Dandeli| ಆರ್.ವಿ. ದೇಶಪಾಂಡೆ ಗ್ಯಾರಂಟಿ ಯೋಜನೆಗೆ ಮತ್ತೆ ವ್ಯಂಗ್ಯ |ಏನಂದ್ರು ವಿಡಿಯೋ ಇಲ್ಲಿದೆ.

Congress MLA R.V. Deshpande praised Union Minister V. Somanna during a railway department event at Dandeli railway station in Uttara Kannada,
Congress MLA R V Deshpande speaking at a railway event in Dandeli railway station alongside officials, discussing rail connectivity and political remarks. Congress MLA R V Deshpande speaking at a railway event in Dandeli railway station alongside officials, discussing rail connectivity and political remarks.
Congress MLA R V Deshpande speaking at a railway event in Dandeli railway station alongside officials, discussing rail connectivity and political remarks.

Dandeli| ಆರ್.ವಿ. ದೇಶಪಾಂಡೆ ಗ್ಯಾರಂಟಿ ಯೋಜನೆಗೆ ಮತ್ತೆ ವ್ಯಂಗ್ಯ |ಏನಂದ್ರು ವಿಡಿಯೋ ಇಲ್ಲಿದೆ.

ಕಾರವಾರ:-ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ (dandeli) ರೈಲ್ವೆ ಇಲಾಖೆಯ ದಾಂಡೇಲಿ–ಅಳ್ನಾವರ ರೈಲು ಸಂಚಾರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿಜೆಪಿ ಕೇಂದ್ರ ಸಚಿವ ಸೋಮಣ್ಣರನ್ನು ಹೊಗಳಿದ ಕಾಂಗ್ರೆಸ್ ಶಾಸಕ ಆರ್‌.ವಿ. ದೇಶಪಾಂಡೆ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಕುರಿತು ವ್ಯಂಗ್ಯ ಮಾಡಿದರು.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ  ಮಾತನಾಡಿದ ದೇಶಪಾಂಡೆ, ಕೇಂದ್ರ ಸಚಿವ ವಿ. ಸೋಮಣ್ಣ ಅವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

Advertisement

ಅವರ ಪ್ರಯತ್ನದ ಫಲವಾಗಿ ದಾಂಡೇಲಿ–ಅಳ್ನಾವರ ರೈಲು ಸಂಚಾರ ಪುನರಾರಂಭವಾಗಿದೆ. ಇನ್ನಷ್ಟು ಎತ್ತರಕ್ಕೆ ಸೋಮಣ್ಣ ಬೆಳೆಯಲಿ ಎಂದು ಹಾರೈಸುತ್ತೇನೆ ಎಂದರು.

ನಾವು ಬೇರೆ ಬೇರೆ ಪಕ್ಷದವರಾದರೂ ಒಳ್ಳೆಯ ಕೆಲಸ ಮಾಡಿದವರನ್ನು ಮೆಚ್ಚಲು ಹಿಂಜರಿಯುವುದಿಲ್ಲ. ನಾನು ಯಾವತ್ತೂ ಪ್ರತಿಪಕ್ಷದವರನ್ನು ದ್ವೇಷ ಮಾಡಿಲ್ಲ. ಅದಕ್ಕೇ ನಾನು ಒಂಬತ್ತು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ ಎಂದು ಹೇಳಿದರು.

ಇನ್ನೂ ಅಳ್ನಾವರದಿಂದ ಬೆಳಗಾವಿ ಹಾಗೂ ಹುಬ್ಬಳ್ಳಿ ಕಡೆ ರೈಲು ಸಂಪರ್ಕ ಕಲ್ಪಿಸಬೇಕು. ಕನೆಕ್ಟಿವಿಟಿ ಹೆಚ್ಚಾದರೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ರೈಲು ಪ್ರಯಾಣ ಮಾಡುತ್ತಾರೆ ಎಂದರು.

Dandeli| ವಕೀಲ ಅಜಿತ್ ನಾಯ್ಕ ಹತ್ಯೆ | ಆರೋಪಿ ಅಪರಾಧಿ | ಶಿಕ್ಷೆ ಏನು ಗೊತ್ತಾ?

ಇದೇ ವೇಳೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಕುರಿತು ವ್ಯಂಗ್ಯ ಮಾಡಿದ ದೇಶಪಾಂಡೆ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿರುವುದರಿಂದ ಬಸ್‌ಗಳು ಯಾವಾಗಲೂ ಫುಲ್ ಆಗಿವೆ. ಪುರುಷರಿಗೆ ಹತ್ತಲು ಜಾಗವೇ ಇಲ್ಲದಂತಾಗಿದೆ ಎಂದು ಹೇಳಿದರು.

ರೈಲು ಸಂಪರ್ಕವನ್ನು ಮತ್ತಷ್ಟು ಬಲಪಡಿಸಿದರೆ ಜನರ ಓಡಾಟ ಸುಗಮವಾಗುತ್ತದೆ, ಬಸ್‌ಗಳ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement