Bhatkal| ಮುರಿನಕಟ್ಟೆ ಸಂಘರ್ಷ ಗುಪ್ತಚರ ಇಲಾಖೆ ವರದಿ- ಭಟ್ಕಳದ 60 ಜನ ರೌಡಿಶೀಟರ್ ಗೆ ನೋಟಿಸ್
ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ(bhatkal) ಮುರಿನ ಕಟ್ಟೆ ವಿವಾದದ ಬಳಿಕ ಭೂದಿ ಮುಚ್ಚಿದ ಕೆಂಡದಂತ ಪರಿಸ್ಥಿತಿ ಹಿನ್ನಲೆಯಲ್ಲಿ ಭಟ್ಕಳದಲ್ಲಿ ಕೊಮುಗಲಭೆ ನಡೆಯುವ ಸಾಧ್ಯತೆ ಬಗ್ಗೆ ಗುಪ್ತಚರ ಇಲಾಖೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಎಚ್ಚತ್ತಿದ್ದು ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ರವರ ಸೂಚನೆಯಂತೆ ಭಟ್ಕಳ ತಹಶಿಲ್ದಾರ್ ಪ್ರವೀಣ ಕರಾಂಡೆ ರವರು
ಭಟ್ಕಳದ 60 ರೌಡಿ ಶೀಟರ್ ಗಳಿಗೆ ದುರ್ವತನೆ ತೊರುವುದಿಲ್ಲವೆಂದು ಸುಮಾರು 50,000 ರೂಪಾಯಿ ಮೌಲ್ಯದ ಬಾಂಡ್ ನಲ್ಲಿ ಮುಚ್ಚಳಿಕೆ ಬರೆದೆಕೊಡುವಂತೆ ನೋಟಿಸ್ ನೀಡಿದೆ.ಭಟ್ಕಳದಲ್ಲಿ ಕೋಮುಗಲಭೆ ಹಾಗೂ ಇತರೆ ಅಪರಾಧಿ ಕೃತ್ಯದಲ್ಲಿ ಭಾಗಿಯಾದ ರೌಡಿ ಶೀಟರ್ ಗಳಿಗೆ ಗಣೇಶ್ ಹಬ್ಬ, ಈದ್ ಮಿಲಾದ ಹಾಗೂ ಯಾವುದೇ ಹಬ್ಬ ಸಂದರ್ಭದಲ್ಲಿ ಕೊಮು ಗಲಭೆಗಳಲ್ಲಿ ಭಾಗಿ ಆಗುವುದಿಲ್ಲವೆಂದು ಬಾಂಡ್ ಬರೆಸಿಕೊಳ್ಳುತ್ತಿದೆ.
ಭಟ್ಕಳ ಶಹರ ಪೊಲೀಸರ ಮಾಹಿತಿ ಮೇರೆಗೆ ಭಟ್ಕಳ ,ಮುರುಡೇಶ್ವರ ಸೇರಿದಂತೆ ಒಟ್ಟು 60 ರೌಡಿಗಳಿಗೆ ನೋಟಿಸ್ ನೀಡಲಾಗಿದೆ.ಇದರಲ್ಲಿ 40 ಜನ ಮುಸ್ಲಿಂರಿಗೆ ಹಾಗೂ 20 ಜನ ಹಿಂದೂಗಳಿಗೆ ನೋಟಿಸ್ ನೀಡಿದ್ದು ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಆಕ್ಷೇಪ ಸಲ್ಲಿಸಲು ಹಾಗೂ ಬಾಂಡ್ ಯಾಕೆ ಬರೆಸಿಕೊಳ್ಳ ಬಾರದೆಂದು ಇಂದು ತಹಶಿಲ್ದಾರ ಕೋರ್ಟ್ ನಲ್ಲಿ ವಿಚಾರಣೆ ನಡೆಸಬೇಕಿದ್ದು ಕಾರಣಾಂತರದಿಂದ ನಾಳೆಗೆ ಮುಂದೂಡಲಾಗಿದ್ದು ವಿರೋಧ ವ್ಯಕ್ತಪಡಿಸಿದ ಒಟ್ಟು 35 ಜನರ ವಿಚಾರಣೆ ನಾಳೆ ಭಟ್ಕಳ ತಹಾಶಿಲ್ದಾರರ ಸಮ್ಮುಖದಲ್ಲಿ ನಡೆಯಲಿದೆ.







