
ಕಾರವಾರ,ಪೆಬ್ರವರಿ 12 :- ನಗದು ರಹಿತ ವ್ಯವಹಾರಕ್ಕೆ ಕೇಂದ್ರ ಸರ್ಕಾರ ಹೆಚ್ಚು ಒತ್ತು ನೀಡುತ್ತಾ ಬಂದಿದೆ. ಇದೀಗ ಗೂಗಲ್ ಪೇ,( Google pay )ಪೋನ್ ಪೇ ( phonepe) ಸೇರಿದಂತೆ ಹಲವು ಅವಕಾಶಗಳು ಗ್ರಾಹಕರಿಗೆ ಸಿಗುತ್ತಿದೆ. ಆದ್ರೆ ಬಸ್(bus) ನಲ್ಲಿ ಪ್ರಯಾಣಿಸುವ ವೇಳೆ ಕೈಯಲ್ಲಿ ಹಣ ಇಲ್ಲ ಅಂದ್ರೆ ಪ್ರಯಾಣಿಸುವುದೇ ಕಷ್ಟ. ಹಣ ಇದ್ದರೂ ಚಿಲ್ಲರೇ ಇಟ್ಟುಕೊಂಡು ಪ್ರಯಾಣಿಸಬೇಕು.
ಆದ್ರೆ ಇನ್ನುಮುಂದೆ ಹಣವಿಲ್ಲದೇ ಕೇವಲ ನಿಮ್ಮ ಮೊಬೈಲ್ ನಲ್ಲಿ ಯುಪಿಐ ಮೂಲಕವೂ ಹಣ ಪಾವತಿಸಬಹುದು.
ಹೌದು ಇದೀಗ ಹುಬ್ಬಳ್ಳಿ (hubli)ವಾಯುವ್ಯ ಸಾರಿಗೆ ಇಲಾಖೆ ಇಂತದೊಂದು ಪ್ರಯೋಗಕ್ಕೆ ಮುಂದಾಗಿದ್ದು ಹುಬ್ಬಳ್ಳಿ ನಂತರ ಮೊದಲ ಬಾರಿ ಶಿರಸಿಯಲ್ಲಿ (sirsi) ಕ್ಯೂಆರ್ ಕೋಡ್ ಸ್ಕಾನ್ ಮಾಡುವ ಮೂಲಕ ನೇರ ಇಲಾಖೆಯ ಖಾತೆಗೆ ಹಣ ಸಂದಾಯ ಮಾಡಿ ಟಿಕೆಟ್ ಪಡೆಯುವ ಅವಕಾಶ ಕಲ್ಪಿಸಿದೆ.

ಜಿಲ್ಲೆಯಲ್ಲಿ ಎಲ್ಲಾ ತಾಲೂಕಿಗೂ ಈ ನಿಯಮ ಪ್ರಯೋಗಿಕವಾಗಿ ಜಾರಿ ಮಾಡಲಾಗಿದ್ದು 500 ಕಂಡಕ್ಟರ್ ಗಳಿಗೆ ಯುನಿಕ್ ಕ್ಯೂಆರ್ ಕೋಡ್ ನನ್ನು ನೀಡಲಾಗಿದೆ. ಪ್ರಯಾಣಿಕರು ಕಂಡಕ್ಟರ್ ಬಳಿ ಇರುವ ಕ್ಯೂಆರ್ ಕೋಡ್ ನನ್ನು ಮೊಬೈಲ್ ನಲ್ಲಿ ಸ್ಕಾನ್ ಮಾಡಿ ,ಪೋನ್ ಪೇ, ಗೂಗಲ್ ಪೇ, ಬ್ಯಾಂಕ್ ಖಾತೆಯ ಕ್ಯೂಆರ್ ಕೋಡ್ ಮೂಲಕ ಹಣ ಪಾವತಿಸಬಹುದಾಗಿದೆ. ಈ ಮೂಲಕ ವಾಯುವ್ಯ ಸಾರಿವೆ ಇಲಾಖೆ ಡಿಜಿಟಲೀಕರಣ ವಾಗುತಿದ್ದು ಒಂದು ಹೆಜ್ಜೆ ಮುಂದೆ ಇಡುವ ಮೂಲಕ ಪ್ರಯಾಣಿಕರ ಪ್ರಯಾಣ ನಗದು ರಹಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವಂತೆ ಮಾಡಿದೆ.






