Bhatkal:ಮುರ್ಡೇಶ್ವರ ದೇವಸ್ಥಾನದಲ್ಲಿ ಮಹಿಳೆಯ ಚಿನ್ನ ಎಗರಿಸಿದ ಮಹಿಳೆ ಬಂಧನ| ಕದ್ದ ಚಿನ್ನ ಏನು ಮಾಡಿದ್ಲು ಗೊತ್ತಾ?

A woman has been arrested for stealing a gold chain at Murudeshwar temple in Bhatkal. Police recovered gold worth ₹3.28 lakh after melting the stolen jewelry.
Murudeshwar temple Bhatkal gold chain theft accused woman arrested by police with recovered gold Murudeshwar temple Bhatkal gold chain theft accused woman arrested by police with recovered gold

Bhatkal:ಮುರ್ಡೇಶ್ವರ ದೇವಸ್ಥಾನದಲ್ಲಿ ಮಹಿಳೆಯ ಚಿನ್ನ ಎಗರಿಸಿದ ಮಹಿಳೆ ಬಂಧನ| ಕದ್ದ ಚಿನ್ನ ಏನು ಮಾಡಿದ್ಲು ಗೊತ್ತಾ?

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ (bhatkal)ತಾಲೂಕಿನ ಪ್ರಸಿದ್ಧ ಮುರ್ಡೇಶ್ವರ ದೇವಸ್ಥಾನದಲ್ಲಿ ಭಕ್ತರ ಸೋಗಿನಲ್ಲಿ ಬಂದು ಸರಗಳ್ಳತನ ಮಾಡಿದ್ದ ಅಂತರ ಜಿಲ್ಲಾ ಮಹಿಳಾ ಆರೋಪಿಯನ್ನು ಮುರ್ಡೇಶ್ವರ ಪೊಲೀಸರು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತಳಿಂದ ಬರೋಬ್ಬರಿ 3,28,000 ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Bhatkal |ನಕಲಿ ದಾಖಲೆ ನೀಡಿ ಆರೋಪಿಗಳಿಗೆ ಜಾಮೀನು ನೀಡುತಿದ್ದ ವ್ಯಕ್ತಿ ಬಂಧನ

Advertisement

ಏಪ್ರಿಲ್ 24, 2026 ರಂದು ಕೇರಳದ ಕಣ್ಣೂರು ಮೂಲದ ಜೈಯಂತ ಎ.ವಿ. ವೇಣುಗೋಪಾಲ (42) ಎಂಬುವವರು ತಮ್ಮ ಕುಟುಂಬದೊಂದಿಗೆ ಮುರ್ಡೇಶ್ವರಕ್ಕೆ ಭೇಟಿ ನೀಡಿದ್ದಾಗ, ದೇವಸ್ಥಾನದ ಆವರಣದಲ್ಲಿ ಅವರ ತಾಯಿಯ ಕತ್ತಿನಲ್ಲಿದ್ದ ಅಂದಾಜು 36 ಗ್ರಾಂ ತೂಕದ ಚಿನ್ನದ ಸರವನ್ನು ಅಪರಿಚಿತರು ಕಳ್ಳತನ ಮಾಡಿದ್ದರು. ಈ ಬಗ್ಗೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ   ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ:-Bhatkal| ಚಿತ್ತರಂಜನ್ ಹತ್ಯೆಗೆ 30 ವರ್ಷ -ಇನ್ನೂ ಮುಗಿಯದ ಹತ್ಯೆ ತನಿಖೆ

ಪ್ರಕರಣದ ಗಂಭೀರತೆಯನ್ನು ಅರಿತು ತಕ್ಷಣವೇ ತನಿಖೆಗಿಳಿದ ಪೊಲೀಸರು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದರು. ಖಚಿತ ಮಾಹಿತಿ ಮೇರೆಗೆ ಗದಗ ಜಿಲ್ಲೆಯ ಬೆಟಗೇರಿಯ ಗಾಂಧಿ ನಗರ ಸೆಟ್ಲಮೆಂಟ್ ನಿವಾಸಿಯಾದ ಗಂಗಮ್ಮ (65) ಎಂಬಾಕೆಯನ್ನು ಮುರ್ಡೇಶ್ವರ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.

ಬಂಧಿತ ಮಹಿಳೆಯನ್ನು ವಿಚಾರಣೆಗೊಳಪಡಿಸಿದಾಗ ಕಳ್ಳತನದ ಕೃತ್ಯ ಬೆಳಕಿಗೆ ಬಂದಿದೆ. ಕದ್ದೊಯ್ದಿದ್ದ ಚಿನ್ನದ ಸರವನ್ನು ಕರಗಿಸಿ ಗಟ್ಟಿ ಮಾಡಿದ್ದ 27.600 ಗ್ರಾಂ ತೂಕದ (ಅಂದಾಜು ಮೌಲ್ಯ 3,28,000/- ರೂ.) ಎರಡು ಬಂಗಾರದ ಗಟ್ಟಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement