Armynews |ಸರ್ಕಾರಿ ಅಧಿಕಾರಿಯ ನಿಸ್ವಾರ್ಥ ಸೇವೆ ದೇಶದ ಗಡಿ ಕಾಯಲು ಸಿದ್ದವಾದ ಆರು ಶ್ವಾನಗಳು

Raghavendra Bhat with Belgian Malinois dogs in Ankola, Uttara Kannada. Raghavendra Bhat with Belgian Malinois dogs in Ankola, Uttara Kannada.
Raghavendra Bhat with Belgian Malinois dogs in Ankola, Uttara Kannada.

ಆರೋ ಡ್ರೈ ಕ್ಲೀನ್ ಕಾರವಾರಮಿಲನ್ ಎಂಟರ್ ಪ್ರೈಸೆಸ್ ಉತ್ತರ ಕನ್ನಡ

Armynews |ಸರ್ಕಾರಿ ಅಧಿಕಾರಿಯ ನಿಸ್ವಾರ್ಥ ಸೇವೆ ದೇಶದ ಗಡಿ ಕಾಯಲು ಸಿದ್ದವಾದ ಆರು ಶ್ವಾನಗಳು.

ವಿಡಿಯೋ ಇಲ್ಲಿದೆ.,👇

ಕಾರವಾರ :- ದೇಶದ ಗಡಿಯಲ್ಲಿ ಜೀವ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುವ ಸೈನಿಕರ ಸೇವೆ ಎಷ್ಟು ಅಮೂಲ್ಯವೋ, ಅವರೊಂದಿಗೆ ಹೆಜ್ಜೆ ಹಾಕಿ ಅಪಾಯಕಾರಿ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಶತ್ರುಗಳನ್ನ ಸದೆಬಡಿದು, ಆಪತ್ತನ್ನು ನೀಗಿಸುವ ಸೈನ್ಯದಲ್ಲಿನ (Indian Army) ಶ್ವಾನಗಳ (Dogs) ಸೇವೆಯೂ ಅಷ್ಟೇ ಮಹತ್ವದ್ದಾಗಿದೆ.

ಬಾಂಬ್ ಪತ್ತೆ, ಮಾದಕ ವಸ್ತು ಶೋಧನೆ, ಉಗ್ರರ ಪತ್ತೆ ಕಾರ್ಯಾಚರಣೆಗಳಲ್ಲಿ ಮಾನವನಿಗಿಂತ ವೇಗವಾಗಿ ಮತ್ತು ನಿಖರವಾಗಿ ಕಾರ್ಯನಿರ್ವಹಿಸುವ ಈ ಶ್ವಾನಗಳು ದೇಶರಕ್ಷಣೆಯ ಮೌನ ಯೋಧರಂತೆ ಕಾರ್ಯನಿರ್ವಹಿಸುತ್ತಿವೆ. ಇಂತಹ ಶ್ವಾನಗಳನ್ನು ದೇಶಸೇವೆಗೆ ಸಮರ್ಪಿಸುವ ಅಪರೂಪದ ಕಾರ್ಯವನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲ (Ankola) ತಾಲೂಕಿನ ಭಾವಿಕೇರಿ ಗ್ರಾಮದ ರಾಘವೇಂದ್ರ ಭಟ್ ಹಾಗೂ ರಾಜೇಶ್ವರಿ ದಂಪತಿಗಳು  ಮಾಡುತ್ತಿದ್ದಾರೆ. ಸೈನ್ಯಕ್ಕೆ ಸೇರಿ ದೇಶಸೇವೆ ಮಾಡಬೇಕು ಎಂಬ ತಮ್ಮ ಜೀವನದ ಕನಸನ್ನು ನನಸು ಮಾಡಿಕೊಳ್ಳುವಲ್ಲಿ ವಿಫಲವಾದರೂ, ತನ್ನ ಶ್ವಾನಗಳನ್ನ ಸೈನ್ಯಕ್ಕೆ ನೀಡಿ ಆ ಮೂಲಕ ದೇಶಸೇವೆ ಮಾಡುತ್ತಿರುವ ಈ ವ್ಯಕ್ತಿಯ ಕಥೆ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ.Ankola | ಶಾಲೆ ಪ್ರಾರಂಭಕ್ಕೂ ಮುನ್ನ ವಿಘ್ನ -ಕಟ್ಟಡಕ್ಕೆ ಬೆಂಕಿ -ವಿಡಿಯೋ ನೋಡಿ

Advertisement

ಅಂಕೋಲ ತಾಲೂಕಿನ ಭಾವಿಕೇರಿ ಗ್ರಾಮದ ರಾಘವೇಂದ್ರ ಭಟ್ ಮತ್ತು ರಾಜೇಶ್ವರಿ ದಂಪತಿಗಳಿಂದ ದೇಶಕ್ಕಾಗಿ ಸೈನ್ಯದಲ್ಲಿ ಸೇವೆ ಸಲ್ಲಿಸಲು ಉಚಿತವಾಗಿ ನಲವತ್ತಕ್ಕೂ ಹೆಚ್ಚು ಶ್ವಾನದ ಮರಿಗಳನ್ನ ನೀಡಿದ್ದಾರೆ.

