Navy |ಕದಂಬ ನೌಕಾನೆಲೆಯಲ್ಲಿ ಸದ್ದು ಮಾಡದ ಅಪರಾಧಗಳು| ಬೆಚ್ಚಿ ಬೀಳೋ ರಹಸ್ಯ!?.
ಕಾರವಾರ :- ಕಾರವಾರದ INS ಕದಂಬ (Seabird) ಭಾರತೀಯ ನೌಕಾಪಡೆಯ ಅತ್ಯಂತ ಪ್ರಮುಖ ನೌಕಾನೆಲೆಗಳಲ್ಲಿ ಒಂದಾಗಿದೆ. ಇದು ಅರಬ್ಬಿ ಸಮುದ್ರ ತೀರದಲ್ಲಿರುವ ಭಾರತದ ಅತಿದೊಡ್ಡ ಹಾಗೂ ಏಷ್ಯಾದ ಪ್ರಮುಖ ನೌಕಾನೆಲೆಗಳಲ್ಲಿ ಒಂದಾಗಿ ಅಭಿವೃದ್ಧಿಯಾಗುತ್ತಿದೆ.
ಇದನ್ನೂ ಓದಿ:-Navy|ಭಾರತೀಯರೇ ನಿರ್ಮಿಸಿದ ಮಾಲ್ವಾಣ್ ವಾರ್ ಶಿಫ್- ಹೇಗಿದೆ ಗೊತ್ತಾ? ವಿಶೇಷತೆ ಇಲ್ಲಿದೆ.
ಅಂದಾಜು 10 ಸಾವಿರದಷ್ಟು ನೌಕಾ ಸಿಬ್ಬಂದಿ ಒಟ್ಟು 25 ಸಾವುರಕ್ಕೂ ಹೆಚ್ಚು ಜನ ಈ ಕದಂಬ ನೌಕಾನೆಲೆಯಲ್ಲಿ ಕಾರ್ಯ ನಿರ್ವಹಿಸುತಿದ್ದಾರೆ.2 ನೇ ಹಂತ ಕಾಮಗಾರಿ ಸಂಪೂರ್ಣ ಮುಗಿದರೇ ಒಂದು ಲಕ್ಷಕ್ಕೂ ಹೆಚ್ಚು ಜನ ಈ ನೌಕಾನೆಲೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಇನ್ನು ಈ ಕದಂಬ ನೌಕಾನೆಲೆಯಲ್ಲಿ ನೌಕಾ ಸಿಬ್ಬಂದಿಗಾಗಿ ಕೆಲವು ಹಂತದ ನಿವಾಸವನ್ನು ಸಹ ನಿರ್ಮಿಸಲಾಗಿದ್ದು ಸಿಬ್ಬಂದಿ ಕುಟುಂಬದ ಜನವಸತಿ ಸಹ ನೌಕಾ ನೆಲೆಯ ಒಳಗೇ ಇದ್ದು ಇಲ್ಲಿ ನಡೆಯುವ ಅಪರಾಧ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತಿದ್ದು ಪೊಲೀಸರು ಸಹ ಒಳಹೋಗಿ ತನಿಖೆ ನಡೆಸದ ಸ್ಥಿತಿ ಇದೆ.
ಹೆಚ್ಚಿದ ಅಪರಾಧ ಕೃತ್ಯಗಳು ಆದರೂ ದೂರಿಲ್ಲ!?.
ಕದಂಬ ನೌಕಾನೆಲೆಯಲ್ಲಿ ನೌಕಾ ಸಿಬ್ಬಂದಿಯ ,ಅಧಿಕಾರಿಗಳ ಕುಟುಂಬ ಕಲಹಗಳು ಆತ್ಮಹತ್ಯೆ ,ಹಲ್ಲೆಯಂತಹ ಪ್ರಕರಣ ಜರುಗಿದ್ದು ಈ ಘಟನೆ ಹೊರಜಗತ್ತಿಗೆ ತಿಳಿಯದಂತೆ ಮುಚ್ಚುಹಾಕಲಾಗುತ್ತಿದೆ.
ಆತ್ಮಹತ್ಯೆಗೆ ಎತ್ನಿಸಿ ಮಹಡಿಯಿಂದ ಹಾರಿದ ಮಹಿಳೆ !
ನೌಕಾನೆಲೆಯ ಕದಂಬ ವನಂ ಪ್ಯಾಮಿಲಿ ಕ್ವಾಟ್ರಸ್ ನಲ್ಲಿ ನೌಕಾನೆಲೆಯ ಅಧಿಕಾರಿಯೊಬ್ಬರ ಪತ್ನಿ ಕುಟುಂಬ ಕಲಹದಿಂದ 10 ನೇ ಫ್ಲೋರ್ ನಿಂದ ಆತ್ಮಹತ್ಯೆಗೆ ಯತ್ನಿಸಿದ್ದು ಅದೃಷ್ಟವಶಾತ್ ಮಹಡಿಯಿಂದ ಜಿಗಿದ ಆ ಮಹಿಳೆ 9 ನೇ ಪ್ಲೋರ್ ನ ಬಳಿ ಸಿಲುಕಿಕೊಂಡಿದ್ದಾಳೆ .ತಕ್ಷಣ ಆಕೆಯನ್ನು ರಕ್ಷಣೆ ಮಾಡಿ ಪತಾಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆದರೇ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.
ಇದನ್ನೂ ಓದಿ:-Karwar | ಕಾರವಾರದ ಈ ಖದೀಮನಿಗೆ ಗೋವಾದಲ್ಲಿ 300 ಕೋಟಿ ಆಸ್ತಿ!
ಕಾಂಡಮ್ ರಾಶಿ -ಅನೈತಿಕ ಸಂಬಂಧ!
ಇನ್ನು ನೌಕಾ ಸಿಬ್ಬಂದಿಗಳು ನೌಕೆಯಲ್ಲಿ ತಿಂಗಳು ಗಟ್ಟಲೇ ಸಮುದ್ರದ ಗಡಿಯಲ್ಲಿ ಇರುತಿದ್ದು ಇವರ ಕುಟುಂಬದಲ್ಲಿ ಅನೈತಿಕ ಸಂಬಂಧಗಳು ಹೆಚ್ಚಾಗುತ್ತಿದೆ ಎನ್ನುತ್ತದೆ ಅಲ್ಲಿನ ಮೂಲಗಳು. ಈ ಹಿಂದೆ ಕದಂಬ ವನಂ ಅಪಾರ್ಟ್ಮೆಂಟ್ ನ ಡ್ರೈನೇಜ್ ನೀರು ಹೋಗುವ ಜಾಗದಲ್ಲಿ ರಾಶಿ ರಾಶಿ ಕಾಂಡಮ್ ಸಿಲುಕಿ ನೀರು ಹೊರಹೋಗದೇ ಸಮಸ್ಯೆಯಾಗಿ ಕೊನೆಗೆ ಈ ಅಪಾರ್ಟ್ಮೆಂಟ್ ನ ನಿವಾಸಿಗಳಿಗೆ ನೌಕಾಧಿಕಾರಿಗಳು ಎಚ್ಚರಿಕೆ ನೀಡಿದ್ದರು ಎನ್ನುತ್ತದೆ ಮೂಲಗಳು.
ಇದನ್ನೂ ಓದಿ:-Ankola| ಚಿನ್ನದ ಆಸೆಗೆ ಸ್ನೇಹಿತೆಯಿಂದಲೇ ಹತ್ಯೆಗೆ ಯತ್ನ -ಸಾವು-ಬದುಕಿನ ಹೋರಾಟದಲ್ಲಿರುವ ಯುವತಿಗೆ ಬೇಕಿದೆ ಸಹಾಯಹಸ್ತ
ವೇಶ್ಯೆಯರ ಸದ್ದು!.
ಇನ್ನು ಕೆಲವು ನೌಕಾ ಅಧಿಕಾರಿಗಳು ಮೋಜು ಮಸ್ತಿಯಲ್ಲಿ ನೌಕಾನೆಲೆಯ ನೆಲವನ್ನೇ ಅಖಾಡ ಮಾಡಿಕೊಂಡಿದ್ದಾರೆ ಎನ್ನುವ ದೂರು ನೌಕಾನೆಲೆಯ ಹೊರಗೂ ಸಾಗುತ್ತಿದೆ. ನ್ಯೂಇಯರ್ ,ನೌಕಾ ದಿನ ಸೇರಿದಂತೆ ವಿಶೇಷ ದಿನದಲ್ಲಿ ನೌಕಾನೆಲೆಯ ನೆಲ ಬಾರ್ ,ಪಬ್ ಆಗಿ ಪರಿವರ್ತನೆ ಆಗುತ್ತಿದೆ ಎಂಬ ದೂರು ಇದ್ದು ,ಈ ಹಿಂದೆ ವಿಡಿಯೋ ಒಂದು ವೈರಲ್ ಆಗಿ ನಂತರ ಸ್ಪಲ್ಪ ಕಡಿವಾಣಬಿದ್ದಿದೆ.
ಇದನ್ನೂ ಓದಿ:-Karnataka Navy day ದೀಪಾಲಂಕಾರ ಗೊಂಡ ನೌಕೆಗಳು ಹೇಗಿತ್ತು ಗೊತ್ತಾ | ವಿಡಿಯೋ ನೋಡಿ
ಇನ್ನು ನೌಕಾನೆಲೆಯ ಉನ್ನತ ಮಟ್ಟದ ಕೆಲವು ಅಧಿಕಾರಿಗಳು ಗೋವಾಕ್ಕೆ ತೆರಳಿ ಮೋಜು ಮಸ್ತಿ ಮಾಡುವ ಜೊತೆ ವೇಷ್ಯಯರ ಸಹವಾಸ ಮಾಡುವ ಜೊತೆ ದೇಶದ ರಹಸ್ಯವನ್ನೂ ಬಿಚ್ಚಿಟ್ಟ ಘಟನೆ ನಡೆದಿದ್ದು ಈ ಸಂಬಂಧ ಹಲವರ ತನಿಖೆ ಪ್ರಗತಿಯಲ್ಲಿದೆ.
ಇದಲ್ಲದೇ ರಜೆ ದಿನದಲ್ಲಿ ಕೆಲವು ಉನ್ನತ ಅಧಿಕಾರಿಗಳು ಕದಂಬ ನೌಕಾನೆಲೆಯಲ್ಲಿಯೇ ವೇಶ್ಯಯರನ್ನ ಕರೆಯಿಸಿ ಮೋಜು ಮಸ್ತಿ ಮಾಡುತಿದ್ದಾರೆ ಎಂಬ ದೂರುಗಳಿವೆ.
ಗಾಂಜಾ ಮದ್ಯದ ಅಮಲು!
ಕೆಲವು ವರ್ಷದ ಹಿಂದೆ ನೌಕಾನೆಯ ಅಧಿಕಾರಿಯ ಪತ್ನಿಯೊಬ್ಬರು ಮದ್ಯ ಹಾಗೂ ಡ್ರಗ್ಸ್ ನ ಅಮಲಿನಲ್ಲಿ ಕದಂಬ ನೌಕಾನೆಲೆಯ ರಾಷ್ಟ್ರೀಯ ಹೆದ್ದಾರಿ 66 ರ ಬಳಿ ಇದ್ದ ಬಸ್ ನಿಲ್ದಾಣದ ಬಳಿ ಹೈಟ್ರಾಮ ನಡೆಸಿದ್ದಳು. ನೌಕಾನೆಯ ಹೊರಗೆ ಆದ್ದರಿಂದ ಕಾರವಾರ ನಗರದ ಈ ಹಿಂದಿನ ಪಿ.ಎಸ್.ಐ (ಈಗ ಸಿಪಿಐ ಆಗಿದ್ದಾರೆ) ಸ್ಥಳಕ್ಕೆ ಮಹಿಳಾ ಸಿಬ್ಬಂದಿ ಜೊತೆ ಬಂದು ವಿಚಾರಣೆ ಮಾಡುವಾಗ ನೌಕಾನೆಲೆಯ ಅಧಿಕಾರಿಯ ಪತ್ನಿ ಹಾಗೂ ವಾಯು ಸೇನೆಯಲ್ಲಿ ಫೈಲಟ್ ಆಗಿದ್ದ ಆ ಮಹಿಳೆ ಅಮಲಿನಲ್ಲಿ ಪೊಲೀಸ್ ಅಧಿಕಾರಿಯ ಮೇಲೆಯೇ ಹಲ್ಲೆ ನಡೆಸಿದ್ದಳು. ನಂತರ ಆಕೆಯನ್ನು ಠಾಣೆಗೆ ಕರೆತಂದಾಗ ಈಗ ನಿವೃತ್ತರಾಗಿರುವ ,ಆಗಿನ ಡಿ.ವೈ.ಎಸ್.ಪಿ ರೊಬ್ಬರ ಮೇಲೆ ಠಾಣೆಯಲ್ಲಿಯೇ ಪೇಪರ್ ವೇಟ್ ಎಸೆದು ಹಲ್ಲೆಗೆ ಯತ್ನಿಸಿದ್ದಳು. ನಂತರ ಜೈಲಿಗಟ್ಟಿದ್ದರು.ಆದರೇ ಈ ವಿಷಯ ಹೊರ ಹೋಗದಂತೆ ಠಾಣೆಗೆ ಬಂದ ನೌಕಾಧಿಕಾರಿಗಳು ಹಲವು ಪ್ರಯತ್ನ ಮಾಡಿದ್ದರು. ಆದರೆ ಅದು ವಿಫಲವಾಗಿ ಕೊನೆಗೆ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ:-Kumta| ದೇವಿಮನೆ ಘಟ್ಟದಲ್ಲಿ ಭೂ ಕುಸಿತ -ಸ್ವಲ್ಪದರಲ್ಲೇ ಪಾರಾದ ಬೈಕ್ ಸವಾರ
ಪೊಲೀಸರಿಗೂ ನಿಷೇಧ -ಅಪರಾಧ ನಡೆದರೆ ಮುಚ್ಚಿಹಾಕೋ ಅಧಿಕಾರಿಗಳು!
ಕೆಲವು ಅಧಿಕಾರಿಗಳು ಗೋವಾ(goa) ದಿಂದ ವೇಷ್ಯೆಯರನ್ನ ತಮ್ಮ ನಿವಾಸಕ್ಕೆ ತಮ್ಮದೇ ಕಾರಿನಲ್ಲಿ ಕರೆಸಿಕೊಂಡು ಮೋಜು ಮಸ್ತಿ ಮಾಡುವ ಆರೋಪ ಇದೆ. ಆದರೇ ಈ ವಿಷಯ ಸಂಬಂಧ ಕಾನೂನಿನ ಪ್ರಕಾರ ಪೊಲೀಸರಿಗೂ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಕದಂಬ ನೌಕಾನೆಯಿಂದ ನೇರವಾಗಿ ಗೋವಾಕ್ಕೆ ತೆರಳುವ ನೌಕಾಧಿಕಾರಿಗಳ ಕಾರು ಬರುವಾಗ ಟಾಕು ಟೀಕಿನಲ್ಲಿ ಸಜ್ಜಾದ ಯುವತಿಯರನ್ನು ತಮ್ಮ ಕ್ವಾಟ್ರಸ್ ಗೆ ಕರೆಸಿಕೊಳ್ಳುತಿದ್ದು ,ಬೆಳಗ್ಗೆ ಮರಳಿ ಅದೇ ಟಾಕು ಟಿಕಿನ ಯುವತಿಯರನ್ನ ಮತ್ತೆ ಗೋವಾಕ್ಕೆ ಬಿಟ್ಟುಬರುತ್ತಾರಂತೆ.ಆದರೇ ಈ ಕೃತ್ಯಗಳು ಮಾತ್ರ ಹೊರಬರುತ್ತಿಲ್ಲ. ಏಕೆಂದರೇ ನಮ್ಮ ಕಾನೂನು ಕೂಡ ವಿರೋಧ ವ್ಯಕ್ತವಾಗುವ ವರೆಗೆ ದೂರು ನೀಡುವ ವರೆಗೆ ಏನೂ ಮಾಡಲು ಸಾಧ್ಯವಿಲ್ಲ.
ಇನ್ನು ಸಮಾರು ಎಂಟು ವರ್ಷದ ಹಿಂದೆ ಗೋವಾದಿಂದ ಯುವತಿಯನ್ನ ಕರೆಸಿದ್ದ ಅಧಿಕಾರಿಯೊಬ್ಬ ಮೋಜು ಮಸ್ತಿಯಲ್ಲಿ ಎಣ್ಣೆಯ ಮದದಲ್ಲಿ ಯುವತಿಯ ಎದೆಗೆ ಸಿಗರೇಟ್ ಇರಿದಿದ್ದ. ಆಕೆ ಪ್ರತಿರೋಧ ತೋರಿದಾಗ ಕೆನ್ನೆಗೆ ಬಾರಿಸಿದ್ದ.ಸುಮಾರು 30 ವರ್ಷ ಪ್ರಾಯದ ಆ ಯುವತಿ ಕಾರಿನಲ್ಲಿ ಹೋರ ಹೋಗುವಾಗ ಗಲಾಟೆ ಮಾಡಿದ್ದು ,ಕೊನೆಗೆ ಆ ಅಧಿಕಾರಿ ಸಹ ಅಲ್ಲಿಗೆ ಬಂದು ಎಲ್ಲಾ ಸರಿಪಡಿಸಿ ಹೆಚ್ಚಿನ ಹಣ ನೀಡಿ ಕಳುಹಿಸಿದ್ದನಂತೆ. ಈ ವಿಷಯ ಸ್ಥಳೀಯರ ಕಣ್ಣಿಗೆ ಬಿದ್ದು ಸುದ್ದಿ ಮಾಧ್ಯಮದ ಮೆಟ್ಟಿಲು ಹತ್ತಿತ್ತು.ಆದರೇ ಆ ಯುವತಿ ದೂರು ಕೊಡದೇ ಹೋಗಿದ್ದರಿಂದ ಸುದ್ದಿಯಾಗದೇ ಗಾಸಿಪ್ ನಲ್ಲಿಯೇ ಇಂದಿನವರೆಗೂ ಸುದ್ದಿ ಹರಿದಾಡುತ್ತಿದೆ.
ಸ್ಥಳೀಯರ ಬಳಿ ಕಿರಿಕ್ -ಹೋಗಿತ್ತು ಪ್ರಾಣ.
ಕೆಲವು ವರ್ಷಗಳ ಹಿಂದೆ ನೌಕಾದಳದ ಅಧಿಕಾರಿಯೊಬ್ಬ ಬಿಣಗಾದ ಬಳಿ ಕಿರಿಕೆ ಮಾಡಿ ಕಾರವಾರದ ವೆಕ್ತಿಯೊಬ್ಬರಿಗೆ ಹೆಲ್ಮೆಟ್ ನಿಂದ ಹೊಡೆದು ಹತ್ಯೆಯನ್ನೇ ಮಾಡಿಬಿಟ್ಟಿದ್ದನು. ಇದಲ್ಲದೇ ಸಂಡೆ ಮಾರ್ಕೇಟ್ ಗೆ ಬರುವ ನೌಕಾದಳದ ಸಿಬ್ಬಂದಿಗಳು ವ್ಯಾಪಾರಿಗಳ ಬಳಿಯೂ ಕಿರಿಕ್ ಮಾಡಿದ ಅದೆಷ್ಟೋ ಘಟನೆಗಳು ಜರುಗಿದೆ.
ಇದನ್ನೂ ಓದಿ:-Karwar|ಅರಣ್ಯ ಇಲಾಖೆಯಲ್ಲಿ ಮೇಜರ್ ಸರ್ಜರಿ-ಉತ್ತರ ಕನ್ನಡ ಜಿಲ್ಲೆಯ 19 RFOಗಳ ವರ್ಗಾವಣೆ
ಇನ್ನು ಮೀನುಗಾರರನ್ನು ಸಹ ಬಿಡದ ನೌಕಾದಳದ ಅಧಿಕಾರಿಗಳು ಮೀನು ಹಿಡಿಯಲು ಸಾಗುವ ಮೀನುಗಾರರ ಬಲೆ ಹರಿಯುವುದು, ಮೀನುಗಳನ್ನ ಕಿತ್ತುಕೊಳ್ಳುವ ಘಟನೆ ಸಹ ನಡೆದು ,ಮೀನುಗಾರರು ನೌಕಾದಳದ ವಿರುದ್ಧ ಜಿಲ್ಕಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೇ ಇಲ್ಲದ ನೆವ ಹೇಳಿ ಸದ್ದು ಅಡಗಿಸಿದ್ದರು.
ಇತ್ತೀಚಿನ ದಿನದಲ್ಲಿ ಕದಂಬ ನೌಕಾ ನೆಲೆಯಲ್ಲಿ ಅಪರಾಧಗಳು ಹೆಚ್ಚಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ನೌಕಾ ದಳದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೇ ಮುಂದೊಂದು ದಿನ ನೌಕಾದಳದ ಮಾನ ಹರಾಜಾಗುವುದರಲ್ಲಿ ಅನುಮಾನವಿಲ್ಲ.
