐ ಸಂತೋಷ್ ಶಟ್ಟಿ ರವರ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ರಕ್ಷಿಸಿ ದಂಧೆಗೆ ನೂಕಿದ ಇಬ್ಬರನ್ನು ಬಂಧಿಸಿದ ಘಟನೆ ನಡೆದಿದೆ.
ಅಪಾಧಿತರಾದ ಅಂಕೋಲಾ(Ankola) ತಾಲೂಕಿನ ಬೇಲೆಕೇರಿಯ ಬಳ್ಳಾರಿ ಮೂಲದ ರಜಿಯಾ ಗಂಡ ಕಮಲಭಾಷಾ, ( 38) , ಹೊನ್ನಾವರದ (honnavara)ಮಂಕಿ ಮೂಲದ ಆಟೋ ಚಾಲಕ
ಸಂತೋಷ( 27 ) ಬಂಧಿತರಾದವರಾಗಿದ್ದು ,ತಮ್ಮ ಲಾಭಕ್ಕೋಸ್ಕರ ವೇಶ್ಯಾವಾಟಿಕೆ ನಡೆಸುವ ಉದ್ದೇಶದಿಂದ ಬೆಂಗಳೂರು ಮೂಲಕ 26 ವರ್ಷದ ನೊಂದ ಮಹಿಳೆಯನ್ನು ತಾವು ವಾಸವಾಗಿರುವ ಬಾಡಿಗೆ ಮನೆಗೆ (Rent house )ಕರೆಯಿಸಿಕೊಂಡು ಹೆಚ್ಚಿನ ಹಣದ ಆಸೆ ತೋರಿಸಿ ಅವಳ ಇಚ್ಚೆಗೆ ವಿರುದ್ಧವಾಗಿ ವೇಶ್ಯಾವಾಟಿಕೆ ದಂಧೆಗೆ ತೊಡಗಿಸಲು ಒಪ್ಪಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಈ ವಿಷಯ ತಿಳಿದ ಅಂಕೋಲಾ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಸಂತೋಷ ಶೆಟ್ಟಿ ರವರ ತಂಡ ದಾಳಿ ನಡೆಸಿದ್ದು ಇಬ್ಬರು ಗಿರಾಕಿಗಳು ಹಾಗೂ ಒಬ್ಬರು ಸಂತ್ರಸ್ತೆ ಸಿಕ್ಕಿದ್ದು, ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ( police station) ಪ್ರಕರಣ ದಾಖಲಾಗಿದೆ.






