Karwar | ಅಮದಳ್ಳಿಯಲ್ಲಿ ಸಿಲೆಂಡರ್ ಸ್ಪೋಟ,ಆಟೋ ,ಎರಡು ಕಾರುಗಳು ಬೆಂಕಿಗಾಹುತಿ
Karwar news (17December 2025) :– ಉತ್ತರ ಕನ್ನಡ ಜಿಲ್ಲೆಯ ಕಾರವಾರ (karwar) ತಾಲೂಕಿನ ಅಮದಳ್ಳಿಯಲ್ಲಿ ತಡರಾತ್ರಿ ಎಲ್.ಪಿ.ಜಿ ಸಿಲೆಂಡರ್ ಸ್ಪೋಟಿಸಿ ಭೀಕರ ಅಗ್ನಿ ಅವಘಡ ಸಂಭವಿಸಿ, ಮನೆಯ ಮುಂಭಾಗ ನಿಲ್ಲಿಸಿಟ್ಟಿದ್ದ ಎರಡು ಕಾರುಗಳು ಹಾಗೂ ಒಂದು ಆಟೋ ರಿಕ್ಷಾ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
Karwar| ಕಾರವಾರ ಜೈಲಿನಲ್ಲಿ ಮತ್ತೆ ಸಿಕ್ತು ಮೊಬೈಲ್ ಹಲವು ವಸ್ತುಗಳು| ದೂರು ದಾಖಲಿಸಿದ ಜೈಲು ಅಧಿಕಾರಿ.
ಅಟೋದಲ್ಲಿ ಇದ್ದ ಎಲ್.ಪಿ.ಜಿ ಕಿಟ್ ನಲ್ಲಿ ಲೀಕೇಜ್ ಆಗಿ ಅಚಾನಕ್ ಹೊತ್ತಿಕೊಂಡ ಬೆಂಕಿಯ ಕೆನ್ನಾಲಿಗೆಗೆ ವಾಹನಗಳು ಕ್ಷಣಾರ್ಧದಲ್ಲೇ ಹೊತ್ತಿ ಉರಿದಿದ್ದು, ಕಾರುಗಳು ಹಾಗೂ ಆಟೋ ರಿಕ್ಷಾ ಸಂಪೂರ್ಣ ಸುಟ್ಟುಹೋಗಿದೆ.

ಸುಫ್ರೀನ್ ಫರ್ನಾಂಡಿಸ್ ಹಾಗೂ ಥಾಮಸ್ ಫರ್ನಾಂಡಿಸ್ ಎಂಬುವರಿಗೆ ಸೇರಿದ ವಾಹನಗಳು ಬೆಂಕಿಗಾಹುತಿಯಾಗಿದ್ದು ,ಲಕ್ಷಾಂತರ ರುಪಾಯಿ ಹಾನಿ ಸಂಭವಿಸಿದೆ. ಸ್ಥಳೀಯರು ಬೆಂಕಿ ಕಾಣುತ್ತಿದ್ದಂತೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರೂ, ಆಗಲೇ ವಾಹನಗಳು ಬಹುತೇಕ ಸುಟ್ಟು ಹೋಗಿವೆ ಎಂದು ತಿಳಿದುಬಂದಿದೆ.

Karwar | ಕಾಲೇಜು ವಿದ್ಯಾರ್ಥಿಗಳಿಗೆ ಕಾರಿನಲ್ಲಿ ಅಡ್ಡಗಟ್ಟಿ ಗನ್ ತೋರಿಸಿ ಬೆದರಿಕೆ ! ಏನಿದು ಘಟನೆ
ಘಟನೆ ಸಿಲೆಂಡರ್ ಲೀಕೇಜ್ ನಿಂದ ಎಂದು ಅಂದಾಜಿಸಲಾಗಿದ್ದು . ಈ ಕುರಿತು ಕಾರವಾರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.









