Karwar ನ್ಯಾಯಾಲಯ ಸ್ಪೋಟಿಸುವ ಬಾಂಬ್ ಬೆದರಿಕೆ ಮೇಲ್ – ಕೋರ್ಟ ಕಲಾಪ ಮುಂದೂಡಿಕೆ.
ಕಾರವಾರ :-ರಾಜ್ಯದ ಹಲವು ಜಿಲ್ಲೆಯ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ ಬಂದಿದ್ದು ಉತ್ತರಕನ್ನಡ ಜಿಲ್ಲೆಯ ಕಾರವಾರದ (karwar) ಜಿಲ್ಲಾ ನ್ಯಾಯಾಲಯಕ್ಕೂ ಬಾಂಬ್ ಬೆದರಿಕೆ ಮೇಲ್ ಕಳುಹಿಸಲಾಗಿದೆ.
ಕಾರವಾರ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆಡಳಿತ ಕಚೇರಿಯ ಕಂಪ್ಯೂಟರ್ ವಿಭಾಗಕ್ಕೆ pdjuttara kannada@karnata.gov.inಗೆ ಬಾಂಬ್ ಬೆದರಿಕೆ ಮೇಲ್ ಕಳುಹಿಸಲಾಗಿದ್ದು 2 ಆರ್ಡಿಎಕ್ಸ್ – ಐಇಡಿ ಕೋರ್ಟ್ ಜಡ್ಜ್ ಚೇಂಬರ್ನಲ್ಲಿ ಪ್ಲಾಂಟ್ ಮಾಡಲಾಗಿದ್ದು, ಶೀಘ್ರದಲ್ಲಿ ಬ್ಲಾಸ್ಟ್ ಆಗಲಿದೆ, ತಮಿಳುನಾಡಿನಲ್ಲಿ ಇಡಬ್ಲ್ಯುಎಸ್ (ಆರ್ಥಿಕ ಹಿಂದುಳಿದ ವರ್ಗ) ಮೀಸಲಾತಿ ರಕ್ಷಿಸಿ, ಕೋರ್ಟ್ನಲ್ಲಿದ್ದ ಎಲ್ಲಾ ಜನರನ್ನು 12.15ರ ಒಳಗಾಗಿ ಸ್ಥಳಾಂತರ ಮಾಡಿ ಎಂದು ಈ ಮೇಲ್ ನಲ್ಲಿ ಇದ್ದು Sunniya Dasan <sunniya_dasan@outlook.com> ಎಂಬ ಐಡಿಯಿಂದ ಕಳುಹಿಸಲಾಗಿದೆ.
Karwar|ಸಂಚಾರ ನಿಯಮ ಕಾಪಾಡಲು ಇಲ್ಲಾ ಟ್ರಾಫಿಕ್ ಪೊಲೀಸ್ |ನಗರದಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆಗಿಲ್ಲ ತಹಬಂದಿ
2021ರಲ್ಲಿ ಪ್ರಶಾಂತ್ ಕಿಶೋರ್, ಸುನೀಲ್ ಕನುಗೋಲು ಮುಂತಾದವರ ಸೂಚನೆಯಂತೆ ತಮಿಳುನಾಡು ಸರಕಾರ ಮಾಧ್ಯಮವನ್ನು ಬುಡಮೇಲು ಮಾಡಲು ಉದ್ದೇಶಿಸಿದೆ,ಈ ಹಿನ್ನೆಲೆ ತನ್ನ ಪರವಾಗಿರುವ ಮಾಧ್ಯಮದವರ ಆಯ್ಕೆಗೆ ಏಜೆನ್ಸಿ ಹಾಗೂ ಮಧ್ಯವರ್ತಿಗಳಿಗೆ ಹೊರಗುತ್ತಿಗೆ ನೀಡಲಾಗಿತ್ತು.ಡಿಎಂಕೆ ಉದಯನಿಧಿ ಅಜೆಂಡಾ ನಡೆಸಲು ಈ ಹಿರಿಯ ಪತ್ರಕರ್ತರ ನೇಮಕ ಮಾಡಲಾಗಿತ್ತು.
ಇವರ ಲೈಂಗಿಕ ಬಯಕೆ ಪೂರೈಸಲು ಬಾಲಕಿಯರನ್ನು ಕೂಡಾ ಬಳಸಲಾಗಿತ್ತು.ಮಾಧ್ಯಮದವರ ಹಾಗೂ ಬಾಲಕಿಯರ ಹೆಸರು ಇಂತಿದೆ ಅಂತಾ ವಿವಿಧ ಹೆಸರು ನಮೂದು ಮಾಡಲಾಗಿದ್ದು ಡಿಎಂಕೆಯ ಜಾಫರ್ ಸಾದಿಕ್ನಿಂದ ಪೂರೈಕೆ ಎಂದು ಈಮೇಲ್ನಲ್ಲಿ ಬರೆಯಲಾಗಿದೆ.ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಕೋರ್ಟ್ನ ಎಲ್ಲಾ ಕಲಾಪಗಳು ಮುಂದೂಡಿಕೆ ಮಾಡಲಾಗಿದ್ದು ಬಂದವಸ್ತ್ ಕಲ್ಪಿಸಲಾಗಿದೆ.







