Karwar|ಕೊನೆಗೂ ಕಾರವಾರಿಗರ ಸಮಸ್ಯೆಗೆ ಬೀದಿಗಿಳಿದ ಬಿಜೆಪಿ !

Karwar:ಕಾರವಾರ ನಗರದಲ್ಲಿ ಎಲ್ಲಿ ಏನೇ ಸಾರ್ವಜನಿಕ ಸಮಸ್ಯೆಯಾಗಲಿ ,ಇಲ್ಲಿನ ಜನ ಪ್ರತಿಭಟಿಸೋದು ಕಡಿಮೆ.
ಕಾರವಾರದಲ್ಲಿ ವಿದ್ಯುತ್ ಕಡಿತ ವಿರೋಧಿಸಿ ಹೆಸ್ಕಾಂ ಕಚೇರಿ ಮುಂದೆ ಬಿಜೆಪಿ ಕಾರ್ಯಕರ್ತರು ಧರಣಿ ನಡೆಸುತ್ತಿರುವ ದೃಶ್ಯ ಕಾರವಾರದಲ್ಲಿ ವಿದ್ಯುತ್ ಕಡಿತ ವಿರೋಧಿಸಿ ಹೆಸ್ಕಾಂ ಕಚೇರಿ ಮುಂದೆ ಬಿಜೆಪಿ ಕಾರ್ಯಕರ್ತರು ಧರಣಿ ನಡೆಸುತ್ತಿರುವ ದೃಶ್ಯ
ಕಾರವಾರದಲ್ಲಿ ವಿದ್ಯುತ್ ಕಡಿತ ವಿರೋಧಿಸಿ ಹೆಸ್ಕಾಂ ಕಚೇರಿ ಮುಂದೆ ಬಿಜೆಪಿ ಕಾರ್ಯಕರ್ತರು ಧರಣಿ ನಡೆಸುತ್ತಿರುವ ದೃಶ್ಯ

Karwar|ಕೊನೆಗೂ ಕಾರವಾರಿಗರ ಸಮಸ್ಯೆಗೆ ಬೀದಿಗಿಳಿದ ಬಿಜೆಪಿ !

 

ಕಾರವಾರ :- ಕಾರವಾರ ನಗರದಲ್ಲಿ ಎಲ್ಲಿ ಏನೇ ಸಾರ್ವಜನಿಕ ಸಮಸ್ಯೆಯಾಗಲಿ ,ಇಲ್ಲಿನ ಜನ ಪ್ರತಿಭಟಿಸೋದು ಕಡಿಮೆ.ಊರಿನ ಉಸಾಬರಿ ನಮಗೇಕೆ ಎನ್ನುವ ಕಾರವಾರದಲ್ಲಿ  ರಾಷ್ಟ್ರೀಯ ಪಕ್ಷಗಳು ಸಹ ಸಾರ್ವಜನಿಕ ಸಮಸ್ಯೆಗಳನ್ನ ಮುಂದಿಟ್ಟು ಧರಣಿ ,ಪ್ರತಿಭಟನೆ ಮಾಡಿದ್ದು ಬಲು ವಿರಳ .

Advertisement

ಏನಿದ್ದರೂ ರಾಜಕೀಯ ಹಿತಾಸಕ್ತಿ ಪ್ರತಿಭಟನೆ ಬಿಟ್ಟರೇ ಜನರ ಸಮಸ್ಯೆಗಳನ್ನ ಮುಂದಿಟ್ಟು ಪ್ರತಿಭಟನೆ ಮಾಡುವುದು ಬಲು ಅಪರೂಪ.

ಆದ್ರೆ ಇದೀಗ ಕಾರವಾರದ (karwar) ಜನರಿಗೆ ವಿದ್ಯುತ್ ವೆತ್ಯಯದ ಬಗ್ಗೆ ಬಿಜೆಪಿ ತಾಲೂಕು ಘಟಕ ಧ್ವನಿ ಎತ್ತಿ ಹೆಸ್ಕಾಂ ಕಚೇರಿ ಮುಂದೆ ಧರಣಿ ನಡೆಸಿತು.

Karwar | ನಾಲ್ಕು ತಿಂಗಳ ಫರಿಶ್ರಮ ಕೈಗಾ ಅಣುಸ್ಥಾವರಕ್ಕೆ ಹೊರಟಿದ್ದ ವಿಕಿರಣ ರಕ್ಷಾ ಕವಚ ಹೊತ್ತ ವಾಹನ ಪಲ್ಟಿ -ಏನಾಯ್ತು?

ಸದಾ ಬಿಸಿಲ ಬೇಗೆಯಲ್ಲಿರುವ ಕಾರವಾರಿಗರಿಗೆ ಪವರ್ ಕಟ್ ಆದ್ರೆ ಜೀವ ಕೈಯಲ್ಲಿ ಬರುತ್ತೆ. ಆದ್ರೆ ಹೆಸ್ಕಾಂ ಇಲಾಖೆ ಪದೇ ಪದೇ ಪವರ್ ಕಟ್ ಮಾಡಿ ಜನರ ಬೆವರ ಕೋಡಿ ಹರಿಸಿ ತಮಾಷೆ ನೋಡುತ್ತದೆ. ಇದಲ್ಲದೇ ವ್ಯಾಪಾರ ವಹಿವಾಟು ನಡೆಸುವ ವ್ಯಾಪಾರಿಗಳಿಗೆ ಹೆಸ್ಕಾಂ ಬೇಸಿಗೆಯಲ್ಲಿ ಲಕ್ಷಾಂತರ ರುಪಾಯಿ ನಷ್ಟದ ಶಾಕ್ ನೀಡುತ್ತದೆ. ಇನ್ನು ಮಳೆ ಬಂದ್ರೆ ಮರಗಿಡ ಬಿತ್ತು ಅಂತ ದಿನಗಟ್ಟಲೇ ಪವರ್ ಕಟ್ ಮಾಡೋ ಇಲಾಖೆ ಕೊನೆಪಕ್ಷ ಪವರ್ ಕಟ್ ಮಾಡುವ ದಿನದ ಸಾರ್ವಜನಿಕ ಪ್ರಕಟಣೆ ಕೂಡ ನೀಡೋದಿಲ್ಲ.

ಇಂತಹ ಗತಿಗೆಟ್ಟ ಹೆಸ್ಕಾಂ ಇಲಾಖೆ ಅಧಿಕಾರಿಗಳನ್ನ ಜನ ಪ್ರತಿ ದಿನ ಅವರ ಅಪ್ಪ ಅಮ್ಮನ ಹೆಸರಲ್ಲಿ ಬೈದು ಹಿಡಿ ಶಾಪ ಹಾಕುತ್ತಲೇ ಇರುತ್ತಾರೆ.

ಇಂದು ಕಾರವಾರ ನಗರದಲ್ಲಿ ತಾಲೂಕು ಬಿಜೆಪಿ ಘಟಕ ಹೆಸ್ಕಾಂ ಇಲಾಖೆ ಕಚೇರಿ ಮುಂದೆ ಧರಣಿ ನಡೆಸಿತು.

ಏಕಾ ಏಕಿ ಪವರ್ ಕಟ್ ಮಾಡುವ ಹೆಸ್ಕಾಂ ಗೆ ಮನವಿ ಸಲ್ಲಿಸುವ ಜೊತೆಗೆ ಪದೇ ಪದೇ ಪವರ್ ಕಟ್ ಮಾಡಿ ಜನರಿಗೆ ಸಮಸ್ಯೆ ಕೊಡದಂತೆ ಎಚ್ಚರಿಸಿತು. ಪ್ರತಿಭಟನೆ ನಂತರವೂ ಬೇಕಾ ಬಿಟ್ಟಿ ಪವರ್ ಕಟ್ ಮಾಡಿದರೇ ಉಗ್ರ ಪ್ರತಿಭಟನೆ ಎಚ್ಚರಿಕೆ ನೀಡಿತು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement