Kumta| ದೇವಿಮನೆ ಘಟ್ಟದಲ್ಲಿ ಭೂ ಕುಸಿತ -ಸ್ವಲ್ಪದರಲ್ಲೇ ಪಾರಾದ ಬೈಕ್ ಸವಾರ

Kumta:ದೇವಿಮನೆ ಘಟ್ಟದ ರಾಷ್ಟ್ರೀಯ ಹೆದ್ದಾರಿ 766Eನಲ್ಲಿ ಭೂಕುಸಿತ ಸಂಭವಿಸಿದ್ದು ಬೈಕ್ ಸವಾರ ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಕುಮಟಾ ದೇವಿಮನೆ ಘಟ್ಟದ ರಾಷ್ಟ್ರೀಯ ಹೆದ್ದಾರಿ 766Eನಲ್ಲಿ ಭೂಕುಸಿತದಿಂದ ರಸ್ತೆ ಮಣ್ಣಿನಿಂದ ಮುಚ್ಚಿರುವ ದೃಶ್ಯ ಹಾಗೂ ಅಂಕೋಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ತೆರವು ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿ. ಕುಮಟಾ ದೇವಿಮನೆ ಘಟ್ಟದ ರಾಷ್ಟ್ರೀಯ ಹೆದ್ದಾರಿ 766Eನಲ್ಲಿ ಭೂಕುಸಿತದಿಂದ ರಸ್ತೆ ಮಣ್ಣಿನಿಂದ ಮುಚ್ಚಿರುವ ದೃಶ್ಯ ಹಾಗೂ ಅಂಕೋಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ತೆರವು ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿ.
ದೇವಿಮನೆ ಘಟ್ಟ ಕುಸಿತ ಪ್ರದೇಶ

Kumta| ದೇವಿಮನೆ ಘಟ್ಟದಲ್ಲಿ ಭೂ ಕುಸಿತ -ಸ್ವಲ್ಪದರಲ್ಲೇ ಪಾರಾದ ಬೈಕ್ ಸವಾರ.

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕುಮಟಾ (kumta)ತಾಲೂಕಿನ ದೇವಿಮನೆ ಘಟ್ಟದಲ್ಲಿನ ರಾಷ್ಟ್ರೀಯ ಹೆದ್ದಾರಿ 766E ನಲ್ಲಿ ಗುಡ್ಡ ಕುಸಿತವಾಗಿದೆ.

ಗುಡ್ಡ ಕುಸಿಯುತ್ತಿರುವ ವೇಳೆ ಬೈಕ್ ಸವಾರ ಸ್ವಲ್ಪದರಲ್ಲೇ ಪಾರಾಗಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ.

ಇದನ್ನೂ ಓದಿ:-Ankola| ಅಲೆಗಳ ಅಬ್ಬರ ಸಮುದ್ರಪಾಲಾದ ಮೂರು ದೋಣಿಗಳು

Advertisement

ಸಧ್ಯ ಶಿರಸಿ- ಕುಮಟಾ ಮುಖ್ಯ ಹೆದ್ದಾರಿ ಮಾರ್ಗ ಮಣ್ಣು ಕುಸಿತದಿಂದ  ಬಂದ್ ಆಗಿದ್ದು ತೆರವು ಕಾರ್ಯಾಚರಣೆ ನಡೆಯಬೇಕಿದೆ.

ಅಂಕೋಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ

Ankola landslide
Ankola- ಭೂಕುಸಿತ ಪ್ರದೇಶ

ಅಂಕೋಲ(ankola) ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿನ ಬಳಲೆ ಬೊಮ್ಮಯ್ಯ ದೇವರ ದೇಗುಲದ ಪಕ್ಕದ ಚತುಷ್ಪಥ ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗಿದೆ.

ಇದನ್ನೂ ಓದಿ:-Ankola | ಒಂದೇ ಅಂಗಡಿಗೆ 5 ಬಾರಿ ಕಳ್ಳತನ! ಶಟರ್‌ಗೆ ಕರೆಂಟ್ ಹರಿಸಿ ಪರಾರಿಯಾಗುವ ಖತರ್ನಾಕ್ ಕಳ್ಳ -ವಿಡಿಯೋ ನೋಡಿ

ಈ ಹಿನ್ನಲೆಯಲ್ಲಿ ಅಂಕೋಲ -ಕುಮಟಾ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಿಲಾಗಿದೆ.

ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಹಾಗೂ ಐ.ಆರ್.ಬಿ ಕಂಪನಿ ಸಿಬ್ಬಂದಿಯಿಂದ ಮಣ್ಣು ತೆರವು ಕಾರ್ಯಾಚರಣೆ ನಡೆಸಿದ್ದು ಮಣ್ಣು ತೆರವು ಮಾಡಲಾಗಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement