Mundgodu | ವೃದ್ದನಿಂದ ದೌರ್ಜನ್ಯಕ್ಕೊಳಗಾದ ಬಾಲಕಿ ಗಂಡು ಮಗುವಿಗೆ ಜನನ
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ(mundgod) 12 ವರ್ಷದ ಬಾಲಕಿಗೆ ಇಸ್ಮಾಯಲ್ ಹೂಲಗೂರ (65) ಎಂಬಾತ ದೌರ್ಜನ್ಯ ನಡೆಸಿ ಗರ್ಭಿಣಿ ಮಾಡಿದ್ದನು. ಮನೆಯಲ್ಲಿ ಆಕೆ ದೌರ್ಜನ್ಯಕ್ಕೊಳಗಾಗಿರುವು ಗೊತ್ತಾಗಿದ್ದೇ ಆಕೆ ಒಂಬತ್ತು ತಿಂಗಳ ತುಂಬು ಗರ್ಭಿಣಿಯಾದಾಗ. ಇದೀಗ ಈ ಪುಟ್ಟ ಬಾಲಕಿ ಮಂಡಗೋಡಿನ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. Mundgodu ಆನೆಗಳ ಹಾವಳಿ: ರೈತರ ಭತ್ತದ ಬೆಳೆ ನಾಶ, ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ.
ಮಗು ಮತ್ತು ತಾಯಿ ಆರೋಗ್ಯವಾಗಿದ್ದು ಮಗುವನ್ನ ಶಿರಸಿಯ ದತ್ತು ಸ್ವೀಕಾರ ಕೇಂದ್ರಕ್ಕೆ ಹಸ್ತಾಂತರಿಸಲಾಗುತ್ತಿದೆ.ಈ ಮೂಲಕ ಮಗುವಿನ ಆರೈಕೆಯ ಹೊಣೆಯನ್ನು ಶಿರಸಿಯ ದತ್ತು ಸ್ವೀಕಾರ ಕೇಂದ್ರ ಹೊರಲಿದೆ.
ದೌರ್ಜನ್ಯವೆಸಗಿದವನ ವಿರುದ್ಧ ಮುಗಿಲುಮುಟ್ಟಿದ ಆಕ್ರೋಶ.

ನೀಚ ಇಸ್ಮಾಯಲ್ ಹೂಲಗೂರನ ಈ ಕೆಟ್ಟ ಕ್ರೌರ್ಯಕ್ಕೆ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿದೆ.ಶೀಘ್ರ ತನಿಖೆ ನಡೆಸಿ ,ಆತನಿಗೆ ಮರಣದಂಡನೆ ನೀಡಬೇಕು ಎಂಬ ಒತ್ತಾಯ ಹಿಂದೂಪರ ಸಂಘಟನೆ ಇಡೀ ಮುಂಡಗೋಡನ್ನ ಬಂದ್ ಮಾಡಿ ಆಗ್ರಹಿಸಿದರೆ. ವಿವಿಧ ಮುಸ್ಲಿಂ ಸಂಘಟನೆಗಳು ಸಹ ಈತನಿಗೆ ಉಗ್ರ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿವೆ. Mundgod|12 ವರ್ಷದ ಬಾಲಕಿ ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿದ್ದ ಆರೋಪಿ ಮನೆ ಧ್ವಂಸ
ಸಧ್ಯ ಈ ಪ್ರಕರಣ ತನಿಖೆಯ ಅಂತಿಮ ಹಂತಕ್ಕೆ ತಲುಪುತಿದ್ದು ದೋಷಾರೋಪಣಾ ಪಟ್ಟಿಯನ್ನ ನ್ಯಾಯಾಲಯಕ್ಕೆ ಸಲ್ಲಿಕೆಯಾಗಲಿದೆ.

