Bhatkal | ಮುಟ್ಟಳ್ಳಿ ಬೈಪಾಸ್‌ನಲ್ಲಿ ಭೀಕರ ಅಪಘಾತ; ಕಾರು–ಪಿಕಪ್ ಮುಖಾಮುಖಿ ಡಿಕ್ಕಿ, ಏಳು ಮಂದಿಗೆ ಗಾಯ
ಭಟ್ಕಳ (bhatkal) ತಾಲೂಕಿನ ಮುಟ್ಟಳ್ಳಿ ಬೈಪಾಸ್ ಸೇತುವೆ ಸಮೀಪ ಹ್ಯುಂಡೈ ವೆನ್ಯೂ ಕಾರು ಹಾಗೂ ಮಹೀಂದ್ರಾ ಬೊಲೆರೊ ಪಿಕಪ್ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಅಪಘಾತದಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ. ಕಾರಿನ ಏರ್‌ಬ್ಯಾಗ್‌ಗಳು ತೆರೆದುಕೊಂಡಿದ್ದರಿಂದ ಸಂಭವನೀಯ ಭಾರಿ ಅನಾಹುತ ತಪ್ಪಿದೆ.Bhatkal |ಅಮೇರಿಕ ಮೊದಲ ಮುಸ್ಲಿಂ ಸಂಸದ ಅಬ್ದುಲ್ ಅಲ್ ಸಯೀದ್ ಗೆ ಭಟ್ಕಳದ ಮಾಜಿ ಉಪಮುಖ್ಯಮಂತ್ರಿ ಕುಟುಂಬದ ನಂಟು! ಯಾರಿವರು?
ಕೇರಳ ಮೂಲದ ಮಿಸ್ರಿಯಾ ಅವರು ಚಲಾಯಿಸುತ್ತಿದ್ದ ಹ್ಯುಂಡೈ ವೆನ್ಯೂ ಕಾರು (ಕೆಎಲ್-14-ಎಬಿ-1447) ಕುಂದಾಪುರ ಕಡೆಯಿಂದ ಭಟ್ಕಳದತ್ತ ಬರುತ್ತಿತ್ತು. ಈ ಸಂದರ್ಭದಲ್ಲಿ ಮುಟ್ಟಳ್ಳಿ ಬೈಪಾಸ್ ಸೇತುವೆ ಸಮೀಪ ಎದುರಿನಿಂದ ಬರುತ್ತಿದ್ದ ಮಹೀಂದ್ರಾ ಬೊಲೆರೊ ಪಿಕಪ್ (ಕೆಎ-47/ಎ-6046)ಗೆ ಕಾರು ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪಿಕಪ್ ವಾಹನವನ್ನು ಶಿರಾಲಿ ಶಾರದಾ ಹೊಳೆ ನಿವಾಸಿ ರವೀಂದ್ರ ಮಂಜಪ್ಪ ನಾಯ್ಕ (43) ಚಲಾಯಿಸುತ್ತಿದ್ದರು. ಅಪಘಾತದಲ್ಲಿ ಪಿಕಪ್ ಚಾಲಕ ರವೀಂದ್ರ ನಾಯ್ಕ ಹಾಗೂ ಸಹಪ್ರಯಾಣಿಕ ಸುಬ್ರಾಯ ಕೃಷ್ಣ ಮೊಗೇರ ಗಾಯಗೊಂಡಿದ್ದಾರೆ.
ಇನ್ನು ಕಾರಿನಲ್ಲಿದ್ದ ಕೇರಳ ಮೂಲದ ಫಾತಿಮಾ ಮರ್ವಾ, ಫಾತಿಮಾ ಎ.ಎ., ಅಫ್ರಾ, ಆಫ್ರಿದ್ ಹಾಗೂ ರಿಮ್ಸಾ ಅವರಿಗೂ ಗಾಯಗಳಾಗಿವೆ. ಒಟ್ಟು ಏಳು ಮಂದಿ ಗಾಯಗೊಂಡಿದ್ದಾರೆ.Bhatkal |ಅಮೇರಿಕ ಮೊದಲ ಮುಸ್ಲಿಂ ಸಂಸದ ಅಬ್ದುಲ್ ಅಲ್ ಸಯೀದ್ ಗೆ ಭಟ್ಕಳದ ಮಾಜಿ ಉಪಮುಖ್ಯಮಂತ್ರಿ ಕುಟುಂಬದ ನಂಟು! ಯಾರಿವರು?
ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದ ಏರ್‌ಬ್ಯಾಗ್‌ಗಳು ತಕ್ಷಣ ತೆರೆದುಕೊಂಡಿವೆ. ಇದರಿಂದ ಕಾರಿನಲ್ಲಿದ್ದ ಪ್ರಯಾಣಿಕರು ಸಂಭವನೀಯ ಗಂಭೀರ ಅನಾಹುತದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಗಾಯಾಳುಗಳನ್ನು ತಕ್ಷಣ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ಹೆದ್ದಾರಿ ಕಾಮಗಾರಿಯಿಂದ ಹೆಚ್ಚಿದ ಅಪಘಾತದ ಆತಂಕ
ಭಟ್ಕಳ ತಾಲೂಕಿನಲ್ಲಿ ನಡೆಯುತ್ತಿರುವ ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದಾಗಿ ವಾಹನ ಸಂಚಾರಕ್ಕೆ ಹಲವು ಅಡಚಣೆಗಳು ಎದುರಾಗುತ್ತಿವೆ. ಕಾಮಗಾರಿ ಪ್ರದೇಶಗಳಲ್ಲಿ ಸೂಕ್ತ ಸಂಚಾರ ವ್ಯವಸ್ಥೆ ಇಲ್ಲದಿರುವುದು ಹಾಗೂ ಸುರಕ್ಷತಾ ಕ್ರಮಗಳ ಕೊರತೆಯಿಂದ ಅಪಘಾತದ ಆತಂಕ ಹೆಚ್ಚಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸಮರ್ಪಕ ಎಚ್ಚರಿಕೆ ಫಲಕಗಳನ್ನು ಅಳವಡಿಸುವುದು, ವಾಹನ ಸಂಚಾರಕ್ಕೆ ಸೂಕ್ತ ಮಾರ್ಗ ಕಲ್ಪಿಸುವುದು ಹಾಗೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಸಂಬಂಧ ಪಿಕಪ್ ಚಾಲಕ ರವೀಂದ್ರ ಮಂಜಪ್ಪ ನಾಯ್ಕ ಅವರು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
