Uttara kannda:ಫಟಾಫಟ್ ಸುದ್ದಿ 14 ನವಂಬರ್ 2024

Uttara kannada News 14 November 2024 :ಉತ್ತರ ಕನ್ನಡ ಜಿಲ್ಲೆಯ ಇಂದಿನ ಪ್ರಮುಖ ಸುದ್ದಿಗಳು ಈ ಕೆಳಗಿನಂತಿದೆ.
Uttrakannda News today Uttrakannda News today

Uttara kannada News 14 November 2024 :ಉತ್ತರ ಕನ್ನಡ ಜಿಲ್ಲೆಯ ಇಂದಿನ ಪ್ರಮುಖ ಸುದ್ದಿಗಳು ಈ ಕೆಳಗಿನಂತಿದೆ.

♦ಫಟಾಫಟ್ ಸುದ್ದಿ -ಮುರುಡೇಶ್ವರ.

ಮುರುಡೇಶ್ವರದ ಹೈವೇ ಹೋಟಲ್ ಬಳಿಯ ರೈಲ್ವೆ ಹಳಿಭಾಗದಲ್ಲಿ ಉಡುಪಿಯ (udupi )ಸಂದೀಪ್ ಬಂಡಾರಿ ಎಂಬುವವರು ರೈಲು ಬಡಿದು ಸಾವು ಕಂಡಿದ್ದಾರೆ. ಘಟನೆ ಸಂಬಂಧ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:-Gokarna :ಖಿನ್ನತೆಯಲ್ಲಿ ಬಳಲುತಿದ್ದ ಮಾನಸಿಕ ವ್ಯಕ್ತಿಗೆ ಹೊಸ ಬೆಳಕು ಮೂಡಿಸಿದ್ದ ನಿರ್ದೇಶಕ ಗುರುಪ್ರಸಾದ್ !

♦ದಾಂಡೇಲಿ-ಜೋಯಿಡಾ

ಮದ್ಯ ವ್ಯಸನಿಯೊಬ್ಬ ಬಾವಿಯಲ್ಲಿ ಬಿದ್ದು ಮೃತಪಟ್ಟ ಘಟನೆ ದಾಂಡೇಲಿಯ ಮಿರ್ನೋಲಿ ಗ್ರಾಮದ ರಾಮ ಸದಾನಂದ ಧರಣಿ ಎಂಬುವವರ ಮನೆಯಲ್ಲಿ ನಡೆದಿದ್ದು , ಮೃತನು ಜೋಯಿಡಾ (joida) ದ ವಿರ್ನೂಲಿ ಗ್ರಾಮದ ಸದಾನಂದ್ ಎಂದು ಗುರುತಿಸಲಾಗಿದ್ದು  ಈತ ಮದ್ಯ ಸೇವಿಸಿ ಮಾನಸಿಕ ಕಿನ್ನತೆಯಿಂದ ಬಳಲುತಿದ್ದನೆಂದು ತಿಳಿದು ಬಂದಿದ್ದು ಘಟನೆ ಸಂಬಂಧ ದಾಂಡೇಲಿ (Dandeli )ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

♦ಫಟಾಫಟ್ ಸುದ್ದಿ -ಶಿರಸಿ.

Sirsi news
ಜಿಂಕೆ ಮಾಂಸ ವಶ

ಮಾಂಸ ಭಕ್ಷಣೆಗಾಗಿ ಜಿಂಕೆಯನ್ನು ಕೊಂದ ವ್ಯಕ್ತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ ಘಟನೆ ಶಿರಸಿಯ ಉಂಚಳ್ಳಿ ನದಿ ಭಾಗದಲ್ಲಿ ನಡೆದಿದ್ದು ,ಗಣಪತಿ ಗೌಡ ಎಂಬಾತನನ್ನು ಬಂಧಿಸಿದ್ದು ಇಬ್ಬರು ಪರಾರಿಯಾಗಿದ್ದಾರೆ.

♦ಫಟಾಫಟ್ ಸುದ್ದಿ- ಕಾರವಾರ.

ಪ್ಲಾಸ್ಟಿಕ್ ವಶ Karwar
ಕಾರವಾರ ನಗರದಲ್ಲಿ ಪ್ಲಾಸ್ಟಿಕ್ ವಶ

ನಗರಪ್ರದೇಶದ ಅಂಗಡಿ ಮುಂಗಟ್ಟುಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಗಳನ್ನು ಬಳಸುತಿದ್ದು ಈ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ದಾಳಿ ನಡೆಸಿ ಪಶಕ್ಕೆ ಪಡೆದರು. 

ಕಾರವಾರ ನಗರದ 25 ಕ್ಕೂ ಹೆಚ್ಚು ಅಂಗಡಿಗಳಿಗೆ ದಾಳಿ ನಡೆಸಿದ ಅಧಿಕಾರಿಗಳು 72 kg ಪ್ಲಾಸ್ಟಿಕ್ ( plastic) ವಶಕ್ಕೆ ಪಡೆದು 6200 ದಂಡ ವಿಧಿಸಿದ್ದಾರೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement