Murdeshwar : ಮುರುಡೇಶ್ವರ ದಲ್ಲಿ ಹೊರ ರಾಜ್ಯದ ಮಹಿಳೆ ತಂದು ವೇಶ್ಯಾವಾಟಿಕೆ -ಮೂರು ಜನರ ಬಂಧನ.

ಕಾರವಾರ :- ಮುರುಡೇಶ್ವರ (Murdeshwar) ದಲ್ಲಿ ವೇಶ್ಯಾ ವಾಟಿಕೆ  ನಡೆಸುತಿದ್ದ ಲಾಡ್ಜ್ ಮೇಲೆ  ಪೊಲೀಸರ ದಾಳಿ ನಡೆಸಿ ಕಲ್ಕತ್ತಾ ಮೂಲದ ಮಹಿಳೆಯರ ರಕ್ಷಣೆ ಮಾಡಲಾಗಿದೆ.
Murudeshwar naik Residency Murudeshwar naik Residency

Murdeshwar : ಮುರುಡೇಶ್ವರ ದಲ್ಲಿ ಹೊರ ರಾಜ್ಯದ ಮಹಿಳೆ ತಂದು ವೇಶ್ಯಾವಾಟಿಕೆ -ಮೂರು ಜನರ ಬಂಧನ

ಕಾರವಾರ :- ಮುರುಡೇಶ್ವರ (Murdeshwar) ದಲ್ಲಿ ವೇಶ್ಯಾ ವಾಟಿಕೆ  ನಡೆಸುತಿದ್ದ ಲಾಡ್ಜ್ ಮೇಲೆ  ಪೊಲೀಸರ ದಾಳಿ ನಡೆಸಿ ಕಲ್ಕತ್ತಾ ಮೂಲದ ಮಹಿಳೆಯರ ರಕ್ಷಣೆ ಮಾಡಲಾಗಿದೆ.

ಲಾಡ್ಜ್ ಮಾಲೀಕ ಸೇರಿ ಮೂರು ಜನರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.

Advertisement

ಮುರುಡೇಶ್ವರ ದ ನಾಯ್ಕ ರೆಸಿಡೆನ್ಸಿ ಮೇಲೆ ದಾಳಿ ಮಾಡಿದ ಸಿ.ಪಿಐ ಸಂತೋಷ್ ಕಾಯ್ಕಿಣಿ ತಂಡ ಸಿದ್ದಾಪುರದ ಗಣೇಶ್ ನಾಯ್ಕ, ಮುರುಡೇಶ್ವರದ ನಾಯ್ಕ ರೆಸಿಡೆನ್ಸಿ ಮಾಲೀಕ ವಿನಾಯಕ ಮಹಾದೇವ್ ನಾಯ್ಕ,   ರೂಮ್ ಬಾಯ್ ಆಕಾಶ್ ಅನಿಲ್ ಎಂಬುವವರ ಬಂಧನ ಮಾಡಿದ್ದಾರೆ.

ಇದನ್ನೂ ಓದಿ:-Murdeshwar ದೇವಾಲಯದ ಗೋಪುರದ ತುತ್ತ ತುದಿಗೆ ನಿಂತು ಪ್ರವಾಸಿಗ ಮಾಡಿದ್ದೇನು ಗೊತ್ತಾ?

ಬಂಧಿತರಿಂದ 4630 ನಗದು, ಎರಡು ಮೊಬೈಲ್, ಕಾಂಡಮ್ ಪ್ಯಾಕೇಟ್ ಗಳು, ಒಂದು ಬೈಕ್ ವಶಕ್ಕೆ ಪಡೆಯಲಾಗಿದ್ದು ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಪೊಲೀಸರ FIR ನಲ್ಲಿ ಏನಿದೆ?

staymaker naik residency murdeshwar karwar hotels 7io7dfp072

ಈ ದಿವಸ ದಿನಾಂಕ : 25-06-2025 ರಂದು  ಶ್ರೀ ಸಂತೋಷ್ ಕಾಯ್ಕಿಣಿ  ಪೊಲೀಸ ವೃತ್ತ ನಿರೀಕ್ಷಕರು  ಮುರುಡೇಶ್ವರ ವೃತ್ತ  ಆದ ನನಗೆ ಮುರುಡೇಶ್ವರದ  ಜನತಾ ವಿದ್ಯಾಲಯದ ಎದುರಿಗೆ ಇರುವ ನಾಯಕ್ ರೆಸಿಡೆನ್ಸಿ ಲಾಡ್ಜ್ ಒಂದರಲ್ಲಿ ಒಬ್ಬ ಮಹಿಳೆಯನ್ನು ಇಟ್ಟು ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಅಂತ ಖಚಿತ ಮಾಹಿತಿ ಬಂದಂತೆ  ಹನಮಂತ ಬಿರಾದಾರ ಪಿ.ಎಸ್ .ಐ ಮುರ್ಡೇಶ್ವರ ಠಾಣೆ ಮತ್ತು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ಹೋಗಿ ದಾಳಿ ಮಾಡಲಾಗಿ  ಕಲ್ಕತ್ತಾ ಮೂಲದ .   ಮಹಿಳೆಯನ್ನು ಬೆಂಗಳೂರು  ನಿಂದ ದುರ್ವ್ಯಾಪರಕ್ಕಾಗಿ ಗಣೇಶ್ ನಾಯ್ಕ್ ಸಾ- ಸಿದ್ದಾಪುರ   ಮುರುಡೇಶ್ವರಕ್ಕೆ   ಮಹಿಳೆಯ ಆರ್ಥಿಕ ಪರಿಸ್ಥಿತಿಯನ್ನು ಬಳಕೆ ಮಾಡಿಕೊಂಡು ಹಣದ ಆಮಿಷವೊಡ್ಡಿ ವೇಶ್ಯಾವಾಟಿಕೆ ನಡೆಸಲು ತಂದು  “ Naik Residency” ಲಾಡ್ಜ್ ಗೆ ತಂದು ಬಿಟ್ಟಿದ್ದರಿಂದ ಆರೋಪಿಗಳಾದ :-

1.ಗಣೇಶ್ ನಾಯ್ಕ್ ಸಾ- ಸಿದ್ದಾಪುರ

 2. ವಿನಾಯಕ ಮಹಾದೇವ್ ನಾಯ್ಕ್ ಸಾ ಮುರ್ಡೇಶ್ವರ ( ನಾಯ್ಕ್ ಲಾಡ್ಜ್ ಮಾಲೀಕ)

3. ಆಕಾಶ್ ಅನಿಲ್ ಮುರ್ಡೇಶ್ವರ ( ರೂಮ್ ಬಾಯ್)

ಮೇಲೆ ಮುರ್ಡೇಶ್ವರ ಠಾಣೆ ಗುನ್ನ ನಂ : 67/2025 u/s 143 (1)(2) , 144(2) rw 3(5) BNS -2023 & 3,4 Immoral Traffic( prevention) Act -1956 ಪ್ರಕಾರ ಪ್ರಕರಣ ದಾಕಲಿಸಿ ಕೃತ್ಯಕ್ಕೆ ಬಳಸಿದ ನಗದು.     –  4630 ₹,ಮೊಬೈಲ್ ಫೋನ್ – 2, ಕಾಂಡೊಮ್ ಪ್ಯಾಕೆಟ್ – 10,ಲಾಡ್ಜ್ ರಿಜಿಸ್ಟರ್ -1ಮೋಟಾರ್ ಸೈಕಲ್ -1.

ಈ ರೀತಿಯಾಗಿ ಇದ್ದು  ಪ್ರಕರಣದ ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಂಡು ನೊಂದ ಮಹಿಳೆಯನ್ನು ಸಾಂತ್ವನ ಕೇಂದ್ರ ಭಟ್ಕಳಕ್ಕೆ ಬಿಡಲಾಗಿರುತ್ತದೆ.

IMG 20250125 WA0007
ಪ್ರಕೃತಿ ಮೆಡಿಕಲ್ ,ಕಾರವಾರ.
Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement