Shivamogga| ತ್ಯಾವರೆಕೊಪ್ಪ ಸಿಂಹಧಾಮಕ್ಕೆ ಬಂದ ಬಿಳಿ ಹುಲಿ-ಯಾವೆಲ್ಲಾ ಪ್ರಾಣಿಗಳು ಬಂದಿವೆ ವಿವರ ಇಲ್ಲಿದೆ.

Shivamogga Tyavarekoppa Lion Safari welcomes a white tiger from Aurangabad along with new tigers and lions, adding excitement for visitors.
shivamogha zoo shivamogha zoo

Shivamogga| ತ್ಯಾವರೆಕೊಪ್ಪ ಸಿಂಹಧಾಮಕ್ಕೆ ಬಂದ ಬಿಳಿ ಹುಲಿ-ಯಾವೆಲ್ಲಾ ಪ್ರಾಣಿಗಳು ಬಂದಿವೆ ವಿವರ ಇಲ್ಲಿದೆ.

ಶಿವಮೊಗ್ಗ:ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ವಿವಿಧ ಪ್ರವಾಸಿ ತಾಣಗಳಿವೆ. ಇವುಗಳಲ್ಲಿ ಶಿವಮೊಗ್ಗ ನಗರದ ಹತ್ತಿರವಿರುವ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದ ಸಹ ಒಂದು. ಪ್ರತಿದಿನ ನೂರಾರು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ದೇಶ-ವಿದೇಶದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದು, ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ.

ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹಧಾಮ ಅತ್ಯಂತ ಪ್ರಮುಖ ಪ್ರವಾಸಿ ತಾಣವಾಗಿದ್ದು, ಮೈಸೂರು, ಬನ್ನೇರುಘಟ್ಟದ ನಂತರ ಶಿವಮೊಗ್ಗದ ಹುಲಿ ಮತ್ತು ಸಿಂಹಧಾಮ ರಾಜ್ಯದಲ್ಲಿ ಹೆಸರುವಾಸಿಯಾಗಿದೆ. ಈ ಮೃಗಾಲಯವನ್ನು ಅರಣ್ಯದ ನಡುವೆ 250 ಹೆಕ್ಟೇರ್ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ.

Advertisement

ಆದ್ದರಿಂದ ಪ್ರವಾಸಿಗರು ಪ್ರಾಣಿ ಲೋಕದ ಜೊತೆಗೆ ಸಸ್ಯ ಪ್ರಪಂಚವನ್ನು ಕಣ್ತುಂಬಿಕೊಳ್ಳಲು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇನ್ನು ಅರಣ್ಯದ ನಡುವೆ ಪ್ರಾಣಿಗಳನ್ನು ಸ್ವತಂತ್ರವಾಗಿ ಓಡಾಡುವುದನ್ನು ನೋಡಿ ಆನಂದಿಸಲು ಇಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ.ಇದೀಗ ಈ ಮೃಗಾಲಯ ಹೆಚ್ಚಿನ ಪ್ರಾಣಿಗಳು ಕಾಣಲು ಸಿಗುತ್ತಿವೆ.

ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ  ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ (Zoo) ನೂತನ ಸದಸ್ಯರ ಆಗಮನವಾಗಿದೆ. ಶಿವಮೊಗ್ಗಕ್ಕೆ ಆಗಮಿಸಿದಾಗಿನಿಂದ ಕ್ವಾರಂಟೈನ್‌ನಲ್ಲಿದ್ದ ಪ್ರಾಣಿಗಳು ಈಗ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೃಗಾಲಯದ ಅಧಿಕಾರಿಗಳು ಈ ಪ್ರಾಣಿಗಳ ಚಿತ್ರ ಬಿಡುಗಡೆ ಗೊಳಿಸಿದ್ದಾರೆ.

ಇದೇ ಮೊದಲ ಬಾರಿ ಶಿವಮೊಗ್ಗದ ಮೃಗಾಲಯಕ್ಕೆ ಔರಂಗಬಾದ್ ನಿಂದ  ಬಿಳಿ ಹುಲಿ ಆಗಮನವಾಗಿದೆ. ಇನ್ನು, ಇದೇ ಮೊದಲ ಬಾರಿ ಹೊರ ರಾಜ್ಯದಿಂದ ಹುಲಿ, ಸಿಂಹಗಳನ್ನು ತರಿಸಲಾಗಿದೆ.

ಮೂರು ಬಂಗಾಳ ಹುಲಿಗಳು

ಔರಂಗಬಾದ್ ನಿಂದ 2 ವರ್ಷದ ಶ್ರಾವಣಿ ಮತ್ತು 5 ವರ್ಷದ ರೋಹಿಣಿ, ಇಂದೋರ್‌ ಮೃಗಾಲಯದಿಂದ 3 ವರ್ಷ ಭದ್ರಾ ಆಗಮಿಸಿದೆ.

ಎರಡು ಸಿಂಹಗಳ ಆಗಮನ

kannadavani zoo photo
ತ್ಯಾವರೆಕೊಪ್ಪ ಸಿಂಹಧಾಮಕ್ಕೆ ಬಂದ ಹೊಸ ಸಿಂಹಗಳು

ಇಂದೋರ್‌ ಮೃಗಾಲಯದಿಂದ ಎರಡು ಸಿಂಹಗಳು ಆಗಮಿಸಿವೆ. 2 ವರ್ಷದ ಸಿಂಹ ಶಿವ, 2 ವರ್ಷದ ಸಿಂಹಿಣಿ ಸಾರಾ ಆಗಮಿಸಿದ್ದು ಮೃಗಾಲಯದ ಮೆರುಗು ಹೆಚ್ಚಿಸಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement