
Honnavara 28 October 2024 :- ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳು ವೈದ್ಯ ರವರ ಉಸ್ತುವಾರಿಯಲ್ಲಿ ಬರುವ ಕುಮಟಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ದಿನಕರ್ ಶಟ್ಟಿ ಸ್ವ ಕ್ಷೇತ್ರವಾದ ಹೊನ್ನಾವರ ಕುಮಟಾ ವಿಧಾನಸಭಾ ಕ್ಷೇತ್ರದ ಸಾಲಕೋಡು ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಕುಸಿಯುವ ಹಂತ ತಲುಪಿದೆ.
20 ವರ್ಷದ ಹಿಂದೆ ನಿರ್ಮಾಣವಾದ ಹೊನ್ನಾವರ ತಾಲೂಕಿನ ಸಾಲಕೋಡು ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಸಂಪೂರ್ಣ ಶಿಥಿಲಾವಸ್ತೆ ತಲುಪಿದ್ದು ಕಚೇರಿಯ ಮೇಲ್ಭಾಗದ ಹಂಚುಗಳು ಕಿತ್ತು ಬಿದ್ದಿದೆ.

ಮಳೆ ಬಂದರೇ ಕಚೇರಿ ಒಳಗೆ ನೀರು ಇನುಗುತ್ತದೆ. ಗೋಡೆಗಳು ಬಿರುಕು ಬಿಟ್ಟಿದ್ದು ಛಾವಣಿಯ ಹಲಗೆಗಳು ಲಡ್ಡು ಹಿಡಿದಿದೆ. ಕಟ್ಟಡ ಯಾವಾಗ ಬೇಕಾದರೂ ಕುಸಿಯುವ ಹಂತದಲ್ಲಿದೆ.

ಹೀಗಿದ್ದರೂ ಈ ದುಸ್ತಿತಿಯಲ್ಲಿ ಗ್ರಾಮದ ಆಡಳಿತಾಧಿಕಾರಿ ,ಸಿಬ್ಬಂದಿ ಇದೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತಿದ್ದಾರೆ.
ಮಳೆ ಬಂದರೇ ಕಡತಗಳು ನೆನೆಯುತ್ತವೆ ,ಗೋಡೆಗಳು ಒದ್ದೆಯಾದರೇ ಯಾವಾಗ ಬೇಕಾದರೂ ಬೀಳುವ ಹಂತದಲ್ಲಿದೆ. ಇನ್ನು ಇಲ್ಲಿನ ಶೌಚಾಲಯ ಸಂಪೂರ್ಣ ಹಾಳಾಗಿದೆ.

ಈಗಾಗಲೇ ಕಟ್ಟಡ ದುರಸ್ತಿಗಾಗಿ ಮನವಿ ಮಾಡಿದರೂ ಅನುದಾನದ ಕೊರತೆಯಿಂದ ಈವರೆಗೂ ದುರಸ್ತಿ ಆಗಿಲ್ಲ. ಹೊಸ ಕಟ್ಟಡ ನಿರ್ಮಿಸುವ ಭರವಸೆ ಸಿಕ್ಕಿದ್ದರೂ ಕಡತ ಧೂಳು ಹಿಡಿಯುತ್ತಿದೆ.
ಸ್ಥಳೀಯ ಜನರು ದೊಡ್ಡದಾಗಿ ಮಳೆ ಬಂದರೇ ಈ ಕಚೇರಿಗೆ ತೆರಳಲು ಭಯ ಪಟ್ಟರೇ ,ಅಧಿಕಾರಿಗಳು ಜೀವ ಕೈಯಲ್ಲಿ ಹಿಡಿದು ಕಾರ್ಯ ನಿರ್ವಹಿಸಬೇಕು.
ಇದೇ ಕ್ಷೇತ್ರದ ಶಾಸಕ ಬಿಜೆಪಿ ದಿನಕರ್ ಶಟ್ಟಿ, ಸಚಿವರಾಗಿರುವ ಮಂಕಾಳು ವೈದ್ಯ ರಿಗೆ ಮಾತ್ರ ತಮ್ಮ ಕ್ಷೇತ್ರದ ಸಮಸ್ಯೆ ಆಲಿಸಲು ಅವರಿಗೆ ಸಮಯವೇ ಇಲ್ಲ.
ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನಿಸಬೇಕಿದ್ದು , ಸದಾ ಬಿಜೆಪಿ -ಕಾಂಗ್ರೆಸ್ ಎಂದು ಒಬ್ಬರ ಮೇಲೆ ಒಬ್ಬರು ವಿರೋಧ ಮಾಡಿಕೊಂಡು ತಿರುಗುವುದಕ್ಕಿಂತ ಕ್ಷೇತ್ರದ ಶಾಸಕರಾಗಿರುವ ಬಿಜೆಪಿ ಶಾಸಕ ದಿನಕರ್ ಶಟ್ಟಿ ,ಉಸ್ತುವಾರಿ ಸಚಿವರಾಗಿರುವ ಮಂಕಾಳು ವೈದ್ಯರು ಮುತುವರ್ಜಿ ವಹಿಸಿ ಕಚೇರಿಯನ್ನು ಸರಿಪಡಿಸುತ್ತಾರ ಎಂಬುದನ್ನು ಕಾದು ನೋಡಬೇಕಿದೆ.
- Shivamogga |ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ ಹೆಸರು ಬರೆದು, ನಿದ್ರೆ ಮಾತ್ರೆಗಳನ್ನು ನುಂಗಿದ ಮಹಿಳೆ
- ಶಿವಮೊಗ್ಗ ,ದಾವಣಗೆರೆಯ 95 ಮಂದಿ ಕಾಂಗೋ ದೇಶದಲ್ಲಿ ಆರೆಷ್ಟ್ , ಕಾರಣ ಏನು?
- Goa ದಲ್ಲಿ ಅಕ್ರಮ ಮದ್ಯ ತಯಾರಿಕೆಗೆ ಕರ್ನಾಟಕದಿಂದಲೇ ಸ್ಪಿರಿಟ್ ಪೂರೈಕೆ? ಹಾಲಿ ಸಚಿವರ ಹೆಸರು!
- Sirsi |ಶಿರಸಿಯಲ್ಲಿ ಹಾರಾಡಿದ ಲಘು ವಿಮಾನ -ಜನರ ಆತಂಕಕ್ಕೆ ಜಿಐಎಸ್ ಸ್ಪಷ್ಟನೆ!
- Uttara kannada |ಜಲಾಶಯಗಳಲ್ಲಿ ನೀರಿನ ಕೊರತೆ; ಜಲವಿದ್ಯುತ್ ಉತ್ಪಾದನೆಗೆ ಭಾರಿ ಹೊಡೆತ!







