Karwar | ಕಾರವಾರದಲ್ಲಿ ನೋ ಸ್ಟಾಕ್ ಸಿಲೆಂಡರ್ – ಮುಚ್ಚಿದ ಹೋಟಲ್ ಗಳು.
ಕಾರವಾರ :- ಮಧ್ಯಪ್ರಾಚ್ಯದಲ್ಲಿನ ಯುದ್ದ ಸಂಘರ್ಷದಿಂದಾಗಿ ಇಂಧನದ ಕೊರತೆ ಎದುರಾದ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಇದೀಗ ಗೃಹ ಬಳಕೆ ಸಿಲೆಂಡರ್ ಗಳು ಸಹ ಖಾಲಿಯಾಗಿದೆ.
Honnavar| ಗೋ ಕಳ್ಳತನ ನಡೆಸಿ ಹತ್ಯೆ ಮಾಡಿ ಮಾಂಸ ಕದ್ದೊಯ್ದ ಕಳ್ಳರು
ಕಾರವಾರ ನಗರದ ಜನತಾ ಬಜಾರ್ ನ ಭಾರತ್ ಗ್ಯಾಸ್ ಏಜನ್ಸಿಯಲ್ಲಿ ನೋ ಸ್ಟಾಕ್ ಬೋರ್ಡ ಹಾಕಲಾಗಿದೆ. ಇದರಿಂದಾಗಿ 25 ದಿನ ಪೂರೈಸಿ ಗೃಹ ಬಳಕೆ ಸಿಲೆಂಡರ್ ನನ್ನು ಬುಕ್ ಮಾಡಿ ಡೋರ್ ಡಿಲವರಿಗಾಗಿ ಕಾದ ಗ್ರಾಹಕರು ಇದೀಗ ಜನತಾ ಬಜಾರ್ ನಲ್ಲಿ ಇರುವ ಭಾರತ್ ಏಜನ್ಸಿ ಮುಂದೆ ಮುಗಿಬಿದ್ದಿದ್ದು ಸಿಲೆಂಡರ್ ಸಿಗದೇ ಪರದಾಡುವಂತಾಗಿದೆ.
ಹೋಟಲ್ ಗಳು ಬಂದ್ .
ಕಾರವಾರ(karwar) ನಗರದಲ್ಲಿ ವಾಣಿಜ್ಯ ಸಿಲೆಂಡರ್ ಗಳು ಸಿಗುವುದು ದುಸ್ತರವಾಗಿದೆ.ಕೆಲವು ಏಜನ್ಸಿಗಳು ಕಳೆದ ಎಂಟು ದಿನದಿಂದ ವಾಣಿಜ್ಯ ಸಿಲೆಂಡರ್ ನೀಡುತ್ತಿಲ್ಲ. ಇನ್ನು ಬ್ಲಾಕ್ ನಲ್ಲಿ ಒಂದು ವಾಣಿಜ್ಯ ಸಿಲೆಂಡರ್ ಮೇಲೆ ಮೂರು ಸಾವಿರದಿಂದ ಐದು ಸಾವಿರ ಹೆಚ್ಚುವರಿ ನೀಡಬೇಕಿದೆ.
ಇದು ಕೆಲವು ಹೋಟೆಲ್ ಗಳಿಗೆ ದುಬಾರಿ ಯಾಗಿದ್ದು ಹೋಟೆಲ್ ನನ್ನೇ ಬಂದ್ ಮಾಡಿದ್ದಾರೆ. ಇನ್ನು ಕರಲವರು ಕಟ್ಟಿಗೆ ಉಪಯೋಗಿಸಿದರೇ ಅಲ್ಪ ಸ್ವಲ್ಪ ಹಣ ನೀಡಿ ಸಿಲೆಂಡರ್ ಹೊಂದಿಸುವ ಕೆಲಸ ಮಾಡುತಿದ್ದಾರೆ. ಇನ್ನೂ ಕೆಲವು ದಿನ ಹೀಗೆಯೇ ಮುಂದುವರೆದಲ್ಲಿ ಸಿಲೆಂಡರ್ ಸಿಗದೇ ಬಹುತೇಕ ಹೋಟೆಲ್ ಗಳು ಬಾಗಿಲು ಹಾಕುವ ದಿನ ದೂರವಿಲ್ಲ.







