Bhatkal ಮಾಂಸಕ್ಕಾಗಿ ಅಕ್ರಮ ಜಾನುವಾರು ಸಾಗಾಟ-ಹಿಂದೆಬಿದ್ದ ಪೊಲೀಸರಿಗೂ ಉಳಿಸಲಾಗಲಿಲ್ಲ ಜೀವ!
ಕಾರವಾರ :- ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಮಾಂಸ ಮಾರಾಟಕ್ಕಾಗಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ಬೆನ್ನತ್ತಿದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ(bhatkal) ಪೊಲೀಸರು 11 ಜಾನುವಾರುಗಳನ್ನ ರಕ್ಷಿಸಿದ ಘಟನೆ ತಾಲೂಕಿನ ಜಾಲಿ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ನಡೆದಿದೆ.
ಸುಮಾರು ₹1.40 ಲಕ್ಷ ಮೌಲ್ಯದ 14 ಜಾನುವಾರುಗಳನ್ನು ಇಚರ್ ಕಂಪನಿಯ ಇನ್ಸುಲೇಟರ್ ವಾಹನದಲ್ಲಿ ಹಿಂಸಾತ್ಮಕವಾಗಿ ಹಗ್ಗಗಳಿಂದ ಕಟ್ಟಿ, ನೀರು-ಮೇವು ನೀಡದೆ ಒಂದರ ಮೇಲೊಂದು ತುಂಬಿಕೊಂಡು ಯಾವುದೇ ದಾಖಲೆಗಳಿಲ್ಲದೆ ಸಾಗಾಟ ಮಾಡಲಾಗುತ್ತಿತ್ತು.ಭಟ್ಕಳದ ಜಾಲಿ ಕ್ರಾಸ್ ಬಳಿ ಪೊಲೀಸರು ವಾಹನ ತಡೆದು ನಿಲ್ಲಿಸಲು ಸೂಚಿಸಿದರೂ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ. ಬಳಿಕ ಡೊಂಗರಪಳ್ಳಿ ಸಮೀಪದ ಖುಲ್ಲಾ ಜಾಗದಲ್ಲಿ ವಾಹನ ಬಿಟ್ಟು ಆರೋಪಿತರು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
Bhatkal| ಸಮುದ್ರಕ್ಕೆ ವಾಯು ವಿವಾರಕ್ಕೆ ತೆರಳಿದ ಮೂವರು ನೀರುಪಾಲು.
ವಾಹನದಲ್ಲಿದ್ದ ಜಾನುವಾರುಗಳಲ್ಲಿ ಒಂದು ಕೋಣ, ಒಂದು ಎಮ್ಮೆ ಹಾಗೂ ಒಂದು ಎತ್ತು ಉಸಿರುಗಟ್ಟಿ ಮೃತಪಟ್ಟಿದ್ದು, ಉಳಿದ 11 ಜಾನುವಾರುಗಳನ್ನು ಪೊಲೀಸರು ರಕ್ಷಿಸಿದ್ದಾರೆ. ಘಟನೆ ಸಂಬಂಧ ಭಟ್ಕಳ ನಗರ ಠಾಣೆ ಪಿಎಸೈ ತಿಮ್ಮಪ್ಪ ಎಸ್. ದೂರು ನೀಡಿದ್ದು, ಪಿಎಸೈ ನವೀನ್ ನಾಯ್ಕ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಜೀವ ಉಳಿಸಲು ಕಷ್ಟ ಪಟ್ಟ ಪೊಲೀಸರು

ಇನ್ನು ವಾಹನದಲ್ಲಿ ಜಾನುವಾರು ಇರುವುದುನ್ನ ಮಾಹಿತಿ ಪಡೆದ ಪೊಲೀಸರು ಅವುಗಳ ಜೀವ ಉಳಿಸಲು ಸಾಕಷ್ಟು ಪ್ರಯತ್ನ ಪಟ್ಟರು. ವಾಹನ ಹಿಂಬಾಲಿಸಿ ಹೋದಾಗ ವಾಹನ ಬಿಟ್ಟು ಪರಾರಿಯಾದರು. ಆದ್ರೆ ಹಿಂಸಾತ್ಮಕವಾಗಿ ಜಾನುವಾರುಗಳು ಇದ್ದಿದ್ದರಿಂದ ಮೂರು ಜಾನುವಾರುಗಳು ಅಸುನೀಗಿದ್ದವು.






