80 ಲಕ್ಷ ಮೌಲ್ಯದ ಮದ್ಯಸಾರ ವಶ: ಪ್ರಕರಣ ದಾಖಲಿಸದಿದ್ದಕ್ಕೆ ಅಬಕಾರಿ ಅಧಿಕಾರಿಯನ್ನು ತರಾಟೆ ತೆಗೆದುಕೊಂಡ ಸತೀಶ್ ಸೈಲ್

80 ಲಕ್ಷ ಮೌಲ್ಯದ ENA ಸ್ಪಿರೀಟ್ ವಶಪಡಿಸಿಕೊಂಡ್ರೂ ಪ್ರಕರಣ ದಾಖಲಿಸಲು ವಿಳಂಬ ಮಾಡಿದ ಅಬಕಾರಿ ಅಧಿಕಾರಿಗಳ ವಿರುದ್ಧ ಕಾರವಾರದ ಶಾಸಕ ಸತೀಶ್ ಸೈಲ್ ತರಾಟೆ ತೆಗೆದುಕೊಂಡ ಘಟನೆ
TextMaster 11 06 06.47.54 TextMaster 11 06 06.47.54

ಕಾರವಾರ :- 80 ಲಕ್ಷ ಮೌಲ್ಯದ ENA ಸ್ಪಿರೀಟ್ ತುಂಬಿದ ಲಾರಿ ವಶಪಡಿಸಿಕೊಂಡ್ರೂ ಪ್ರಕರಣ ದಾಖಲಿಸಲು ವಿಳಂಬ ಮಾಡಿದ ಅಬಕಾರಿ ಅಧಿಕಾರಿಗಳ ವಿರುದ್ಧ ಕಾರವಾರದ ಶಾಸಕ ಸತೀಶ್ ಸೈಲ್ ತರಾಟೆ ತೆಗೆದುಕೊಂಡ ಘಟನೆ ಕಾರವಾರ- ಗೋವಾ ಗಡಿಯ ಮಾಜಾಳಿ ತಪಾಸಣಾ ಕೇಂದ್ರದಲ್ಲಿ ಸೋಮವಾರ ನಡೆದಿದೆ.

ನವಂಬರ್ 4 ರಂದು ತನಿಖೆಕಾಗಿ ಬೀದರ್ ನಿಂದ ಗೋವಾ ಕಡೆ ತೆರಳುತಿದ್ದ ಸ್ಪಿರೀಟ್ ತುಂಬಿದ್ದ ಲಾರಿಯನ್ನು ಕಾರವಾರ -ಗೋವಾ ಗಡಿಯ ಮಾಜಾಳಿಯಲ್ಲಿ ಅಬಕಾರಿ ಇನ್ಸ್ ಪೆಕ್ಟರ್ ಸದಾಶಿವ ಕೊರ್ತಿ ರವರು ಕೆಲವು ದಾಖಲೆ ಕೊರತೆಯಿದ್ದು ಮದ್ಯ ತೆಯಾರಿಕೆಗೆ ಇದನ್ನು ಕೊಂಡೊಯ್ಯುತ್ತಿರುವ ಅನುಮಾನದಲ್ಲಿ ವಶಕ್ಕೆ ಪಡೆದು ಸ್ಪಿರೀಟ್ ನ ಶಾಂಪಲ್ ನನ್ನು ಲ್ಯಾಬ್ ಗೆ ಕಳುಹಿಸಿದ್ದರು.

Advertisement

ಇದಲ್ಲದೇ ಚಾಲಕ,ನಿರ್ವಾಹಕರನ್ನು ಪ್ರಕರಣ ದಾಖಲಿಸದೇ ತನಿಖಾ ಠಾಣೆಯಲ್ಲೇ ಎರಡು ದಿನ ಇರಿಸಿದ್ದಾಗಿ ಶಾಸಕರು ದೂರಿದ್ದು ಪ್ರಕರಣ ದಾಖಲಿಸಿ ಇಲ್ಲವೇ ಅವರನ್ನು ಬಿಡುವಂತೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದಾರೆ.

ಇನ್ನು ಅಧಿಕಾರಿ ಮತ್ತು ಶಾಸಕರ ನಡುವೆ ಮಾತಿಗೆ ಮಾತು ಬೆಳೆದಿದ್ದು ಹಿರಿಯ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಕಾರ್ಖಾನೆಗೆ ಒಯ್ಯವ ಮದ್ಯವೋ ಅಥವಾ ಬಳೆಕ ಮಾಡುವ ಮದ್ಯವೋ ಎಂಬ ಕುರಿತಿ ಲ್ಯಾಬ್ ವರದಿ ಬಂದ ನಂತರ ಬಿಡುವ ಭರವಸೆಯನ್ನು ಅಧಿಕಾರಿಗಳು ನೀಡಿದ ಮೇಲೆ ಪ್ರಕರಣ ಸುಕಾಂತ್ಯ ಕಂಡಿತು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement