BREAKING NEWS
Search

Astrology|ದಿನಭವಿಷ್ಯ September02

86

ಈ ದಿನ ಹಲವು ರಾಶಿಗಳಲ್ಲಿ ಬದಲಾವಣೆ ಇದ್ದು ಯಾವ ರಾಶಿಗೆ ಈ ದಿನ ಹೇಗಿರಲಿದೆ ಎಂಬ ವಿವರ ಈ ಕೆಳಗೆ ನೀಡಲಾಗಿದೆ.

ಪಂಚಾಂಗ:(panchanga)
ಶ್ರೀ ಶೋಭಕೃತನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ನಿಜ ಶ್ರಾವಣ ಮಾಸ, ಕೃಷ್ಣ ಪಕ್ಷ,
ತೃತೀಯ,
ವಾರ:- ಶನಿವಾರ,
ಉತ್ತರಭಾದ್ರಪದ ನಕ್ಷತ್ರ/ರೇವತಿ ನಕ್ಷತ್ರ.
ರಾಹುಕಾಲ: 09:17 ರಿಂದ 10:50
ಗುಳಿಕಕಾಲ: 06:12 ರಿಂದ 07:44
ಯಮಗಂಡ ಕಾಲ: 01:55 ರಿಂದ 03:28

ದಿನಭವಿಷ್ಯ.(Daily horoscope)

ಮೇಷ: ಕುಟುಂಬದಲ್ಲಿ ಮನಸ್ತಾಪ,ಅಸಹಕಾರ, ವ್ಯವಹಾರದಲ್ಲಿ ನಷ್ಟ, ಆರ್ಥಿಕವಾಗಿ ಅನುಕೂಲ ಇದ್ದರೂ ಕರ್ಚು ಹೆಚ್ಚಾಗಲಿದೆ. ಉದ್ಯೋಗಿಗಳಿಗೆ ಕೆಲಸ ಒತ್ತಡವುಕಡಿಮೆ ಇರಲಿದೆ,ಆರೋಗ್ಯ ಉತ್ತಮವಾಗಿರಲಿದೆ.

ವೃಷಭ: ಆರೋಗ್ಯ ಉತ್ತಮ, ವ್ಯವಹಾರದಿಂದ ಲಾಭ, ಆರ್ಥಿಕ ಬೆಳವಣಿಗೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ,ಹಣವ್ಯಯ,ರಾಜಕಾರಣಿಗಳಿಗೆ ಪ್ರಶಂಸೆ,ಚಿನ್ನಾಭರಣ ವರ್ತಕರಿಗೆ ಶುಭ.

ಮಿಥುನ: ಯತ್ನ ಕಾರ್ಯ ಕೈ ಬಿಡಬೇಡಿ,ವ್ಯವಹಾರದಲ್ಲಿ ಅನುಕೂಲ, ಆತುರ ಮುಂಗೋಪ ಅಧಿಕ ಕೋಪ ದಿಂದ ಕಾರ್ಯ ಹಾನಿ, ಗೌರವಕ್ಕೆ ಧಕ್ಕೆ, ಆರ್ಥಿಕವಾಗಿ ಚೇತರಿಕೆ, ಆರೋಗ್ಯದಲ್ಲಿ ವ್ಯತ್ಯಾಸ,ಮೀನುಗಾರರಿಗೆ ಶುಭ, ಹಣದ ವಹಿವಾಟು ಉತ್ತಮ.

ಕಟಕ: ವ್ಯಾಪಾರಿಗಳಿಗೆ ಅಲ್ಪ ಹಿನ್ನಡೆ,ಅಧಿಕ ಖರ್ಚು, ಅತಿ ಬುದ್ಧಿವಂತಿಕೆಯಿಂದ ಸಮಸ್ಯೆ,ಕುಟುಂಬದಲ್ಲಿ ವೈಮನಸ್ಸು, ಸಂಗಾತಿಯಿಂದ ಅನುಕೂಲ, ಭೂ ವ್ಯವಹಾರದಲ್ಲಿ ಲಾಭ,ವರ್ತಕರಿಗೆ ಲಾಭ.

ಸಿಂಹ: ಬಂಗಾರದ ವ್ಯಾಪಾರ ವ್ಯವಹಾರದಲ್ಲಿ ಲಾಭ, ಭಾವನಾತ್ಮಕ ವಿಷಯಗಳಿಂದ ನೋವು, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಉದ್ಯೋಗ ಚಿಂತೆ,ಹೊಸ ಕೆಲಸಗಳು ಸಿಗುವುದು ತಡವಾಗಲಿದೆ,ರಾಜಕಾರಣಿಗಳಿಗೆ ಅಲ್ಪ ಯಶಸ್ಸಿಗೆ ಪರದಾಡಬೇಕಿದೆ. ಕುಟುಂಬದಿಂದಾಗಿ ಹಣವ್ಯಯ.

ಕನ್ಯಾ: ಆರೋಗ್ಯ ಉತ್ತಮ,ಹಣದ ಹರಿವು,ಕುಟುಂಬ ಸೌಖ್ಯ,ಕೆಲಸದ ಒತ್ತಡ ಇರದು, ಯತ್ನ ಪ್ರಯತ್ನಗಳು ಸಫಲ ಆಗದು,ತಡವಾಗುವುದು,ಪತ್ನಿಯಿಂದ ಆರ್ಥಿಕ ಸಹಕಾರ, ಪ್ರಯಾಣದಲ್ಲಿ ಅನುಕೂಲ, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ,ಆಲಸ್ಯ ಇರುವುದು.

ತುಲಾ: ಪ್ರಯಾಣದಿಂದ ಲಾಭ, ವ್ಯವಹಾರದಲ್ಲಿ ಉತ್ತಮ ಅವಕಾಶ, ಉನ್ನತ ವಿದ್ಯಾಭ್ಯಾಸದಲ್ಲಿ ಅನುಕೂಲ, ಆರ್ಥಿಕವಾಗಿ ಚೇತರಿಕೆ.
ಇದನ್ನೂ ಓದಿ:-ಸ್ಮಾರ್ಟ್ ಫೋನ್ ಬ್ಯಾಟರಿ ಏಕೆ ಉಬ್ಬುತ್ತದೆ ಗೊತ್ತೇ?

ವೃಶ್ಚಿಕ: ಉದ್ಯೋಗ ಲಾಭ, ಪಾಲುದಾರಿಕೆಯಲ್ಲಿ ಅನುಕೂಲ, ಸಂಗಾತಿಯಿಂದ ಆರ್ಥಿಕ ಸಹಕಾರ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ.

ಇದನ್ನೂ ಓದಿ:- ಇಂದಿನ ಅಡಿಕೆ ಧಾರಣೆ ಏಷ್ಟಿದೆ? (ಅಕ್ಷರದ ಮೇಲೆ ಕ್ಲಿಕ್ ಮಾಡಿ)

ಧನಸ್ಸು: ಯತ್ನ ಕಾರ್ಯ ವಿಳಂಬ,ತಂದೆಯಿಂದ ಅನುಕೂಲ, ಸಂಗಾತಿಯಿಂದ ಲಾಭ, ಉದ್ಯೋಗದಲ್ಲಿ ಪ್ರಗತಿ, ಲಾಭ ಮತ್ತು ನಷ್ಟ ಸಮವಿದ್ದು ಈ ದಿನ ಮಿಶ್ರ ಫಲ.

ಮಕರ: ಕೆಲಸ ಕಾರ್ಯಗಳಲ್ಲಿ ಅಡೆತಡೆ, ಅನಾರೋಗ್ಯ ಸಮಸ್ಯೆಯಿಂದ ನೋವು, ಶತ್ರುಗಳಿಂದ ಕೂಲಿ ಕಾರ್ಮಿಕರಿಂದ ನಷ್ಟ, ಪೊಲೀಸ್ ಸ್ಟೇಷನ್‍ಗೆ ಅಲೆದಾಟ.

ಕುಂಭ: ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ಸಂಗಾತಿಯಿಂದ ಅನುಕೂಲ, ವಾಹನ ಖರೀದಿಯ ಆಲೋಚನೆ, ಭವಿಷ್ಯದ ಚಿಂತೆ.

ಇದನ್ನೂ ಓದಿ:-ಹವಾಮಾನ ವರದಿ|ರಾಜ್ಯದಲ್ಲಿ ಮುಂದುವರೆಯಲಿದೆ ಮಳೆ

ಮೀನ: ಕುಟುಂಬ ಸೌಖ್ಯ,ಗುತ್ತಿಗೆದಾರರಿಗೆ ಉತ್ತಮ ಅವಕಾಶ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ವ್ಯಾಪಾರಿಗಳಿಗೆ ಲಾಭ,ಅಧಿಕಾರಿಗಳಿಂದ ಸಹಕಾರ, ಅನಾರೋಗ್ಯ,ಮಧ್ಯಮ ಮಿಶ್ರಫಲ.

ಇದನ್ನೂ ಓದಿ:-ಗೃಹಲಕ್ಷ್ಮಿ ಯೋಜನೆ ಎಫೆಕ್ಟ್ |ಬ್ಯಾನರ್ ಅಳವಡಿಕೆ ಸಚಿವ ಪ್ರಿಯಾಂಕ ಖರ್ಗೆಗೆ ₹5000 ದಂಡ ವಿಧಿಸಿದ ಪಾಲಿಕೆ
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!