Mundgodu ಆನೆಗಳ ಹಾವಳಿ: ರೈತರ ಭತ್ತದ ಬೆಳೆ ನಾಶ, ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ.

Elephant Menace in Mundgod – Paddy Crop Damage Elephant Menace in Mundgod – Paddy Crop Damage
Elephant Menace in Mundgod – Paddy Crop Damage

ಆರೋ ಡ್ರೈ ಕ್ಲೀನ್ ಕಾರವಾರಮಿಲನ್ ಎಂಟರ್ ಪ್ರೈಸೆಸ್ ಉತ್ತರ ಕನ್ನಡ

Mundgodu ಆನೆಗಳ ಹಾವಳಿ: ರೈತರ ಭತ್ತದ ಬೆಳೆ ನಾಶ, ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು(mundgodu) ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರೈತರು ಬೆಳೆದ ಬೆಳೆಗಳಿಗೆ ಅಪಾರ ಹಾನಿಯಾಗುತ್ತಿದೆ. ಕಳೆದ 15 ದಿನಗಳಿಂದ ಆನೆಗಳ ಹಿಂಡು ನಿರಂತರವಾಗಿ ರೈತರ ಗದ್ದೆಗಳಿಗೆ ದಾಳಿ ನಡೆಸಿ ಬೆಳೆಗಳನ್ನು ನಾಶಪಡಿಸುತ್ತಿವೆ.

ಇಂದು ಸಂಜೆ ಮುಂಡಗೋಡು ತಾಲೂಕಿನ ರಾಮಾಪುರ ಗ್ರಾಮದ ರೈತ ಸುರೇಶ ತಿಪ್ಪಣ್ಣ ಇಂಗಳಿಕಿ ಅವರ ಗದ್ದೆಗೆ ಗಂಡಾನೆಯೊಂದು ದಾಳಿ ನಡೆಸಿದೆ. ಗದ್ದೆಯಲ್ಲಿ ಬೆಳೆದು ನಿಂತಿದ್ದ ಭತ್ತದ ತೆನೆಗಳನ್ನು ತಿಂದು ಹಾಗೂ ತುಳಿದು ಹಾನಿಗೊಳಿಸಿದೆ. ಇದರಿಂದ ರೈತರಿಗೆ ನಷ್ಟ ಉಂಟಾಗಿದೆ.Mundgod | ಬಾಲಕಿ ಮೇಲಿನ ದೌರ್ಜ್ಯನ್ಯ ಖಂಡಿಸಿ ಮುಂಡಗೋಡು ಬಂದ್ 

Advertisement

ಪ್ರತಿ ವರ್ಷ ಮುಂಡಗೋಡು ಭಾಗದಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿ ರೈತರ ಬೆಳೆಗಳನ್ನು ನಾಶಪಡಿಸುತ್ತಿವೆ. ಆನೆಗಳನ್ನು ಬೆದರಿಸಿ ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನಿಸುತ್ತಿದ್ದರೂ, ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುತ್ತಿಲ್ಲ ಎಂಬುದು ರೈತರ ಅಳಲಾಗಿದೆ.

ಈಗಾಗಲೇ ಬರದ ಛಾಯೆ ಹಾಗೂ ಕೃಷಿ ವೆಚ್ಚದ ಹೆಚ್ಚಳದಿಂದ ಸಂಕಷ್ಟದಲ್ಲಿರುವ ರೈತರು ಕಷ್ಟಪಟ್ಟು ಬೆಳೆದ ಭತ್ತದ ಬೆಳೆ ಕಾಡಾನೆಗಳ ಪಾಲಾಗುತ್ತಿರುವುದರಿಂದ ಕಂಗಾಲಾಗಿದ್ದಾರೆ.Mundgod | ಮೋಟಾರ್ ಸ್ವಿಚ್ ಹಾಕುವಾಗ ವಿದ್ಯುತ್ ಶಾಕ್ – 21 ವರ್ಷದ ವಿವಾಹಿತ ಯುವತಿ ದಾರುಣ ಸಾವು!

ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಶಾಶ್ವತ ಕ್ರಮ ಕೈಗೊಳ್ಳಬೇಕು ಹಾಗೂ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement