Shivamogga | ಕೇಂದ್ರ ಕಾರಾಗೃಹದ ಕಾಂಪೌಂಡ್ ಮುಂದೆ ಪೊಟ್ಟಣಗಳು ಪತ್ತೆ-ತೆರೆದು ನೋಡಿದ ಕಾರಾಗೃಹ ಸಿಬ್ಬಂದಿಗಳಿಗೆ ಶಾಕ್ 

Shivamogga Central Jail Shivamogga Central Jail
Shivamogga Central Jail

Shivamogga | ಕೇಂದ್ರ ಕಾರಾಗೃಹದ ಕಾಂಪೌಂಡ್ ಮುಂದೆ ಪೊಟ್ಟಣಗಳು ಪತ್ತೆ-ತೆರೆದು ನೋಡಿದ ಕಾರಾಗೃಹ ಸಿಬ್ಬಂದಿಗಳಿಗೆ ಶಾಕ್

ಶಿವಮೊಗ್ಗ: ಶಿವಮೊಗ್ಗ (shivamogga) ಕೇಂದ್ರ ಕಾರಾಗೃಹದೊಳಗೆ ಎಸೆಯುವ ಉದ್ದೇಶದಿಂದ ಕಾಂಪೌಂಡ್ ಬಳಿ ಇರಿಸಲಾಗಿದ್ದ ಮೊಬೈಲ್ ಫೋನ್‌ಗಳು, ಸಿಗರೇಟ್ ಸೇರಿದಂತೆ ಹಲವು ನಿಷೇಧಿತ ವಸ್ತುಗಳನ್ನು ಕೆಎಸ್‌ಐಎಸ್‌ಎಫ್ (KSISF) ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.Shivamogga: ಭದ್ರಾವತಿ ಯುವಕ ಐಸಿಸ್ ಸಂಪರ್ಕ ಪ್ರಕರಣ ಎನ್‌ಐಎಗೆ ವರ್ಗಾವಣೆ; ಉತ್ತರ ಪ್ರದೇಶದ ಐಸಿಸ್ ಘಟಕದೊಂದಿಗೂ ನಂಟು?

ಕಾರಾಗೃಹದ ಹೊರಭಾಗದಲ್ಲಿ ಕೆಎಸ್‌ಐಎಸ್‌ಎಫ್ ಸಿಬ್ಬಂದಿ ಏರಿಯಾ ಡೊಮಿನೇಷನ್ ಗಸ್ತು ನಡೆಸುತ್ತಿದ್ದ ವೇಳೆ, ಹೊಸ ಕಾರಾಗೃಹ ನಿರ್ಮಾಣ ಸ್ಥಳದ ಬಲಭಾಗದ ಕಾಂಪೌಂಡ್ ಬಳಿ ಕಪ್ಪು ಬಣ್ಣದ ಟೇಪ್‌ನಿಂದ ಸುತ್ತಿದ ಎರಡು ಪೊಟ್ಟಣಗಳು ಪತ್ತೆಯಾಗಿವೆ.

ಪೊಟ್ಟಣಗಳನ್ನು ತೆರೆದು ಪರಿಶೀಲಿಸಿದಾಗ ಒಂದು ಆಂಡ್ರಾಯ್ಡ್ ಮೊಬೈಲ್, ನಾಲ್ಕು ಬೇಸಿಕ್ ಮೊಬೈಲ್‌ಗಳು, ಆರು ಬ್ಯಾಟರಿಗಳು, ಒಂದು ಚಾರ್ಜರ್, ಹೆಡ್‌ಫೋನ್, ಸಿಗರೇಟ್ ಹಾಗೂ ಬೀಡಿ ಪ್ಯಾಕೆಟ್‌ಗಳು ಪತ್ತೆಯಾಗಿವೆ.Shikaripura | ಹೋರಿ ಬೆದರಿಸುವ ಸ್ಪರ್ಧೆ ವೇಳೆ ದುರಂತ: ಮೂವರು ಸಾವು

Advertisement

ಈ ವಸ್ತುಗಳನ್ನು ಕೈದಿಗಳಿಗೆ ತಲುಪಿಸುವ ಉದ್ದೇಶದಿಂದ ಇರಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ಜೈಲು ಅಧಿಕಾರಿಗಳು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement