ಉತ್ತರ ಕನ್ನಡ ಕರಾವಳಿಯಲ್ಲಿ ಭದ್ರತೆ ಹೆಚ್ಚಿಸಿದ ಕೇಂದ್ರ: ಕರಾವಳಿಯಲ್ಲಿ ಕಸ್ಟಮ್ ಇಲಾಖೆಗೆ ಗಸ್ತು ಬೋಟ್

district/uttara kannada/karwar speed boat for custom department
TextMaster 11 15 10.37.11 TextMaster 11 15 10.37.11

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಸಮುದ್ರದಲ್ಲಿ ಗಸ್ತು ತಿರುಗಲು ತಟರಕ್ಷಕ ಪಡೆ, ಕರಾವಳಿ ಕಾವಲು ಪಡೆಗಳಿವೆ. ಈಗ ಕೇಂದ್ರೀಯ ಅಬಕಾರಿ ತೆರಿಗೆ ಮತ್ತು ಸುಂಕ (ಕಸ್ಟಮ್) ಇಲಾಖೆಯೂ ಈ ಸಾಲಿಗೆ ಸೇರ್ಪಡೆಗೊಂಡಿದೆ.

ತಟ ರಕ್ಷಕ ಪಡೆ, ಕರಾವಳಿ ಕಾವಲು ಪಡೆಯಂತೆ ಕಸ್ಟಮ್ಸ್ ಇಲಾಖೆಗೂ ಗಸ್ತು ತಿರುಗಲು ಬೋಟ್ ನನ್ನು ಕೇಂದ್ರ ಸರ್ಕಾರ ಪೂರೈಕೆ ಮಾಡಿದೆ.

Advertisement

ಮಂಗಳೂರಿನಲ್ಲಿ ಈಗಾಗಲೆ ಇಂತಹ ಬೋಟ್ ವ್ಯವಸ್ಥೆ ಹೊಂದಿದ್ದು, ಇದೇ ಮೊದಲ ಬಾರಿಗೆ ಕಾರವಾರ ವಿಭಾಗಕ್ಕೆ ಬೋಟ್ ಒದಗಿಸಲಾಗಿದೆ.

ವಾಣಿಜ್ಯ ಬಂದರು ಇರುವ ಹಿನ್ನೆಲೆಯಲ್ಲಿ ಕೇಂದ್ರೀಯ ಸುಂಕ ಮತ್ತು ಅಬಕಾರಿ ತೆರಿಗೆ ಇಲಾಖೆಯ ಕಾರವಾರ ವಿಭಾಗದ ಮುಖ್ಯ ಕಚೇರಿ ಕಾರವಾರದಲ್ಲಿದೆ. ಆಮದು ಮತ್ತು ರಫ್ತು ಚಟುವಟಿಕೆಯಿಂದ ಆದಾಯ ಸಂಗ್ರಹಿಸುವ ಕೆಲಸವನ್ನು ಇಲಾಖೆ ಮಾಡುತ್ತಿದೆ. ಸರಕು ಸಾಗಣೆ ಹಡಗುಗಳು ಬಂದರಿಗೆ ಲಂಗರು ಹಾಕಿದ ವೇಳೆ ಹಡಗಿನಲ್ಲಿ ತಪಾಸಣೆ ಕಾರ್ಯವನ್ನೂ ಇಲಾಖೆ ಕೈಗೊಳ್ಳುತ್ತದೆ.

ಸಮುದ್ರ ಮಾರ್ಗದ ಮೂಲಕ ಅಕ್ರಮವಾಗಿ ವಸ್ತುಗಳನ್ನು ಸಾಗಣೆ ಮಾಡುವುದನ್ನು ನಿಯಂತ್ರಿಸುವ ಜವಾಬ್ದಾರಿಯೂ ಇಲಾಖೆಗೆ ಇದೆ. ಹೀಗಾಗಿ ಗಸ್ತು ಚಟುವಟಿಕೆ ನಡೆಸಲು ಸ್ಪೀಟ್ ಬೋಟ್ ಒದಗಿಸಲಾಗಿದೆ. ಮಾಜಾಳಿಯಿಂದ ಕುಮಟಾ ತಾಲ್ಲೂಕಿನ ಬೇಲೆಕಾನ ಪ್ರದೇಶದವರೆಗೆ ಬೋಟ್ ಗಸ್ತು ನಡೆಸಲಿದೆ.

ಸದ್ಯ ಎರಡನೇ ದರ್ಜೆಯ ಚಿಕ್ಕ ಗಾತ್ರದ ಸ್ಪೀಡ್ ಬೋಟ್ ಒದಗಿಸಲಾಗಿದೆ. ಒಬ್ಬರು ಎಕ್ಸಿಕ್ಯೂಟಿವ್ ಅಧಿಕಾರಿ ಸೇರಿದಂತೆ ಆರು ಮಂದಿ ಸಿಬ್ಬಂದಿ ಬೋಟ್ ಮೂಲಕ ಗಸ್ತು ತಿರುಗುವ ಚಟುವಟಿಕೆ ನಡೆಸಲಿದ್ದಾರೆ.

ಕಾರವಾರದಲ್ಲಿ ವಾಣಿಜ್ಯ ಬಂದರು ಇರುವುದರಿಂದ
ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ವಹಿವಾಟು ಸಹ ನಡೆಯುತ್ತದೆ. ಇದಲ್ಲದೇ ಅಕ್ರಮವಾಗಿ ಮದ್ಯ ಸಾಗಾಟ, ಚಿನ್ನ ಸಾಗಾಟ ಹೀಗೆ ಅನೇಕ ಅಕ್ರಮ ಚಟುವಟಿಕೆಗಳು ನಡೆಯುವುದನ್ನು ತಡೆಯಲು ಕಾರವಾರದ ಕಸ್ಟಮ್ ಇಲಾಖೆಗೆ ಇದು ನೆರವಾಗಲಿದೆ.

ಇದಲ್ಲದೇ ವಾಣಿಜ್ಯ ಬಂದರು ಸಹ ಸಾಗರಮಾಲಾ ಯೋಜನೆಯಡಿ ವಿಸ್ತರಣೆಯ ಪ್ರಸ್ತಾಪ ಇದ್ದು ,ಬೇಲಿಕೇರಿ ಬಂದರನ್ನು ಸಹ ಅಭಿವೃದ್ಧಿ ಪಡಿಸಲಾಗಿದೆ.ಈ ಹಿನ್ನೆಲೆಯಲ್ಲಿ ಹೆಚ್ಚಿನ ಸುಂಕ ಸಂಗ್ರಹ ಹಾಗೂ ಅಕ್ರಮ ಚಟುವಟಿಕೆ ತಡೆಯುವ ದೃಷ್ಟಿಯಿಂದ ಕರಾವಳಿ ಭಾಗದಲ್ಲಿ ಗಸ್ತು ಬೋಟ್ ಅವಷ್ಯವಿದೆ. ಕುಮಟಾ, ಹೊನ್ನಾವರ, ಭಟ್ಕಳ ವ್ಯಾಪ್ತಿಯಲ್ಲಿಯೂ ಇಲಾಖೆ ಕಚೇರಿ ಹೊಂದಿದ್ದು ಅಲ್ಲಿನ ಬಂದರು, ಸಮುದ್ರ ತೀರದಲ್ಲಿ ಅಕ್ರಮ ಸಾಗಾಟದ ಚಟಿವಟಿಕೆ ಇದೆ. ಹೀಗಾಗಿ ದೊಡ್ಡ ಗಾತ್ರದ
ಗಸ್ತು ಬೋಟ್ ಇಲಾಖೆಗೆವಅಗತ್ಯವಿದೆ. ಈಗಾಗಲೆ ಕೇಂದ್ರ ಸರ್ಕಾರಕ್ಕೂ ಪ್ರಸ್ತಾವ ಸಲ್ಲಿಕೆಯಾಗಿದ್ದು ,ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಇದೀಗ ಭದ್ರತೆ ,ಅಕ್ರಮ ಚಟುವಟಿಕೆ ತಡೆಯಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement