Karwar| ಕಡಲ ತೀರದಲ್ಲಿ ಸೀಗಲ್ ಹಕ್ಕಿಯ ದೇಹದಲ್ಲಿ ಚೀನಾ ಜಿಪಿಎಸ್ ಟ್ರ್ಯಾಕರ್ ಪತ್ತೆ.
ವರದಿ-ಸಾಗರ್.
Karwar news (17 December 2025) :– ಕಾರವಾರ ಕಡಲ ತೀರ ಭಾಗದ ತಿಮ್ಮಕ್ಕ ಗಾರ್ಡನ್ ಹಿಂಭಾಗದಲ್ಲಿ ಕೂತಿದ್ದ ಸೀಗಲ್ ಹಕ್ಕಿಯ ಬೆನ್ನಿನ ಭಾಗದಲ್ಲಿ ಚೈನಾದ (china)ಜಿಪಿಎಸ್ (GPS)ಟ್ರ್ಯಾಕರ್ ಕಂಡುಬಂದಿದೆ.
ನೋಡಲು ಭಿನ್ನವಾಗಿ ಕಂಡ ಈ ಹಕ್ಕಿಯನ್ನು ನೋಡಿದ ಸ್ಥಳೀಯರು ಅರಣ್ಯ ಇಲಾಖೆಯ ಮರೈನ್ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
GPS ಟ್ರ್ಯಾಕರ್ ಬಳಸಿ ಉದ್ಯಮಿಯಿಂದ ₹50ಲಕ್ಷ ದರೋಡೆ ಮಾಡಿದ್ದ ಕಳ್ಳರ ಬಂಧನ!
ಬಳಿಕ ಸ್ಥಳಕ್ಕೆ ಬಂದ ಅಧಿಕಾರಿಗಳು ಹಕ್ಕಿಯನ್ನು ಹಿಡಿದು ಪರಿಶೀಲಿಸಿದ್ದು ,ಸೀಗಲ್ ನ ಬೆನ್ನಿನಲ್ಲಿದ್ದ ಜಿಪಿಎಸ್ ನಲ್ಲಿ ಚೈನೀಸ್ ವಿಜ್ಞಾನ ಅಕಾಡೆಮಿಯ ರಿಸರ್ಚ್ ಸೆಂಟರ್ ಫಾರ್ ಇಕೋ-ಎನ್ವಿರಾನ್ಮೆಂಟಲ್ ಸೈನ್ಸ್ ವಿಳಾಸ ಪತ್ತೆಯಾಗಿದೆ.
Uttara kannda ಲಾರಿಯಲ್ಲಿ ಗುಪ್ತ ಕಂಪಾರ್ಟಮೆಂಟ್ ಹೊರತೆಗೆದಾಗ ಸಿಕ್ತು ಗೋವಾ ಮದ್ಯ!
ಸೀಗಲ್ ಹಕ್ಕಿಗಳ ಚಲನ ವಲನ, ಆಹಾರ ಹಾಗೂ ವಲಸೆಯನ್ನು ಗುರುತಿಸಲು ಜಿಪಿಎಸ್ ಟ್ರ್ಯಾಕರ್ ಬಳಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸದ್ಯ ಅಧಿಕಾರಿಗಳು ಅಕಾಡೆಮಿಯ ಸಂಪರ್ಕಕ್ಕೆ ಪ್ರಯತ್ನಿಸುತ್ತಿದ್ದು, ಹಕ್ಕಿಯನ್ನು ಮರೈನ್ ಅರಣ್ಯ ವಿಭಾಗದ ಕಚೇರಿಯಲ್ಲಿ ಇರಿಸಲಾಗಿದೆ.
ಹಿಂದೆಯೂ ಸಿಕ್ಕಿತ್ತು ಟ್ರಾಕರ್ !

ಕಳೆದ ವರ್ಷ ಕಾರವಾರ ಬೈತಕೋಲ್ ಬಂದರಿನ ಬಳಿ ಹದ್ದಿಗೆ ಜಿಪಿಎಸ್ ಟ್ರಾಕರ್ ಹಾಕಿರುವುದು ಪತ್ತೆಯಾಗಿತ್ತು. ಇದು ಸಹ ಇವುಗಳ ಅಧ್ಯಯನಕ್ಕೆ ಬಳಕೆ ಮಾಡಿರುವುದು ತಿಳಿದು ಬಂದಿತ್ತು.
Karwar ಕದಂಬ ನೌಕಾನೆಲೆ ವ್ಯಾಪ್ತಿಯಲ್ಲಿ ಟ್ರಾಕರ್ ಅಳವಡಿಸಿದ ರಣಹದ್ದು ಪತ್ತೆ!
ಆದರೇ ಅಧ್ಯಯನದ ನೆಪದಲ್ಲಿ ಕಾರವಾರ ಭಾಗದಲ್ಲಿ ಇರುವ ಕದಂಬ ನೌಕಾನೆಲೆಯ ರಹಸ್ಯ ಸೋರಿಕೆಯ ಆತಂಕ ಕಾಡುತ್ತಿದೆ.
ಇದೀಗ ಸಿಕ್ಕಿರುವ ಸೀಗಲ್ ಟ್ರಾಕರ್ ಚೈನಾದ್ದು ಎಂಬುದು ತಿಳಿದಿದೆ.ಆದರೇ ಅವರ ಸಂಪರ್ಕ ಮಾಡಲು ಅರಣ್ಯ ಇಲಾಖೆಗೂ ಸಾಧ್ಯವಾಗಿಲ್ಲ .







