Siddapura: ಶಾಲಾ ವಿದ್ಯಾರ್ಥಿಗೆ ಥಳಿಸಿ ಅರ್ಧ ದಾರಿಯಲ್ಲೇ ಇಳಿಸಿದ ನಿರ್ವಾಹಕ!

Siddapura News 06 November 2024:- ಶಾಲೆಗೆ (school) ಹೋಗಲು ಬಸ್ಸು ಹತ್ತಿದ್ದ ವಿದ್ಯಾರ್ಥಿ ಜೊತೆ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಅನುಚಿತವಾಗಿ ವರ್ತಿಸಿದ್ದಾರೆ.
school student was beaten up by the conductor who dropped him from the bus school student was beaten up by the conductor who dropped him from the bus

Report by -shubha sagar

Siddapura News 06 November 2024:- ಶಾಲೆಗೆ (school) ಹೋಗಲು ಬಸ್ಸು ಹತ್ತಿದ್ದ ವಿದ್ಯಾರ್ಥಿ ಜೊತೆ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಅನುಚಿತವಾಗಿ ವರ್ತಿಸಿದ್ದಾರೆ.

ಮುಂಡಗೆತೆಗ್ಗಿಂದ ಸಿದ್ದಾಪುರಕ್ಕೆ (siddapura) ಬಂದಿದ್ದ ಮದನ ಲೋಕೇಶ ನಾಯ್ಕ ಶಿರವಂತೆಯ ಶಾಲೆಗೆ ಹೋಗಬೇಕಿತ್ತು. ಅಲ್ಲಿ ಅವರು 8ನೇ ತರಗತಿ ವಿದ್ಯಾರ್ಥಿಯಾಗಿದ್ದರು. ಇದಕ್ಕಾಗಿ ಆ ವಿದ್ಯಾರ್ಥಿ ಶಿರಸಿ – ಸಿದ್ದಾಪುರ – ಸಾಗರ ಬಸ್ ಹತ್ತಿದ್ದರು.

Advertisement

ಇದನ್ನೂ ಓದಿ:-Siddapura : ಭತ್ತದ ಗದ್ದೆಗೆ ದಾಳಿ ಮಾಡಿದ ಒಂಟಿ ಸಲಗ

ಆದರೆ, ಬಸ್ಸಿನ (Busl ನಿರ್ವಾಹಕ ಆ ವಿದ್ಯಾರ್ಥಿಯನ್ನು ಅನಗತ್ಯವಾಗಿ ನಿಂದಿಸಿ ತಳಿಸಿದ್ದಲ್ಲದೇ, ಬಸ್ಸಿನಿಂದ ಹೊರದಬ್ಬಿದ್ದಾರೆ.

ಬಸ್ಸು ಅರೆಂದೂರ್ ಬಳಿ ತಲುಪಿದಾಗ ವಿದ್ಯಾರ್ಥಿಯನ್ನು ಕೆಳಗಿಳಿಸಿದ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ಬಸ್ಸು ಸಿಬ್ಬಂದಿ ವರ್ತನೆ ವಿರುದ್ಧ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರಿಗೆ ಸಿಬ್ಬಂದಿ ವಿರುದ್ಧ ದೂರು ದಾಖಲಿಸುವುದಾಗಿ ಪಾಲಕರು ಮಾಹಿತಿ ನೀಡಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement