Sirsi | ಉರುಳಿಗೆ ಸಿಲುಕಿ ಚಿರತೆ ಸಾವು; ಕಿಡಿಗೇಡಿಗಳ ಕೃತ್ಯಕ್ಕೆ ವನ್ಯಜೀವಿ ಬಲಿ!
ಶಿರಸಿ: ಉತ್ತರ ಕನ್ನಡ (uttara kannada )ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ಉರುಳಿಗೆ ಸಿಲುಕಿ ಚಿರತೆಯೊಂದು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.Sirsi |ಚೀನಾ ಅರುಣಾಚಲ ಪ್ರದೇಶದ ಜನರಿಗೆ ಪ್ರವಾಸಕ್ಕೂ ವಿಸಾ ನೀಡುತ್ತಿಲ್ಲ- ಪದ್ಮಶ್ರೀ ತೆಚಿ ಗುಬಿನ್
ಸುಗಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಡಗೇರಿ ಸಮೀಪದ ಕಲ್ಗುಂಡಿಕೊಪ್ಪ ಕೆರೆಯ ಪಕ್ಕದಲ್ಲಿ ಚಿರತೆಯ ಮೃತದೇಹ ಪತ್ತೆಯಾಗಿದೆ.
ಸ್ಥಳೀಯರಾದ ಶ್ರೀಕಾಂತರಾಯ ಅವರಿಗೆ ಸೇರಿದ ಗದ್ದೆಯ ಸಮೀಪ ಚಿರತೆಯ ಶವ ಪತ್ತೆಯಾಗಿದ್ದು, ಕಾಡುಹಂದಿಗಳನ್ನು ಬೇಟೆಯಾಡುವ ಉದ್ದೇಶದಿಂದ ಕಿಡಿಗೇಡಿಗಳು ಅಳವಡಿಸಿದ್ದ ಉರುಳಿಗೆ ಚಿರತೆ ಆಕಸ್ಮಿಕವಾಗಿ ಸಿಲುಕಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಕಾಡುಪ್ರಾಣಿಗಳ ಬೇಟೆಗಾಗಿ ಅಳವಡಿಸುವ ಇಂತಹ ಉರುಳುಗಳು ಇತರ ವನ್ಯಜೀವಿಗಳ ಜೀವಕ್ಕೂ ಮಾರಕವಾಗುತ್ತಿವೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಚಿರತೆಯ ಸಾವಿಗೆ ನಿಖರ ಕಾರಣವೇನು ಎಂಬುದು ಅರಣ್ಯ ಇಲಾಖೆಯ ತನಿಖೆಯಿಂದ ತಿಳಿದುಬರಬೇಕಿದೆ.Sirsi | ಪ್ರಜಾಸೇವೆ ಆಂದೋಲನ ಸಭೆ: 220ಕ್ಕೂ ಅಧಿಕ ಅರ್ಜಿಗಳ ವಿಚಾರಣೆ, 15 ದಿನಗಳಲ್ಲಿ ಪರಿಹಾರಕ್ಕೆ ಸೂಚನೆ
ವನ್ಯಜೀವಿಗಳ ಸಂರಕ್ಷಣೆಯ ದೃಷ್ಟಿಯಿಂದ ಅಕ್ರಮವಾಗಿ ಉರುಳುಗಳನ್ನು ಅಳವಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಕೇಳಿಬಂದಿದೆ.






