Yallapur |ನಾಲಿಗೆ ಹಾಗೂ ನಡವಳಿಕೆಯಲ್ಲಿ ಜವಾಬ್ದಾರಿ ಇರಬೇಕು-ಹೆಬ್ಬಾರ್
Yallapur news:- ಯಲ್ಲಾಪುರ (yallapur)ಶಾಸಕ ಹಾಗೂ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಅವರು ರಂಜಿತಾ ಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ್ದು,ಮೃತ ರಂಜಿತಾ ಕುಟುಂಬಕ್ಕೆ ಸರ್ಕಾರದಿಂದ 8.20 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಸಾವನ್ನ ರಾಜಕೀಯಕ್ಕೆ ಬಳಸಿಕೊಳ್ಳುವ ಪ್ರವೃತ್ತಿಯನ್ನು ಕಟುವಾಗಿ ಖಂಡಿಸಿದ ಅವರು,ಈ ರೀತಿ ವರ್ತಿಸುವುದು ಯಾವುದೇ ಸಮಾಜಕ್ಕೂ, ಯಾವುದೇ ರಾಜಕೀಯ ಪಕ್ಷಕ್ಕೂ ಶೋಭೆ ತರುವಂತದ್ದಲ್ಲ ಎಂದು ಹೇಳಿದರು.
ಸಮಾಜಗಾತುಕ ಶಕ್ತಿಗಳನ್ನು ವೈಭವೀಕರಿಸುವುದು ಸರಿಯಲ್ಲ.ನಾಲಿಗೆ ಹಾಗೂ ನಡವಳಿಕೆಯಲ್ಲಿ ಜವಾಬ್ದಾರಿ ಇರಬೇಕು ಎಂದು ಶಾಸಕರು ಎಚ್ಚರಿಸಿದರು.
ಹಿಂದೂ ಹೆಸರಿನಲ್ಲಿ ರಾಜಕೀಯ ಮಾಡಬಾರದು ,ಬಿಜೆಪಿಗೆ ಇದು ಹೊಸ ಉದ್ಯೋಗವಲ್ಲ, ಇದು ಅವರ ನಿರಂತರ ಉದ್ಯೋಗ.
ಅದೇ ಆಧಾರದ ಮೇಲೆ ಬಿಜೆಪಿ ತನ್ನ ಸಂಘಟನೆ ಕಟ್ಟಿಕೊಂಡಿದೆ ಎಂದು ಕಿಡಿಕಾರಿದರು.ಜನರು ಮೂರ್ಖರಲ್ಲ.ಜನರನ್ನು ಮೂರ್ಖರನ್ನಾಗಿ ಮಾಡಲು ಪ್ರಯತ್ನ ಮಾಡಲಾಗುತ್ತಿದೆ.
ಕೆಲವರು ಇದನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ,ಇನ್ನೂ ಕೆಲವರು ಮತಕ್ಕಾಗಿ ಈ ರೀತಿಯ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಯಾರು ಏನೇ ಮಾಡಿದರೂ, ಸಮಾಜಕ್ಕೆ ಹಾನಿ ಮಾಡುವ ಇಂತಹ ಪ್ರವೃತ್ತಿಗಳನ್ನು ಕಟ್ಟುನಿಟ್ಟಾಗಿ ಮಟ್ಟಹಾಕಬೇಕು ಎಂದು ಶಿವರಾಮ್ ಹೆಬ್ಬಾರ್ ಆಗ್ರಹಿಸಿದರು.