ಸೈನ್ಯಕ್ಕೆ ಸೇರಿ ದೇಶಸೇವೆ ಮಾಡಬೇಕು ಎಂಬ ಹಂಬಲ ಈಡೇರದಿದ್ದಾಗ ಶ್ವಾನಗಳನ್ನ ಸೈನ್ಯಕ್ಕೆ ನೀಡಿ ಆ ಮೂಲಕ ದೇಶಸೇವೆ ಮಾಡುತ್ತಿರುವ ಈ ದಂಪತಿಗಳ ಯಶೋಗಾದೆಗೆ ಎಂತವರೂ ಮೆಚ್ಚಲೇ ಬೇಕು.ಶ್ವಾನ ಪ್ರಿಯರಾಗಿದ್ದ ರಾಘು ಭಟ್, ಆರಂಭದಲ್ಲಿ ಮನೆಯಲ್ಲೇ ಸೈನ್ಯದಲ್ಲಿ ಬಳೆಕೆಯಾಗುವ ಬೆಲ್ಜಿಯಂ ಮೆಲಿನೋವಾ ತಳಿಯ ಕ್ಲಿಯೋ , ಟೈನಿ, ಲೀಸಾ,ಕೆ.ಎಫ್ , ಡೆವಿಲ್ ಎಂಬ ಮೂರು ಹೆಣ್ಣು,ಎರಡು ಗಂಡು ಶ್ವಾನ ಸಾಕಿದ್ದಾರೆ.

 ತಮ್ಮ ಶ್ವಾನಗಳನ್ನು ಡಿಫೆನ್ಸ್‌ಗೆ ನೀಡಬೇಕು. ದೇಶಸೇವೆ ಮಾಡಬೇಕು ಎಂಬ ಹಂಬಲದಲ್ಲಿ ಈ ಬಗ್ಗೆ ಡಿಫೆನ್ಸ್‌ಗೆ ಮನವಿ ಮಾಡಿದ್ದರು. ಅವರು ಸಾಕಿದ ಶ್ವಾನದ ಗುಣಮಟ್ಟಕ್ಕೆ ಮೆಚ್ಚಿದ ಡಿಫೆನ್ಸ್ ಅಧಿಕಾರಿಗಳು ಈವರೆಗೆ 40 ಕ್ಕೂ ಹೆಚ್ಚು ಶ್ವಾನಗಳನ್ನು ಇವರಿಂದ ಪಡೆದಿದ್ದಾರೆ.

ಅಂಕೋಲ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ರಾಘವೇಂದ್ರ ಭಟ್ 2020ರಲ್ಲಿ ಆರಂಭವಾದ ದೇಶಸೇವೆಯ ಪಯಣ 40 ಕ್ಕೂ ಹೆಚ್ಚು ಬೆಲ್ಜಿಯಂ ಮೆಲಿನೋವಾ ಶ್ವಾನಗಳನ್ನು ಸೈನ್ಯಕ್ಜೆ ನೀಡಿದ್ದು ಅಸ್ಸಾಂ, ಜಮ್ಮು–ಕಾಶ್ಮೀರ,ಕರ್ನಾಟಕ ಸೇರಿದಂತೆ ದೇಶದ ವಿವಿಧ ಗಡಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದು,ಬಾಂಬ್ ಪತ್ತೆ, ಮಾದಕ ವಸ್ತು ಶೋಧನೆ, ಶಂಕಿತ ಪ್ರದೇಶಗಳ ತಪಾಸಣೆ ಸೇರಿದಂತೆ ಅನೇಕ ಅಪಾಯಕಾರಿ ಕಾರ್ಯಾಚರಣೆಗಳಲ್ಲಿ ಸೈನಿಕರ ಜೊತೆ ಹೆಗಲು ಕೊಟ್ಟು ಕಾರ್ಯನಿರ್ವಹಿಸುತ್ತಿದೆ .ಇದೀಗ ಕ್ಲಿಯೋ ಹೆಸರಿನ ಶ್ವಾನಕ್ಕೆ  11 ಮರಿ ಜನಿಸಿದ್ದು,ಇದೀಗ ಆರು ಮರಿಗಳನ್ನ ಸೈನ್ಯಕ್ಕೆ ನೀಡಲು ಸಿದ್ದತೆ ಮಾಡಿಕೊಂಡಿದ್ದಾರೆ.Ankola| ಉಪನೊಂದಣಾಧಿಕಾರಿ ಕಚೇರಿಯಲ್ಲೇ ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ- ಐವರ ಬಂಧನ 

ಅದಕ್ಕೆ ಬೇಕಾದ ಪೂರಕ ತಯಾರಿ ನಡೆಸಿರುವ ಅವರು ಆರೋಗ್ಯ ತಪಾಸಣೆ ಸೇರಿದಂತೆ ಸೈನ್ಯದ ನಿಯಮಗಳನ್ನ ಪಾಲಿಸಿದ್ದು ಇದೀಗ ಆರು ಮರಿಗಳು ಸೈನ್ಯಕ್ಕೆ ಸೇವೆ ಸಲ್ಲಿಸಲು ಸಿದ್ದವಾಗಿದ್ದು ,ಡಿಸೆಂಬರ್ ವೇಳೆಯಲ್ಲಿ ಬೆಂಗಳೂರಿನ CRPF , ಮಧ್ಯಪ್ರದೇಶದ BSF ತುಕಡಿಗಳಿಗೆ ಸೇರಲಿವೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement