Bhatkal|ನವ ವಿವಾಹಿತನಿಗೆ LPG ಉಡುಗರೆ- ವೈರಲ್ ಬೆನ್ನಲ್ಲೇ ಕಾರಣ ಕೇಳಿ ಆಡಳಿತದಿಂದ ನೋಟಿಸ್.
ಕಾರವಾರ :- ಮಧ್ಯಪ್ರಾಚ್ಯ ಯುದ್ಧ ಸಂಘರ್ಷದಿಂದ ಎಲ್‌ಪಿಜಿ ಗ್ಯಾಸ್ ಕೊರತೆ ತೀವ್ರವಾಗುತ್ತಿದ್ದು, ಸಾಮಾನ್ಯ ಜನತೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ರೆ ಭಟ್ಕಳದಲ್ಲಿ (bhatkal) ನವ ವಿವಾಹಿತರಿಗೆ ಉಡುಗರೆಯಾಗಿ ಎಲ್.ಪಿಜಿ ಸಿಲೆಂಡೆರ್ ಗಿಫ್ಟ್ ನೀಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿದ್ದು ಇದೀಗ ಹನಿಮೂನ್ ಗೆ ಹೋದ ಜೋಡಿಗೆ ಸಂಕಷ್ಟ ಎದುರಾಗಿದೆ.
ಏನಾಗಿತ್ತು ಘಟನೆ.
ಭಟ್ಕಳದ ವಿವೇಕ್ ಮಹಾಲೆ ಮತ್ತು ನಾಗಸಂಧ್ಯಾ ಶಾಂತಿ ಅವರಿಗೆ ವಿವಾಹ ಸಂದರ್ಭದಲ್ಲಿ ಎಲ್‌ಪಿಜಿ ಸಿಲಿಂಡರ್ ಉಡುಗೊರೆಯಾಗಿ ನೀಡಲಾಗಿದೆ. ಗ್ಯಾಸ್ ಸಿಲಿಂಡರ್ ಅನ್ನು ಉಡುಗೊರೆಯಾಗಿ ನೀಡುವುದನ್ನು ಮದುವೆಗೆ ಬಂದ ಜನರು ಫೋಟೋ ತೆಗೆದು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಿದ್ದರು.
ಈ ಫೋಟೋ ಸಾಕಷ್ಟು ವೈರಲ್ ಆಗಿದ್ದು ಚರ್ಚೆಗೂ ಕಾರಣವಾಗಿತ್ತು. ಈ ಕುರಿತು ಮಾಹಿತಿ ಪಡೆದ ಭಟ್ಕಳ ತಾಲೂಕು ಆಡಳಿತ ವರನಿಗೆ ನೋಟಿಸ್ ನೀಡಿದೆ.
ಘಟನೆ ಕುರಿತು ತಾಲ್ಲೂಕು ಆಡಳಿತವು ವಿವರಣೆ ಕೋರಿ ವರನಿಗೆ ನೋಟಿಸ್ ಕಳುಹಿಸಿದೆ ಎಂದು ದಂಪತಿಯ ಸಂಬಂಧಿಕರು ಮಾಹಿತಿ ನೀಡಿದ್ದಾರೆ.
Bhatkal|ಗೋಕಳ್ಳತನಕ್ಕೆ ವಿಫಲ ಯತ್ನ| ಗೋ ಸಮೇತ ವಾಹನ ಬಿಟ್ಟಿ ಪರಾರಿ
ಮದುವೆ ನಂತರ ವರ ತಿರುಪತಿಗೆ ಹೋಗಿದ್ದಾರೆ. ಇದಲ್ಲದೇ ಹನಿಮೂನ್ ಪ್ಲಾನ್ ನಲ್ಲಿ ಇದ್ದ ಅವರಿವೆ ಇದೀಗ ಈ ನೋಟಿಸ್ ಗೆ ಉತ್ತರ ನೀಡುವಂತಾಗಿದೆ.
ಮದುವೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಉಡುಗೊರೆಯಾಗಿ ನೀಡಿದ ಬಗ್ಗೆ ತಾನು ಎಂದಿಗೂ ಕೇಳಿಲ್ಲ ನಮಗೆ ಆಶ್ಚರ್ಯವಾಗಿದೆ ಭಟ್ಕಳ ತಾಲ್ಲೂಕಿನಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಲ್ಲ. ಆದರೆ ಗ್ಯಾಸ್ ಸಿಲಿಂಡರ್ ಗಿಫ್ಟ್ ಮಾಡಲು ಸಾಧ್ಯವಿಲ್ಲ ಮತ್ತು ಮಾಡಬಾರದು. ಈ ಸಂಬಂಧ ನಾನು ಆಹಾರ ನಿರೀಕ್ಷಕರಿಂದ ವರದಿ ಕೇಳಿದ್ದೇನೆ.
ಅವರು ವರದಿ ನೀಡಿದ ನಂತರ ಈ ವರದಿಯನ್ನು ಕಾರವಾರದ ಜಿಲ್ಲಾಡಳಿತಕ್ಕೆ ಕಳುಹಿಸಲಾಗುವುದು ಎಂದು ಭಟ್ಕಳ ತಹಶೀಲ್ದಾರ್ ನಾಗೇಂದ್ರ ಕೊಲಶೆಟ್ಟಿ ಮಾಧ್ಯಮ ಒಂದಕ್ಕೆ ಮಾಹಿತಿ ನೀಡಿದ್ದಾರೆ. ,ಹುಚ್ಚಾಟದ ಪರಮಾವಧಿಗೆ ವಿವಾಹವಾಗಿ ಹನಿಮೂನ್ ನಲ್ಲಿ ಖುಷಿಯಾಗಿರಬೇಕಿದ್ದವನಿಗೆ ಸಂಕಷ್ಟ ತಂದೊಡ್ಡಿದೆ.







