ಬೀದರ್ : ಹಕ್ಕಿ ಜ್ವರಕ್ಕೆ ಅಗತ್ಯ ಕ್ರಮ-ಪಶುಸಂಗೋಪನಾ ಸಚಿವ.

595

ಬೀದರ್ :- ಕೇರಳ ಸೇರಿದಂತೆ ಹೊರ ರಾಜ್ಯದಲ್ಲಿ ಹಕ್ಕಿ ಜ್ವರ ಹೆಚ್ಚಾದ ಹಿನ್ನಲೆಯಲ್ಲಿ ಕೇರಳದ ಗಡಿ ಭಾಗದ ನಮ್ಮ ರಾಜ್ಯದ ಜಿಲ್ಲೆಗಳಲ್ಲಿ ಅಲಟ್೯ ಇರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೆನೆ ಎಂದು ಬೀದರ್ ನಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.

ಇಂದು ಸಂಜೆ ಬೀದರ್ ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹಕ್ಕಿಜ್ವರ ಕೇರಳ ಸೇರಿದಂತೆ ಬೇರೆ ಕಡೆ ಬಂದಿದೆ,ಪಶು ಇಲಾಖೆಯ ಅಧಿಕಾರಿಗಳ ಜೊತೆ ಸಭೆ ಮಾಡಿ ಸೂಚನೆ ನೀಡಿದ್ದೆನೆ.

ನಮ್ಮ ಇಲಾಖೆ ಹಕ್ಕಿ ಜ್ವರ ವಿಷಯದಲ್ಲಿ ಅಲಟ್೯ ಆಗಿದೆ.ಆಕಸ್ಮಿಕವಾಗಿ ರಾಜ್ಯಕ್ಕೆ ಹಕ್ಕಿಜ್ವರ ಬಂದ್ರೆ ಎದುರಿಸಲು ಸಿದ್ದರಿದ್ದೆವೆ.

ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡಿದ್ದೆವೆ.
ಔಷಧಿಗಳು,ಸಲಕರಣೆಗಳನ್ನು ರೆಡಿ ಮಾಡಿಕೊಂಡಿದ್ದೆವೆ, ರಾಜ್ಯಕ್ಕೆ ಬರುವ ಕೋಳಿಗಳ ಆಮದಿಗೂ ಕ್ರಮ ತೆಗೆದುಕೊಂಡಿದ್ದನೆ ಎಂದಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!