Yallapur| ರಂಜಿತಾ ಹತ್ಯೆ ಬೆಂಕಿಯ ಕಿಡಿಯ ನಡುವೆ ಬಾಲಕನ ಬಾಳಿಗೆ ಬೆಳಕಾದ ಬಿಜೆಪಿ ,ಕಾಂಗ್ರೆಸ್ ನಾಯಕರು |ಏನಿದು ಸುದ್ದಿ?

The brutal murder of Dalit woman Ranjitha in Yallapur shocked Uttara Kannada
BJP and Congress leaders offering financial support to Ranjitha’s family in Yallapur BJP and Congress leaders offering financial support to Ranjitha’s family in Yallapur
Yallapur

Yallapur| ರಂಜಿತಾ ಹತ್ಯೆ ಬೆಂಕಿಯ ಕಿಡಿಯ ನಡುವೆ ಬಾಲಕನ ಬಾಳಿಗೆ ಬೆಳಕಾದ ಬಿಜೆಪಿ ,ಕಾಂಗ್ರೆಸ್ ನಾಯಕರು |ಏನಿದು ಸುದ್ದಿ?

 

Yallapur news :- ಯಲ್ಲಾಪುರದಲ್ಲಿ (yallapur)ದಲಿತ ಮಹಿಳೆಯನ್ನ ಪ್ರೀತ್ಸೆ ,ಪ್ರೀತ್ಸೆ ಅಂತ ಪ್ರಾಣವನ್ನೇ ಪಡೆದ ರಫೀಕ್ ತಾನು ಮಾಡಿದ ಪಾಪಕ್ಕೆ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಈ ಮೂಲಕ ಬುಗಿಲೆದ್ದಿದ್ದ ಜನರ ಆಕ್ರೋಶಕ್ಕೆ ವಿಧಿಯೇ ಶಿಕ್ಷೆ ನೀಡಿದೆ. ಇನ್ನು ರಂಜಿತಾ ಅಂತ್ಯಸಂಸ್ಕಾರ    ಹಿಂದೂ ಸಂಪ್ರದಾಯದಂತೆ ನೆರವೇರಿತು.

Advertisement

 ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರವನ್ನೇ ಬೆಚ್ಚು ಬೀಳುವಂತೆ ಮಾಡಿದ್ದ ಕಾಳಮ್ಮ ನಗರದ ಆಶ್ರಯ ಬಡಾವಣೆಯ ದಲಿತ ಹಿಂದೂ ಮಹಿಳೆ ರಂಜಿತಾ ಹತ್ಯೆ ಕೊನೆಗೂ ವಿಧಿಯ ತಾತ್ವಿಕ ಶಿಕ್ಷೆಯ ಮೂಲಕ ರಫೀಕ್ ಸಾವಿನಲ್ಲಿ ಅಂತ್ಯ ಕಂಡಿದೆ.

Funeral of Dalit woman Ranjitha held as per Hindu rituals in Yallapur
ಬಿಜೆಪಿ ರಾಜ್ಯಾಧ್ಯಕ್ಷರ ಭೇಟಿ

 ಮೃತ ರಂಜಿತಾಳ ಮೃತದೇಹವನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಿಂದ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಕಾಳಮ್ಮ ಬಡಾವಣೆಗೆ ತಂದು ಹಿಂದೂ ಸಂಪ್ರದಾಯದ ಮೂಲಕ ಯಲ್ಲಾಪುರದ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಮಾಧ್ಯಮದ ಜೊತೆ ರಂಜಿತಾ ತಾಯಿ ಭಾಗೀರಥಿ ರವರು ತಂದೆಯ ಪ್ರೀತಿಯೂ ಇಲ್ಲದೇ ,ಇದೀಗ ತಾಯಿಯೂ ಇಲ್ಲದೇ ಅನಾಥವಾದ ರಂಜಿತಾ ರವರ ಹತ್ತು ವರ್ಷದ ಪುತ್ರ ಸಾತ್ವಿಕ್ ಅನಾಥವಾಗಿದ್ದು ಆತನ ಬದುಕಿನ ಬಗ್ಗೆ ಕಳವಳ ತೋಡಿಕೊಂಡು ಕಣ್ಣೀರಿಟ್ಟಿದ್ದರು.

ರಂಜಿತಾ ಮಗ ಸಾತ್ವಿಕ್ ಬಗ್ಗೆ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಐದು ಲಕ್ಷ ಪರಿಹಾರ ನೀಡಿದರೇ ,ಬಿಜೆಪಿರಾಜ್ಯ ವಕ್ತಾರ ಹಾಗೂ ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಹರಿಪ್ರಕಾಶ್ ಕೋಣೆಮನೆ ರಂಜಿತಾ ಪುತ್ರ ಸಾತ್ವಿಕ್ ನ ಉನ್ನತ ಶಿಕ್ಷಣದ ವರೆಗೂ ಉಚಿತವಾಗಿ ನೀಡುವ ಹೊಣೆ ಹೊತ್ತಿದ್ದಾರೆ.

BJP and Congress leaders offering financial support to Ranjitha’s family in Yallapur
ರಂಜಿತಾ ಪುತ್ರನೊಂದಿಗೆ ಶಾಸಕ ಹೆಬ್ಬಾರ್

 ಇನ್ನು ರಂಜಿತಾ ಕುಟುಂಬಕ್ಕೆ ಸರ್ಕಾರದ ಪರವಾಗಿ ಎಂಟುಲಕ್ಷದ ಇಪ್ಪತ್ತು ಸಾವಿರ ಪರಿಹಾರದ ಚಕ್ ನನ್ನು ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ನೀಡಿದ್ದು, ರಂಜಿತಾ ಪುತ್ರನ ಹೆಸರಿನಲ್ಲಿ ಚಕ್ ನೀಡಿದ್ದಾರೆ. ಈ ಮೂಲಕ ಮೃತ ರಂಜಿತಾ ಕುಟುಂಬಕ್ಕೆ ಎರಡು ಪಕ್ಷದವರು ನೆರವಾಗಿದ್ದು ,ಇದರ ಜೊತೆ ಸ್ಥಳೀಯರು ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಕುಟುಂಬದ ದುಃಖಕ್ಕೆ ಹೆಗಲು ನೀಡಿದರು.

Yallapur|ರಂಜಿತಾ ಹತ್ಯೆ ಯಲ್ಲಾಪುರ ಬಂದ್ ಗೆ ಕರೆ| ಸಹೋದರಿ ನೀಡಿದ ದೂರಿನಲ್ಲಿ ಏನಿದೆ.

ಇನ್ನು ಕಾಜಲ್ ವಾಡ ಕಾಡಿನ ಅರಣ್ಯ ಇಲಾಖೆಗೆ ಸೇರಿದ ಅಕೇಶಿಯ ನಡುತೋಪಿನಲ್ಲಿ  ಮದ್ಯ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಆರೋಪಿ ರಫಿಕ್ ಮೃತದೇಹವನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಇನ್ನು ರಫೀಕ್ ಮನೆಯಲ್ಲಿ ಬೀಗ ಹಾಕಿದ್ದು ,ಆತನ ಸಹೋದರ ಮುಸ್ತಾಕ್ , ತಂದೆ ಇಮಾಮ್ ಸಾಬ್ ಯಾರ ಸಂಪರ್ಕಕ್ಕೂ ಸಿಗದೇ ದೂರವಿದ್ದರು.ಇನ್ನು ಈತನ ಶವವನ್ನು ಯಲ್ಲಾಪುರದ ಮುಸ್ಲಿಂ ರುದ್ರಭೂಮಿಯಲ್ಲಿ ಮುಸ್ಲಿಂ ಸಮುದಾಯದ ಜನ ಅಂತ್ಯ ಸಂಸ್ಕಾರ ನಡೆಸಿದರು.

ಒಟ್ಟಿನಲ್ಲಿ ಕೋಮು ಬಣ್ಣಕ್ಕೆ ತಿರುಗುವ ಹಂತ ತಲುಪಿದ್ದ ರಂಜಿತಾ ಹತ್ಯೆ ಪ್ರಕರಣ ಆಕೆಯ ಮಗನ ಮುಂದಿನ ಭವಿಷ್ಯಕ್ಕೆ ನೆರವಾಗುವ ಮೂಲಕ ತಾತ್ಪಿಕ ಹಂತ ತಲುಪಿದ್ದು ಹೊಸ ಭರವಸೆ ಮೂಡುವಂತೆ ಮಾಡಿತು.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement